ಬೆಂಗಳೂರು:ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಶುಕ್ರವಾರ “ಫರ್ನೀಚರ್ ಆ್ಯಂಡ್​ ಹೋಮ್​ ಇಂಟೀರಿಯರ್​ ಎಕ್ಸ್​ಪೋ-2022”ಗೆ ಐಪಿಎಸ್​ ಅಧಿಕಾರಿ ಡಾ.ಅಮರ್ ಕುಮಾರ್ ಪಾಂಡೆ ಚಾಲನೆ ನೀಡಿದರು.
ದಿಗ್ವಿಜಯನ್ಯೂಸ್​ಚಾನಲ್​ ಮತ್ತುವಿಜಯವಾಣಿಮಾಧ್ಯಮ ಸಹಯೋಗದಲ್ಲಿ ಮತ್ತುಯುನಿಲೆಟ್​ ಸಹಭಾಗಿತ್ವದಲ್ಲಿ ಆಯೋಜಿಸಿರುವ ಫರ್ನಿಚರ್ ಆ್ಯಂಡ್​ ಹೋಮ್​ ಇಂಟೀರಿಯರ್​ ಎಕ್ಸ್​ಪೋ ಮಾ.4ರಿಂದ ಮಾ.7ರ ವರೆಗೆ ನಡೆಯಲಿದ್ದು, ಮೊದಲ ದಿನವೇ ಎಕ್ಸ್ ಪೋಗೆ ಜನ ಸಾಗರವೇ ಹರಿದು ಬರ್ತಿದೆ.

ಒಂದೇ ಸೂರಿನಡಿ ಇಟಾಲಿಯನ್​ ಡಿಸೈನರ್​ ಸೋಫಾಗಳು, ಕಚೇರಿಗೆ ಬೇಕಾದ ಪೀಠೋಪಕರಣಗಳು, ಕಾರ್ಪೆಟ್​ಗಳು, ಬೆಡ್​ರೂಮ್​ ಸೆಟ್​ಗಳು, ವಾಲ್​ಫ್ರೇಮ್​ಗಳು, ಮಸಾಜ್​ ಚೇರ್ಗಳು, ಮ್ಯಾಟ್ರೆಸೆಸ್​ (ಹಾಸಿಗೆ), ಆರಾಮದಾಯಕ ಸೋಫಾಗಳು, ಡೈನಿಂಗ್​ ಸೆಟ್​ಗಳು, ಗಾರ್ಡನ್​ ಪೀಠೋಪಕರಣಗಳು, ಆರ್ಟಿಫಿಷಿಯಲ್​ ಹೂವುಗಳು, ಡೆಕೋರೇಟಿವ್​ ವಸ್ತುಗಳು, ಟೀಕ್​ವುಡ್​ ಪೀಠೋಪಕರಣಗಳು, ಫ್ರಿಡ್ಜ್, ವಾಷಿಂಗ್​ ಮಷಿನ್​, ಟಿವಿ, ಎಸಿ ಸೇರಿ ಹಕವು ಎಲೆಕ್ಟ್ರಾನಿಕ್ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇದೆ. ಉತ್ತಮ ಗುಣಮಟ್ಟದ ಫರ್ನೀಚರ್​ಗಳು ಮತ್ತು ಒಳಾಂಗಣ ವಿನ್ಯಾಸದ ಪರಿಕರಗಳು ಒಂದೇ ವೇದಿಕೆಯಲ್ಲಿ ಲಭ್ಯವಿರುವುದನ್ನ ಕಂಡು ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಎಕ್ಸ್​ಪೋ ಬರುವವರಿಗೆ ಉಚಿತ ಪ್ರವೇಶ ಮತ್ತು ಉಚಿತ ಪಾರ್ಕಿಂಗ್ ವ್ಯವಸ್ಥೆ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + six =
Remember me
