ಗದಗ: ‌ಲಕ್ಕುಂಡಿ ಗ್ರಾಮದ ಮನೆಯಲ್ಲಿ ಮಾ.16ರಂದು ಪೊಲೀಸ್​ ಪೇದೆ ಪಿ.ಸಿ. ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಇಬ್ಬರು ಪತ್ರಕರ್ತರು ಮತ್ತು ಓರ್ವ ಎಎಸ್​ಐ ಸೇರಿ 9 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಸಾವಿಗೂ ಮುನ್ನ ಪೇದೆ ಪಿ.ಸಿ. ಪಾಟೀಲ್ ಬರೆದಿಟ್ಟ ನಾಲ್ಕು ಪುಟದ ಡೆತ್​ನೋಟ್​ನಲ್ಲಿ ಇಬ್ಬರು ಪತ್ರಕರ್ತರು ಕೊಟ್ಟ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ, ಓರ್ವ ಎಎಸ್​ಐ ಸೇರಿ ಐವರು ಪೊಲೀಸರಿಂದಲೂ ತನಗಾದ ಹಿಂಸೆ ಬಗ್ಗೆಯೂ ವಿವರಿಸಿದ್ದಾರೆ. ಮೃತರ ತಂದೆ ಚೆನ್ನವೀರಗೌಡ ಈ 9 ಜನರ ವಿರುದ್ಧ ದೂರು ನೀಡಿದ್ದಾರೆ.
ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್​ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸಿದ್ದ ಪಿ.ಸಿ.ಪಾಟೀಲ್​, ಮಾ.16ರಂದು ಮನೆಯಲ್ಲೇ ನೇಣಿಗೆ ಶರಣಾಗಿದ್ದರು. ಮನೆಯಲ್ಲಿ ಡೆತ್​ನೋಟ್​ ಕೂಡ ಪತ್ತೆಯಾಗಿದೆ. ತನ್ನ ಸಾವಿಗೆ ಸ್ಥಳೀಯ ಪತ್ರಿಕೆ ವರದಿಗಾರ ಗಿರೀಶ್ ಕುಲಕರ್ಣಿ, ರಾಜ್ಯ ಮಟ್ಟದ ಖಾಸಗಿ ಸುದ್ದಿ ವಾಹಿನಿಯೊಂದರ ಗದಗ ವರದಿಗಾರ ಭೀಮನಗೌಡ ಪಾಟೀಲ್‌, ಬೆಟಗೇರಿ ಬಡಾವಣೆ ಠಾಣೆಯ ಎಎಸ್ಐ ಪುಟ್ಟಪ್ಪ ಕೌಜಲಗಿ, ಪೇದೆಗಳಾದ ಸಿ.ಆರ್. ನಾಯಕರ, ದಾದಾಪೀರ್ ಮಜಲಾಪೂರ, ಶರಣಪ್ಪ ಅಂಗಡಿ, ಅಂದಪ್ಪಾ ಹಂಜಿ ಹಾಗೂ ಹಣ ಡಬ್ಲಿಂಗ್ ಕೇಸ್​ನ ಆರೋಪಿ ವಿಠ್ಠಲ ಹಬೀಬ್, ಗುರುರಾಜ ತಳ್ಳಿಹಾಳ ಕಾರಣ ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆ.
ಏನಿದು ಪ್ರಕರಣ?:ಹಣ ಡಬ್ಲಿಂಗ್ ಕೇಸ್​ನಲ್ಲಿ ವಿಠ್ಠಲ ಹಬೀಬ್, ಗುರುರಾಜ ತಳ್ಳಿಹಾಳ ಸಿಕ್ಕಿಬಿದ್ದಿದ್ದರು. ಇವರಿಂದ ಹಣ ವಸೂಲಿ ಮಾಡಿ ಹಣ ಕಳೆದುಕೊಂಡ ಸಂತ್ರಸ್ತರಿಗೆ ಪೊಲೀಸರು ಹಣ ಕೊಡಿಸಿದ್ದರು. ಈ ವೇಳೆ ಆರೋಪಿ ವಿಠ್ಠಲ ಹಬೀಬ್ ಅವರ ಸಹೋದರಿ ಜತೆ ಪೇದೆ ಪಾಟೀಲ್​ ನಡುವೆ ಸ್ನೇಹ ಬೆಳೆದಿತ್ತು ಎನ್ನಲಾಗಿದೆ. ಹಣಕ್ಕಾಗಿ ಪಾಟೀಲ್​ರ ಹಿಂದೆ ಬಿದ್ದ ಪತ್ರಕರ್ತರಿಬ್ಬರು ಅವರ ಪಾಟೀಲ್​ರ ಖಾಸಗಿ ದೃಶ್ಯ ಮತ್ತು ಫೋಟೋವನ್ನು ಸೆರೆಹಿಡಿದು ಕೊಟ್ಟ ಕಾಟ ಅಷ್ಟಿಷ್ಟಲ್ಲ. ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡಿ ಹಿಂಸಿಸಿದ್ದಾರೆ. ಲಕ್ಷಾಂತರ ಹಣ ಪೀಕಿದ್ದಾರೆ. ಮತ್ತಷ್ಟು ಹಣಕ್ಕೆ ಪೀಡಿಸಿದ್ದರು ಎನ್ನಲಾಗಿದೆ.
ಪತ್ರಕರ್ತರಾದ ಗಿರೀಶ್ ಕುಲಕರ್ಣಿ, ಭೀಮನಗೌಡ ಪಾಟೀಲ್‌ ಮತ್ತು ಪೊಲೀಸ್ ಸಿಬ್ಬಂದಿ ಸೇರಿ ಒಂಬತ್ತು ಜನರ ಹೆಸರನ್ನು ಡೆತ್​ನೋಟ್​ನಲ್ಲಿ ಪಾಟೀಲ್​ ಉಲ್ಲೇಖಿಸಿದ್ದಾರೆ. ಇದರ ಆಧಾರದ ಮೇಲೆ ಈ 9 ಜನರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಎ1 ಆರೋಪಿ ಗಿರಿಶ್ ಕುಲಕರ್ಣಿ, ಎ2 ಆರೋಪಿ ವಿಠಲ್ ಹಬೀಬ್, ಎ3 ಆರೋಪಿ ಗುರುರಾಜ್ ತಳ್ಳಿಹಾಳ ಎಂಬುವರನ್ನು ಬಂಧಿಸಲಾಗಿದೆ.
ಮೃತ ಪೇದೆಗೆ ಇಬ್ಬರು ಮಕ್ಕಳು, ಪತ್ನಿ ಮತ್ತು ತಂದೆ-ತಾಯಿ ಇದ್ದಾರೆ. ಚೆನ್ನವೀರಗೌಡ ದಂಪತಿಗೆ ಪಿ.ಸಿ.ಪಾಟೀಲ್​ಒಬ್ಬನೇ ಮಗ. ಇದ್ದೊಬ್ಬ ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಅತ್ತ ಪತ್ನಿ-ಮಕ್ಕಳ ನೋವು ನೋಡಿದ್ರೆ ಮನಕಲಕುತ್ತೆ.
ಹೃದಯಾಘಾತ: ಮುಧೋಳ ತಹಸೀಲ್ದಾರ್ ನಿಧನ

ಇದು JAMES ರಹಸ್ಯ: ನಿಮ್ಮ ಕಣ್ಣಲ್ಲಿ ನೀರು ತರಿಸುತ್ತೆ ಶೈನ್​ ಶೆಟ್ಟಿ ಬಿಚ್ಚಿಟ್ಟ ರೀಲ್​ ಮತ್ತು ರಿಯಾಲಿಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + nine =
Remember me
