ಗದಗ:4 ವರ್ಷದ ಹಿಂದೆ ಹಿಂದು ಯುವತಿಯನ್ನು ಮದ್ವೆಯಾಗಿದ್ದ ಅನ್ಯ ಧರ್ಮದ ವ್ಯಕ್ತಿಯೊಬ್ಬ, ಈಗ ಆಕೆಯನ್ನ ನಡುರಸ್ತೆಯಲ್ಲೇ ಅಟ್ಟಾಡಿಸಿ 20ಕ್ಕೂ ಹೆಚ್ಚು ಬಾರಿ ಅಮಾನುಷವಾಗಿ ಮಚ್ಚಿನಿಂದ ಹೊಡೆದು ಕೊಲ್ಲಲು ಯ್ನತ್ನಿಸಿದ್ದಾನೆ. ಗಂಡನಿಂದ ಮಾರಣಾಂತಿಕ ಹಲ್ಲೆಗೊಳಗಾದ ಪತ್ನಿಯೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಇಂತಹ ದುರ್ಘಟನೆ ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದ್ದು, ಭೀಕರ ಹಲ್ಲೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಯಾವ ಶತ್ರೂಗೂ ಬೇಡಪ್ಪ ಈ ನರಕ ಎಂದು ಮಮ್ಮಲಮರುಗಿದ್ದಾರೆ. ಅಪೂರ್ವ ಶಿರೂರ(26) ಅಲಿಯಾಸ್​ ಅರ್ಫಾನ್ ಬಾನು ಹಲ್ಲೆಗೊಳಗಾದ ಮಹಿಳೆ. ಈಕೆಯ ಗಂಡ ಇಜಾಜ್ (38) ಆರೋಪಿ. ಹಿಂದೂ ಯುವತಿ ಅಪೂರ್ವಳನ್ನು ಪ್ರೀತಿಸಿ ಹುಬ್ಬಳ್ಳಿ ಕೋಲಪೆಟೆಯ ನಿವಾಸಿ ಮುಸ್ಲಿಂ ಧರ್ಮದ ಇಜಾಜ್ 4 ವರ್ಷದ ಹಿಂದೆ ಮದ್ವೆಯಾಗಿದ್ದ. ಆದರೆ, ಈತನಿಗೆ ಈಗಾಗಲೇ ಬೇರೊಬ್ಬಳ ಜತೆ ಮದ್ವೆ ಆಗಿತ್ತು. ಆದರೂ ಈ ಸತ್ಯ ಮುಚ್ಚಿಟ್ಟು ಅಪೂರ್ವಳನ್ನು ಮದ್ವೆ ಆಗಿದ್ದ.
ಮದ್ವೆಯಾದ ಬಳಿಕ ಅಪೂರ್ವಗೆ ಅರ್ಫಾನ್ ಬಾನು ಎಂಬ ಹೆಸರನ್ನೂ ಇಟ್ಟಿದ್ದ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ದಂಪತಿ ನಡುವೆ ಕೌಟುಂಬಿಕ ಕಲಹ ಶುರುವಾಗಿತ್ತು. ಇಜಾಜ್​ನಿಂದ ಮೋಸ ಹೋಗಿರುವ ವಿಚಾರ ಹಾಗೂ ಈತನಿಗೆ ತಾನು 2ನೇ ಪತ್ನಿ ಎಂಬ ಸತ್ಯ ತಿಳಿದ ಅಪೂರ್ವ ಗಂಡನಿಂದ ದೂರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ನಾಲ್ಕೈದು ತಿಂಗಳಿಂದ ಗಂಡನಿಂದ ದೂರವಾಗಿದ್ದ ಅಪೂರ್ವ, ಗುರುವಾರ ಬೆಳಗ್ಗೆ ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್​ನಲ್ಲಿ ದ್ವಿಚಕ್ರ ವಾಹನ ಚಾಲನೆಯ ಮಾಡುವುದನ್ನ ಕಲಿಯುತ್ತಿದ್ದಳು. ಅಲ್ಲಿಗೆ ಮಚ್ಚು ಹಿಡಿದು ಬಂದ ಇಜಾಜ್​, ಪತ್ನಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆಕೆಯನ್ನು ಕೂಡಲೇ ಸ್ಥಳೀಯರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಎಸ್ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಮಕೂರು ಮಾಜಿ ಕಾರ್ಪೋರೇಟರ್​ನ ಕಾಮದಾಹಕ್ಕೆ ಯುವತಿ ಬಲಿ! ಬೆಚ್ಚಿಬೀಳಿಸುತ್ತೆ ಕೊನೇ ಕ್ಷಣದಲ್ಲಿ ಆಕೆ ಬಾಯ್ಬಿಟ್ಟ ರಹಸ್ಯ

ಮಂಡ್ಯದಲ್ಲಿ ಇದೆಂಥಾ ಅಸಹ್ಯ? ಗ್ರಾಮದೇವತೆ ಹಬ್ಬದಲ್ಲಿ ಬಾಲಕನನ್ನು ಎಳೆದಾಡಿ ಅಶ್ಲೀಲವಾಗಿ ವರ್ತಿಸಿದ ನರ್ತಕಿಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 2 =
Remember me
