ಗದಗ​:ಮಹಿಳಾ ಪೊಲೀಸ್​ ಸಬ್ ​ಇನ್​ಸ್ಪೆಕ್ಟರ್​ ಮಗಳೊಬ್ಬಳು ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿ ಮದುವೆ ಮಾಡಿಕೊಂಡ ಪ್ರಕರಣವೀಗ ಎಸ್ಪಿ ಅಂಗಳಕ್ಕೆ ಬಂದಿದೆ. ನಾವಿಬ್ಬರೂ 7 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ನಮ್ಮಿಬ್ಬರ ಮದುವೆಗೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹಾಗಾಗಿ ನಾವು ಬೇರೆಡೆ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಪಿಎಸ್​ಐ ಆಗಿರುವ ನನ್ನ ತಾಯಿಯೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಅವರು ನಮ್ಮನ್ನು ಬದುಕಲು ಬಿಡಲ್ಲ. ನಮಗೆ ರಕ್ಷಣೆ ಕೊಡಿ ಎಂದು ತಾಯಿ ವಿರುದ್ಧವೇ ಯುವತಿ ಎಸ್​ಪಿಗೆ ದೂರು ಕೊಟ್ಟಿದ್ದಾಳೆ.
ರಾಜೀವ್ ಗಾಂಧಿ ಪೊಲೀಸ್ ಠಾಣೆಯ ಸಬ್​ ಇನ್ಸ್​​ಪೆಕ್ಟರ್​ ರೇಣುಕಾ ಮುಂಡೆವಾಡಗಿ ಮತ್ತು ಅಗ್ನಿಶಾಮಕ ಇಲಾಖೆಯ ಹವಾಲ್ದಾರ್​​ ರಮೇಶ್​ ದಂಪತಿಯ ಏಕೈಕ ಮಗಳು ಮೇಘಾ 6 ತಿಂಗಳ ಹಿಂದೆ ಮನೆಬಿಟ್ಟು ಹೋಗಿ ಕೀರ್ತನಾಥ ಎಂಬಾತನೊಂದಿಗೆ ಸಬ್​ ರಿಜಿಸ್ಟರ್​ ಕಚೇರಿಯಲ್ಲಿ ಮದುವೆಯಾಗಿದ್ದಾಳೆ. ಈ ವಿಚಾರ ತಿಳಿದು ಗರಂ ಆದ ತಾಯಿ ರೇಣುಕಾ ಮತ್ತು ತಂದೆ ರಮೇಶ್ ಇಬ್ಬರೂ ತಮಗೆ ​ಜೀವ ಬೆದರಿಕೆ ಹಾಕಿದ್ದಾರೆ ಎಂದು ಮೇಘಾ ಗದಗ ಎಸ್​ಪಿ ಎನ್.​ಯತೀಶ್​ ಅವರಿಗೆ ದೂರು ನೀಡಿದ್ದಾಳೆ.
ಮೇಘಾ ಮತ್ತು ಕೀರ್ತನಾಥ ಇಬ್ಬರ ಪ್ರೀತಿ ವಿಚಾರ ಮನೆಗೆ ತಿಳಿದಿತ್ತು. ಜಾತಿ ಬೇರೆ ಬೇರೆ ಆದ ಕಾರಣ ಮದುವೆಗೆ ಕುಟುಂಬಸ್ಥರು ಒಪ್ಪಿರಲಿಲ್ಲವಂತೆ. ಕರೊನಾ ಲಾಕ್​ಡೌನ್​ ವೇಳೆ ಮೇಘಾಳಿಗೆ ಮದುವೆ ಮಾಡಲು ಪೋಷಕರು ಬೇರೆ ಕಡೆ ಸಂಬಂಧ ನೋಡುತ್ತಿದ್ದರಂತೆ. ಇದನ್ನರಿತ ಮೇಘಾ ಮನೆ ಬಿಟ್ಟು ಪ್ರಿಯಕರನೊಂದಿಗೆ ಹೋಗಿದ್ದಳು. 2020ರ ಡಿಸೆಂಬರ್​ 2ರಂದು ಇವರಿಬ್ಬರೂ ಮದುವೆ ಮಾಡಿಕೊಂಡಿದ್ದು, ಮುಂಡರಗಿಯ ಸಬ್​ ರಿಜಿಸ್ಟರ್​ ಕಚೇರಿಯಲ್ಲಿ 2021ರ ಜನವರಿ 5ರಂದು ರಿಜಿಸ್ಟರ್​ ಮಾಡಿಸಿದ್ದರು. ಬಳಿಕ ಗೋವಾದಲ್ಲಿ ತಂಗಿದ್ದರು. ಈ ವಿಚಾರ ತಿಳಿದ ಮೇಘಾ ಪಾಲಕರು ಕರೆ ಮಾಡಿ ಬೆದರಿಕೆ ಹಾಕಿದ್ದರಿಂದ ಮೊಬೈಲ್​ ಸ್ವಿಚ್​ ಆಫ್​​ ಮಾಡಿಕೊಂಡಿದ್ದರಂತೆ. ಇದೀಗ ಊರಿಗೆ ವಾಪಸ್​ ಬರುತ್ತಿದ್ದೇವೆ. ನಮಗೆ ರಕ್ಷಣೆ ಕೊಡಬೇಕು ಎಂದು ಯುವತಿ ಎಸ್​ಪಿಗೆ ಮನವಿ ಮಾಡಿದ್ದಾಳೆ. ಪ್ರೇಮಿಗಳಿಗೆ ರಕ್ಷಣೆ ನೀಡುವುದಾಗಿ ಎಸ್​ಪಿ ಭರವಸೆ ನೀಡಿದ್ದಾರೆ.
ಪ್ರಿಯಕರನ ಮನೆಯಲ್ಲಿ ಯುವತಿ ಶವ ಪತ್ತೆ! ಮೃತಳ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ

ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

ಭಿಕ್ಷೆ ಬೇಡುತ್ತಿದ್ದ ವೃದ್ಧೆಗೆ ಅಚ್ಛೇ ದಿನ್​! ನೆಲಮಂಗಲ ತಹಸೀಲ್ದಾರ್ ಮಂಜುನಾಥ್​ರ ಕಾರ್ಯಕ್ಕೊಂದು ಸಲಾಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 12 =
Remember me
