ಬೆಂಗಳೂರು:ದೊಡ್ಡಬಳ್ಳಾಪುರದಲ್ಲಿ ಶನಿವಾರ ಆಯೋಜಿಸಿರುವ ‘ಜನಸ್ಪಂದನ’ ಕಾರ್ಯಕ್ರಮಕ್ಕೆ ಯಾವುದೇ ವಿಘ್ನ ಬಾರದಿರಲೆಂದು ಸಮಾರಂಭದ ವೇದಿಕೆ ಮೇಲೆ ಶುಕ್ರವಾರ ಮಹಾಗಣಪತಿ ಹೋಮ ನಡೆಯಿತು.
ಕಾರ್ಯಕ್ರಮದ ಉಸ್ತುವಾರಿಗಳಲ್ಲಿ ಒಬ್ಬರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸೇವಾ ಕರ್ತೃವಾಗಿ ಭಾಗವಹಿಸಿದ್ದು, ತಲಾ ಒಬ್ಬ ಬ್ರಹ್ಮವರ್ಣಿ, ಆಚಾರ್ಯ ವರ್ಣಿ‌ ನೇತೃತ್ವದಲ್ಲಿ ಎಂಟು ಜನ ಋತ್ವಿಜರು ಹೋಮ ನಿರ್ವಹಣೆಗೆ‌ ನೆರವಾದರು.
ಬಿಜೆಪಿ ಯುವ ಪ್ರವೀಣ್ ನೆಟ್ಟಾರು ಸಾವಿನ ಹಿನ್ನೆಲೆ ಜು.28ರಂದು ಮೊದಲ ಬಾರಿಗೆ ಮುಂದೂಡಿಕೆಯಾಯಿತು. ನಂತರ ಬಯಲುಸೀಮೆ ಕಾರ್ಯಕರ್ತರು, ಮುಖಂಡರ ಒತ್ತಾಸೆ ಮೇರೆಗೆ ಸೆ.8ರಂದು ಸಮಾವೇಶ ಆಯೋಜಿಸಲು ಒಪ್ಪಿಗೆ ನೀಡಲಾಗಿತ್ತು. ಎಲ್ಲ ಸಿದ್ಧತೆಗಳಾಗಿದ್ದವು. ಆದರೆ ಸೆ.6ರಂದು ಸಚಿವ ಉಮೇಶ್ ಕತ್ತಿ ನಿಧನದಿಂದ ಎರಡನೇ ಬಾರಿ ಮುಂದೂಡಿಕೆಯಾಯಿತು.
ಈ ನಡುವೆ ಆ.28ರಂದು ಏರ್ಪಡಿಸುವ ಚಿಂತನೆ ನಡೆದಿತ್ತಾದರೂ ವರಿಷ್ಠರು ಸೆ.8ಕ್ಕೆ ಅಸ್ತು ಎಂದರು. ಕತ್ತಿ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಸೆ.11ಕ್ಕೆ ಮುಂದೂಡಿಕೆಯಾಯಿತು. ಆದರೆ ಸೆ.11ರಿಂದ ಪಿತೃಪಕ್ಷ ಶುರುವಾಗಲಿದ್ದು, ಈ ಅವಧಿಯಲ್ಲಿ ಕಾರ್ಯಕ್ರಮ ಮಾಡುವುದು ಒಳ್ಳೆಯದಲ್ಲವೆಂಬ ಸಲಹೆಗೆ ಓಗೊಟ್ಟು ಭಾನುವಾರದ ಬದಲಿಗೆ ಶನಿವಾರವೇ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.
ಒಂದಿಲ್ಲೊಂದು ಕಾರಣದಿಂದಾಗಿ ಪದೇಪದೆ ಮುಂದಕ್ಕೆ ಹೋದ ಹಿನ್ನೆಲೆಯಲ್ಲಿ ಮತ್ತೆ ವಿಘ್ನ ಉಂಟಾಗದಿರಲೆಂದು ಮಹಾ ಗಣಪತಿ ಹೋಮ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
ಅನೇಕ ಪ್ರಥಮಗಳ ಒಡತಿ ರಾಣಿ ಎಲಿಜಬೆತ್​! ಇಲ್ಲಿದೆ ಜೀವನಪಥ… ತನ್ನ ಅಜ್ಜಿ ವಿಕ್ಟೋರಿಯಾ ಹೆಸರಲ್ಲಿದ್ದ ದಾಖಲೆಯನ್ನೂ ಮುರಿದಿದ್ದರು

ಕಲಾತ್ಮಕ ಸಹಿಯ ಶಾಂತಯ್ಯ ಇನ್ನಿಲ್ಲ: ಸಾವಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಉಪನೋಂದಣಾಧಿಕಾರಿ

ಯುವತಿ ಜತೆ ಮೈಸೂರಿನ ಲಾಡ್ಜ್​ನಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eighteen =
Remember me
