ಯಾದಗಿರಿ:ರಾಜ್ಯದಲ್ಲಿ ನಿತ್ಯ ಒಂದಲ್ಲ ಒಂದು ಗಾಂಜಾ ಪ್ರಕರಣ ಪತ್ತೆಯಾಗುತ್ತಲೇ ಇದೆ. ಪೊಲೀಸರ ಮಿಂಚಿನ ಕಾರ್ಯಚರಣೆ ನಡುವೆಯೂ ಅಕ್ರಮ ವ್ಯವಹಾರಕ್ಕೆ ಖದೀಮರು ಅನುಸರಿಸುತ್ತಿರುವ ಮಾರ್ಗ ಆಘಾತ ಹುಟ್ಟಿಸಿದೆ. ಚಾಕೋಲೆಟ್​ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಶಹಾಪುರ ನಗರದ ಪಾನ್​ಶಾಪ್​ಗಳಲ್ಲಿ ಗಾಂಜಾ ಮಿಶ್ರಿತ ಚಾಕೋಲೆಟ್​ ಮಾರಾಟ ಮಾಡುತ್ತಿದ್ದ ಜಾಲವನ್ನು ಅಬಕಾರಿ ಪೊಲೀಸರು ಶುಕ್ರವಾರ ಭೇದಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಎರಡು ಪಾನ್​ಶಾಪ್​ಗಳಲ್ಲಿ ಆನಂದ ಮುನಕ್ಕಾ ಹೆಸರಿನ ಹಳದಿ ಪ್ಯಾಕೆಟ್​ನಲ್ಲಿ ಗಾಂಜಾಮಿಶ್ರಿತ ಚಾಕೋಲೆಟ್​ (ಗುಳಗಿ) ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಡಿವೈಎಸ್​ಪಿ ಮಲ್ಲಿಕಾರ್ಜುನ ರೆಡ್ಡಿ ನೇತೃತ್ವದ ತಂಡ, ಮಹೇಶ ಮತ್ತು ರಾಜು ಪಾನ್​ಶಾಪ್​ಗಳಲ್ಲಿ 300 ಸ್ಯಾಚೆಟ್​ ವಶಪಡಿಸಿಕೊಂಡಿತು. ಅಲ್ಲದೆ 2 ಕೆಜಿ ಗಾಂಜಾಮಿಶ್ರಿತ ಚಾಕೋಲೆಟ್​ಗಳನ್ನು ಪತ್ತೆ ಹಚ್ಚಿ ಉತ್ತರ ಪ್ರದೇಶ ಮೂಲದ ಜಿತೇಂದ್ರ ಪ್ರತಾಪಸಿಂಗ್​ ಹಾಗೂ ಮೋಹಿತಕುಮಾರ್​ ಎಂಬುವರನ್ನು ಬಂಧಿಸಿದೆ.
ಚಾಕೋಲೆಟ್​ ರೂಪದಲ್ಲಿ ಗಾಂಜಾ ಮಿಶ್ರಣ ಮಾರಾಟ ಮಾಡಿದರೆ ಯಾರಿಗೂ ಅನುಮಾನ ಬರಲ್ಲ ಎಂಬುದು ಎಂಬ ಪ್ಲಾನ್​ ಆರೋಪಿಗಳದ್ದಾಗಿತ್ತು. ಇದನ್ನು ತಿಂದ ಯುವಕರು ಕೆಲ ಹೊತ್ತು ನಶೆಯಲ್ಲಿ ತೇಲಾಡುತ್ತಿದ್ದರು. ಜಿಲ್ಲೆಯಲ್ಲಿ ಇಂಥದ್ದೊಂದು ವ್ಯವಸ್ಥಿತ ಜಾಲ ಸಕ್ರಿಯವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿವೈಎಸ್​ಪಿ ಮಲ್ಲಿಕಾರ್ಜುನ ರೆಡ್ಡಿ ತಿಳಿಸಿದ್ದಾರೆ. ಅಬಕಾರಿ ಪಿಎಸ್​ಐ ಕೇದಾರನಾಥ, ಸಿಬ್ಬಂದಿ ಮಹ್ಮದ್​ ರಫಿ, ಪ್ರವಿಣಕುಮಾರ, ಚಂದ್ರಶೇಖರ, ಅನಿಲಕುಮಾರ, ಜಟ್ಟೆಪ್ಪ, ಧೋಂಡಿಬಾ, ಕಾಸೀಂ ಪಟೇಲ್​ ಕಾರ್ಯಾಚರಣೆ ತಂಡದಲ್ಲಿದ್ದರು.
ತನಿಖೆಯಲ್ಲಿ ದಕ್ಷತೆ ಮೆರೆದ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆಯ ಪದಕ

ಎಸಿಬಿ ರಚನೆಯನ್ನೇ ರದ್ದುಪಡಿಸಿದ ಹೈಕೋರ್ಟ್: ಎಲ್ಲ ಕೇಸು ಲೋಕಾಯುಕ್ತಕ್ಕೆ ವರ್ಗಾಯಿಸಲು ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − seven =
Remember me
