ತುಮಕೂರು:ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಕೈಗೊಂಡಿರುವ ಪಂಚರತ್ನ ರಥಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಕೈಜೋಡಿಸುತ್ತಿದ್ದಾರೆ. ಹೋದಲ್ಲೆಲ್ಲಾ ವಿಶೇಷವಾದ ಹಾರ ಹಾಕುವ ಮೂಲಕ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ತಮ್ಮ ಗ್ರಾಮಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಕಬ್ಬಿನ ಹಾರ, ರಾಗಿ ಹಾರ, ದಾಳಿಂಬರ ಹಾರ, ಜೋಳದ ಹಾರ ಸೇರಿದಂತೆ ವಿಭಿನ್ನ ಬಗೆಯ ಹಾರ ಹಾರಿ ಸ್ವಾಗತಿಸಲಾಗುತ್ತಿತ್ತು.
ಇದೀಗ ಕುಮಾರಸ್ವಾಮಿ ಅವರನ್ನು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮಕ್ಕಳ ಸ್ಕೂಲ್ ಬ್ಯಾಗ್ ಹಾರ ಹಾಕಿ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ. ಈ ವೇಳೆ ದಾರಿಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಗ್ರಾಮಸ್ಥರು ಸ್ಕೂಲ್ ಬ್ಯಾಗ್​ಗಳನ್ನು ಒಟ್ಟು ಮಾಡಿ, ಬೃಹತ್ ಗಾತ್ರದ ಹಾರ ತಯಾರಿಸಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕು ಎಂಬ ಸಂದೇಶವನ್ನು ಇಲ್ಲಿನ ಗ್ರಾಮಸ್ಥರು ನೀಡಿದ್ದಾರೆ.
ಪಂಚರತ್ನ ರಥಯಾತ್ರೆಯಲ್ಲಿ ಇಂದು ವಿಶೇಷ ದೃಶ್ಯವೊಂದು ನನ್ನ ಗಮನ ಸೆಳೆಯಿತು. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕಂಚಿಗಾನಹಳ್ಳಿಯಲ್ಲಿ ಯಾತ್ರೆ ನಡೆಸುವಾಗ ಶಾಲಾ ಮಕ್ಕಳ ಬ್ಯಾಗುಗಳಿಂದ ತಯಾರಿಸಿದ್ದ ಮಾಲೆ ಹಾಕಿ ಬರಮಾಡಿಕೊಳ್ಳಲಾಯಿತು1/2#ಪಂಚರತ್ನ_ರಥಯಾತ್ರೆ#ಚಿಕ್ಕನಾಯಕನಹಳ್ಳಿ#ತುಮಕೂರುpic.twitter.com/iW0UDRBDeC— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy)December 28, 2022
ಪಂಚರತ್ನ ರಥಯಾತ್ರೆಯಲ್ಲಿ ಇಂದು ವಿಶೇಷ ದೃಶ್ಯವೊಂದು ನನ್ನ ಗಮನ ಸೆಳೆಯಿತು. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕಂಚಿಗಾನಹಳ್ಳಿಯಲ್ಲಿ ಯಾತ್ರೆ ನಡೆಸುವಾಗ ಶಾಲಾ ಮಕ್ಕಳ ಬ್ಯಾಗುಗಳಿಂದ ತಯಾರಿಸಿದ್ದ ಮಾಲೆ ಹಾಕಿ ಬರಮಾಡಿಕೊಳ್ಳಲಾಯಿತು1/2#ಪಂಚರತ್ನ_ರಥಯಾತ್ರೆ#ಚಿಕ್ಕನಾಯಕನಹಳ್ಳಿ#ತುಮಕೂರುpic.twitter.com/iW0UDRBDeC
ಚಿಕ್ಕನಾಯಕನ ಹಳ್ಳಿಗ್ರಾಮಸ್ಥರು ವಿಭಿನ್ನ ಕಲ್ಪನೆಯಲ್ಲಿ ಸಿದ್ಧಪಡಿಸಿರುವ ಸ್ಕೂಲ್ ಬ್ಯಾಗ್​ನ ಹಾರವನ್ನು ಎಚ್​.ಡಿ.ಕುಮಾರಸ್ವಾಮಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್​​ನಲ್ಲಿ, ಪಂಚರತ್ನ ಯೋಜನೆಗಳು ಜನರ ಮನಸ್ಸಿಗೆ ತಟ್ಟಿವೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ. ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮ ಪಂಚರತ್ನ ಯೋಜನೆಯಲ್ಲಿದೆ ಎಂದು ಬರೆದುಕೊಂಡಿದ್ದಾರೆ.
ಗ್ರಾಮಸ್ಥರು ಕುಮಾರಸ್ವಾಮಿ ಅವರನ್ನು ಬರಮಾಡಿಕೊಳ್ಳಲು ಸಿದ್ಧಪಡಿಸಿದ್ದ ಸ್ಕೂಲ್ ಬ್ಯಾಗ್ ಹಾರದಲ್ಲಿ ”ಸರಕಾರಿ ಶಾಲೆಗಳನ್ನು ಹೈಟೆಕ್ ಮಾಡಿಸಿ, ಬಡವರ ಮಕ್ಕಳಿಗೂ ಕಾನ್ವೆಂಟ್ ಶಿಕ್ಷಣ ಬೇಕ್ರಯ್ಯ..” ಎಂದು ಬರೆದಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + nine =
Remember me
