ಬೆಂಗಳೂರು:ಕರೊನಾ ಬಗ್ಗೆ ಹೆದರಬೇಡಿ ಅಂತ ಹೇಳ್ತಾರಲ್ಲ ಅದನ್ನು ಕೇಳಬೇಡಿ. ಕರೊನಾಗೆ ನನ್ನ ಭಾವ ಮತ್ತು ಅವರ ತಂದೆ ಬಲಿಯಾದರು. ಒಂದೇ ದಿನ ನನ್ನ ಕಣ್ಣಾರೆ 6 ಸಾವು ನೋಡಿದೆ. ದಯವಿಟ್ಟು ನಾನು ಹೇಳುತ್ತಿರುವುದನ್ನು ಅರ್ಥ ಮಾಡಿಕೊಳ್ಳಿ. ವಾಸ್ತವ ಬೇರೆಯೇ ಇದೆ. ಇದಕ್ಕೆ ನಾನು ಹಾಗೂ ನನ್ನ ಕುಟುಂಬವೇ ಸಾಕ್ಷಿ… ಎಂದು ಕಿರುತೆರೆ ನಟ ಪವನ್ ಕುಮಾರ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಫೇಸ್​ಬುಕ್​ನಲ್ಲಿ ವಿಡಿಯೋ ಹಾಕಿರುವ ಗಟ್ಟಿಮೇಳ ಧಾರಾವಾಹಿ ನಟ ಪವನ್​, ಆಸ್ಪತ್ರೆಗೆ ಹೋದ್ರೆ ಅಲ್ಲಿ ಏನಾಗ್ತಿದೆ? ಇಷ್ಟೊಂದು ಜನರು ಸಾಯುತ್ತಿರುವುದು ನಿಜಾನಾ? ಸ್ಮಶಾನದಲ್ಲಿ ಯಾಕೆ ಹೆಣಗಳನ್ನು ಸುಡಲು ಸರದಿ ನಿಲ್ಲಬೇಕು ಅನ್ನೋ ಬಗ್ಗೆ ಹೇಳುತ್ತಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಅದು ಕೊಟ್ಟಿದ್ದೀವಿ, ಇದು ಕೊಟ್ಟಿದ್ದೀವಿ ಅಂತಿದೆ. ಆದ್ರೆ ತಾಯಿ ಗರ್ಭದಿಂದ ಮಗು ಹೊರ ಬರುತ್ತಿದ್ದಂತೆ ಆ ಮಗುಗೆ ಹಾಲು ಕುಡಿಯೋಕು ಮೊದಲು ಆಕ್ಸಿಜನ್​ ತೆಗೆದುಕೊಳ್ಳುಂತೆ. ಅಂತಹ ಆಕ್ಸಿಜನ್​ ಅನ್ನೇ ಸರ್ಕಾರ ಸಮರ್ಪಕವಾಗಿ ಕೊಡ್ತಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿರಿಕಾಂಗ್ರೆಸ್​ ಶಾಸಕಿ ಕಲಾವತಿ ಕರೊನಾಗೆ ಬಲಿ
ಕಳೆದ ವರ್ಷದಂತೆ ಈ ವರ್ಷ ಕರೊನಾ ಇಲ್ಲ, ಈ ಬಾರಿ ತುಂಬ ಕೆಟ್ಟದ್ದಾಗಿದೆ. ಸೋಂಕಿನ ಬಗ್ಗೆ ಹೆದರಬೇಡಿ ಅಂತ ಹೇಳ್ತಾರಲ್ಲ ಅದನ್ನು ಕೇಳಬೇಡಿ. ಜನರಿಗೆ ಧೈರ್ಯ ಬರಲಿ ಅಂತ ಹೇಳ್ತಾರೆ ಅಷ್ಟೆ. ಅದು ಭಂಡ ಧೈರ್ಯ ಬಂದು ಅವರೆಲ್ಲ ಆರಾಮಾಗಿ ಓಡಾಡ್ತಾರೆ. ಇನ್ನೊಂದಿಷ್ಟು ಜನರು ಕರೊನಾ ಅಂಟಿಸಿಕೊಳ್ಳುವುದಲ್ಲದೆ ಬೇರೆಯವರಿಗೂ ಅಂಟಿಸುತ್ತಾರೆ ಎಂದು ಪವನ್ ಕುಮಾರ್ ಎಚ್ಚರಿಸಿದ್ದಾರೆ.
ಪವನ್ ಕುಮಾರ್ ಕಿನ್ನರಿ, ಗಟ್ಟಿಮೇಳ, ಆಕೃತಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕರೊನಾ ವೈರಸ್‌ನಿಂದಾಗಿ ಇವರ ಭಾವ ಹಾಗೂ ಭಾವನ ತಂದೆಯನ್ನು ಎರಡು ದಿನದ ಅಂತರದಲ್ಲಿ ಕಳೆದುಕೊಂಡಿದ್ದಾರೆ.

ಕ್ರಿಕೆಟ್​ ಆಟಗಾರ್ತಿ ವೇದಾಕೃಷ್ಣಮೂರ್ತಿ ತಾಯಿ ಕರೊನಾಗೆ ಬಲಿ

VIDEO| ಜನರೇ ನನ್ನನ್ನು ಬೆದರಿಸ್ತಾರೆ, ನಾನೇನು ಮಾಡಲಿ… ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ಶ್ರೀರಾಮುಲು

ಇನ್ನಷ್ಟು ದಿನ ಕರ್ಫ್ಯೂ ಮುಂದುವರಿಕೆ! ಲಾಕ್​ಡೌನ್​ ಸುಳಿವು ಕೊಟ್ಟ ಸಚಿವರು

ಹುಬ್ಬಳ್ಳಿಯಲ್ಲಿ ನಟಿ ಶನಾಯ ಅರೆಸ್ಟ್: ಹೈಸ್ಕೂಲ್​ ಲವ್​ಗೆ ಅಡ್ಡಿಯಾದ ಸೋದರನ ಸಾವಿನ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 8 =
Remember me
