ತುಮಕೂರು:ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಬರುವ ಗಿಫ್ಟ್​ ಕೂಪನ್​ ಆಸೆಗಾಗಿ ಕುರಿಗಾಹಿಯೊಬ್ಬರು 65 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.
ಮಧುಗಿರಿ ತಾಲೂಕು ದೊಡ್ಡೇರಿಯ ರಂಗನಾಥ್​ ಎಂಬಾತ ಗಿಫ್ಟ್​ ಕಾರ್ಡ್​ನ ಸ್ಕ್ರಾಚ್​ ಮಾಡಿದ ವೇಳೆ 12.50 ಲಕ್ಷ ರೂ. ನಗದು ಬಹುಮಾನ ಬಂದಿದ್ದು, ಇದನ್ನು ಪಡೆಯುವ ಆಸೆಗೆ ಈವರೆಗೆ 65 ಸಾವಿರ ರೂ. ಕಳೆದುಕೊಂಡಿದ್ದಾರೆ.
ರಂಗನಾಥ್​ ಅವರ ಮನೆ ವಿಳಾಸಕ್ಕೆ ಪ್ರತಿಷ್ಠಿತ ಕಂಪನಿಯೊಂದರ ಹೆಸರಲ್ಲಿ ಕೂಪನ್​ ಬಂದಿದ್ದು, ನಂತರ ಮೊಬೈಲ್​ ಸಂಖ್ಯೆ 9355059216 ನಿಂದ ಕರೆ ಮಾಡಿ ‘ನಿಮಗೆ ಕೂಪನ್​ ಮೂಲಕ ಬಂದಿರುವ 12.50 ಲಕ್ಷ ರೂಪಾಯಿ ವರ್ಗಾಯಿಸಲು ಜಿಎಸ್​ಟಿ ಹಣ ಪಾವತಿಸಬೇಕು. ಆಗ ನಿಮಗೆ ಹಣ ವರ್ಗಾಯಿಸಲು ಸಾಧ್ಯ’ವೆಂದು ಪುಸಲಾಯಿಸಲಾಗಿದೆ.
ಅದನ್ನು ನಂಬಿ ದೇವನಹಳ್ಳಿಯ ಎಸ್​ಬಿಎಂ ಶಾಖೆ ಖಾತೆ ಸಂಖ್ಯೆ 38500334422 ಹಾಗೂ 36049406861 ಗಳಿಗೆ ಹಂತ ಹಂತವಾಗಿ ಒಟ್ಟು 50,000 ರೂಪಾಯಿಯನ್ನು ರಂಗನಾಥ್​ ವರ್ಗಾಯಿಸಿದ್ದಾರೆ. ಆ ಬಳಿಕ 15,000 ರೂಪಾಯಿಯನ್ನು ಯುಪಿಐ ಟ್ರಾನ್ಸ್​ಫರ್​ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಂಚಕರು, ಬೇರೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ರಂಗನಾಥ್​ ಸೈಬರ್​ ಕ್ರೈಂ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಾಗಿದೆ.
ಬಿಡದಿಯಲ್ಲಿ ನಕಲಿ ಮೊಮ್ಮಗಳನ್ನು ಬ್ಯಾಂಕ್​ಗೆ ಕರೆತಂದು 5 ಲಕ್ಷ ರೂ. ಕಬಳಿಸಿದ ದಂಪತಿ! ಇಂಥವರೂ ಇರ್ತಾರೆ ಹುಷಾರ್!

ಆಷಾಢ ಹಿನ್ನೆಲೆ ತವರಿಗೆ ಬಂದಾಕೆ ದುರಂತ ಅಂತ್ಯ: ಆ ಒಂದು ತಿಂಗಳಲ್ಲಿ ಆಗಬಾರದ್ದೆಲ್ಲಾ ಆಗಿ ಹೋಯ್ತು…

ಎಸಿಬಿ ರಚನೆಯನ್ನೇ ರದ್ದುಪಡಿಸಿದ ಹೈಕೋರ್ಟ್: ಎಲ್ಲ ಕೇಸು ಲೋಕಾಯುಕ್ತಕ್ಕೆ ವರ್ಗಾಯಿಸಲು ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 5 =
Remember me
