ರಾಯಚೂರು:ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಆಂಬುಲೆನ್ಸ್​ನಲ್ಲೇ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.
ಸಿರವಾರ ತಾಲೂಕಿನ ಚಾಗಬಾವಿ ಗ್ರಾಮದ ನಿರ್ಮಲಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಂಬುಲೆನ್ಸ್​ ಮೂಲಕ ಅವರನ್ನು ತಾಲೂಕು ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾಗಿದೆ. ಹಾಗಾಗಿ ಸಿಬ್ಬಂದಿ ವೀರೇಶ ಮತ್ತು ಚಾಲಕ ಬಸವರಾಜ ಅವರೇ ನಿರ್ಮಲಾಗೆ ಹೆರಿಗೆ ಮಾಡಿದ್ದಾರೆ.ಇದನ್ನೂ ಓದಿರಿಕುರಿಗಳಿಗೂ ಕ್ವಾರಂಟೈನ್​, ಮಾಂಸ ಪ್ರಿಯರೇ ಜಾಗ್ರತೆ!
ಕರೊನಾ ಹಿನ್ನೆಲೆ ಸಿರವಾರ ಆಸ್ಪತ್ರೆ ಸೀಲ್​ಡೌನ್ ಆಗಿದೆ. ಹಾಗಾಗಿ ತಾಯಿ ಮತ್ತು ಮಗುವನ್ನು ದೇವದುರ್ಗದ ಅರಕೇರಿ ಆಸ್ಪತ್ರೆ ದಾಖಲಿಸಲಾಗಿದೆ. ತಾಯಿ-ಮಗು ಸುರಕ್ಷಿತವಾಗಿದ್ದಾರೆ.
ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತುರ್ತು ಸಂದರ್ಭದಲ್ಲೂ ಆಂಬುಲೆನ್ಸ್​ಗಳ ಸ್ಥಳಕ್ಕೆ ಬರುತ್ತಿಲ್ಲ, ಬಂದರೂ ವಿಳಂಬ ಎಂಬ ಆರೋಪ ಕೇಳಿಬರುತ್ತಿವೆ. ಈ ನಡುವೆ ಆಂಬುಲೆನ್ಸ್​ ಸಿಬ್ಬಂದಿಯೇ ಮಹಿಳೆಗೆ ಹೆರಿಗೆ ಮಾಡುವ ಮೂಲಕ ತಾಯಿ-ಮಗುವನ್ನು ಉಳಿಸಿರುವ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ಕೇಳಿಬರುತ್ತಿವೆ.
ಜನರ ಎದುರಲ್ಲೇ ಕೈ-ಕಮಲ ಬೀದಿ ರಂಪಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
