ಮಾಸ್ತಿ:ನಿಷ್ಕಲ್ಮಷ ಪ್ರೇಮಕ್ಕೆ ನಿದರ್ಶನ ಮಾತೃಹೃದಯ. ಇದಕ್ಕೊಂದು ಉದಾಹರಣೆ ಟೇಕಲ್​ ಹೋಬಳಿ ಕುಂಟನಹಳ್ಳಿಯಲ್ಲಿ ನಡೆಯಿತು. ರೈತ ಆನಂದ ಮನೆಯ ಮೇಕೆಯು ಸೀಮೆಹಸು ಕರುವಿಗೆ ಹಾಲುಣಿಸುವ ಮೂಲಕ ಅಮ್ಮನ ಪ್ರೀತಿ ಧಾರೆಯೆರೆಯುತ್ತಿದೆ. ತನ್ನ ಮರಿ ತೀರಿಕೊಂಡಿದ್ದು, ಅಗಲಿಕೆ ನೋವು ಮರೆಯಲು ಮೇಕೆಯು ಸೀಮೆ ಹಸುವಿನ ಕರುವಿಗೆ ಹಾಲು ಕೊಡುತ್ತಿದೆ. ಕರು ಕೆಚ್ಚಲನ್ನು ಕಚ್ಚಿದರೂ, ತಿವಿದರೂ, ಪ್ರತಿರೋಧ ತೋರದೆ ನಿತ್ಯ ಹಾಲುಣಿಸುತ್ತಿದೆ.
ಆನಂದ ಅವರು ಸೀಮೆಹಸು ಮತ್ತು ಮೇಕೆಯನ್ನು ಒಟ್ಟಿಗೆ ಸಾಕುತ್ತಿದ್ದು, ಕಳೆದ ವಾರ ಮೇಕೆ ಮರಿ ಹಾಕಿತ್ತು. ಇದೇ ವೇಳೆ ಸೀಮೆಹಸು ಸಹ ಕರುವೊಂದಕ್ಕೆ ಜನ್ಮ ನೀಡಿತ್ತು. ಕೊಟ್ಟಿಗೆಯಲ್ಲಿ ಅಕ್ಕಪಕ್ಕದಲ್ಲೇ ಇವುಗಳನ್ನು ಕಟ್ಟಲಾಗುತ್ತಿತ್ತು. ಮೇಕೆ ಮರಿ ಮೃತಪಟ್ಟಿದ್ದರಿಂದ ಮೇಕೆ ತನ್ನಲ್ಲಿರುವ ಹಾಲನ್ನು ಕರುವಿಗೆ ನೀಡುತ್ತಿದೆ. ನಾಲ್ಕೈದು ದಿನದಿಂದ ಕರುವಿಗೆ ಮೇಕೆ ಹಾಲುಣಿಸುತ್ತಿದ್ದು, ಅಪರೂಪದ ಈ ಬಾಂಧವ್ಯ ನೋಡಲು ಸುತ್ತಮುತ್ತಲಿನ ಜನ ಬರುತ್ತಿದ್ದಾರೆ.
ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

ಆ್ಯಸಿಡ್​ ದಾಳಿಕೋರ ನಾಗೇಶ್​ ಬಂಧನ: ಸ್ವಾಮೀಜಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ

ಸಾವಲ್ಲೂ 8 ಜನ್ರಿಗೆ ಜೀವ ಕೊಟ್ಟ ಚಂದ್ರಶೇಖರ್​: ಪತಿಯ ಅಗಲಿಕೆ ನೋವಲ್ಲೂ ಸಾರ್ಥಕತೆ ಮೆರೆದ ಗರ್ಭಿಣಿ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + twenty =
Remember me
