ಚಾಮರಾಜನಗರ:ರಸ್ತೆಯಲ್ಲಿ ಸಿಕ್ಕ 1 ರೂಪಾಯಿಯನ್ನೇ ಹಿಂದಿರುಗಿಸದ ಈ ದಿನಮಾನದಲ್ಲಿ ಬರೋಬ್ಬರಿ 100 ಗ್ರಾಂ ಚಿನ್ನದ ಸರ ಕಳೆದುಕೊಂಡವರನ್ನು ಹುಡುಕಿ ವಾಪಸ್​ ಕೊಟ್ಟು ನೌಕರನೊಬ್ಬ ಪ್ರಾಮಾಣಿಕತೆ ಮೆರೆದ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ಮೇ 3ರಂದು ಬೆಟ್ಟಕ್ಕೆ ಬಂದಿದ್ದ ಮೈಸೂರಿನ ಸಾಫ್ಟ್‌ವೇರ್ ಇಂಜಿನಿಯರ್ ಎಂ.ರಾಜಶೇಖರ ಕುಟುಂಬ ಜೇನುಮಲೆ ವಸತಿಗೃಹದಲ್ಲಿ ತಂಗಿತ್ತು. ಟೆಕ್ಕಿ ಪತ್ನಿ ದೇವರ ದರ್ಶನ ಮುಗಿಸಿ ಕೊಠಡಿ ಖಾಲಿ ಮಾಡಿ ತೆರಳುವಾಗ ಮಾಂಗಲ್ಯ ಸರವನ್ನು ಬೀಳಿಸಿಕೊಂಡು ಹೋಗಿದ್ದರು. ಬಳಿಕ ಈ ಸರವು ರಿಸೆಪ್ಶನಿಸ್ಟ್ ಕೈಗೆ ಸಿಕ್ಕಿದೆ. ಕೊಠಡಿ ಪಡೆಯುವಾಗ ಗ್ರಾಹಕರು ಕೊಟ್ಟಿದ್ದ ದೂರವಾಣಿ ಸಂಪರ್ಕಕ್ಕೆ ಕರೆ ಮಾಡಿದ ಪ್ರಾಧಿಕಾರದ ನೌಕರ ಕೃಷ್ಣಮೂರ್ತಿ ಅವರು ಆ ಟೆಕ್ಕಿಯನ್ನು ಪತ್ತೆ ಹಚ್ಚಿ ಮಾಂಗಲ್ಯ ಸರವನ್ನು ಹಿಂತಿರುಗಿಸಿದ್ದಾರೆ‌. ನೌಕರನ ಪ್ರಾಮಾಣಿಕತೆಗೆ ಪ್ರಾಧಿಕಾರದಿಂದ ಶ್ಲಾಘನೆ ವ್ಯಕ್ತವಾಗಿದೆ‌.
ಕನ್ನಡದ ಕೋಟ್ಯಧಿಪತಿ ಖ್ಯಾತಿಯ ಲೈನ್​ಮನ್ ಆತ್ಮಹತ್ಯೆ! ಗೃಹಪ್ರವೇಶಕ್ಕೂ 2 ದಿನ ಮೊದಲೇ ದುರಂತ, ಆ ರಾತ್ರಿ ತೋಟದಲ್ಲಿ…

ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + four =
Remember me
