ಬೆಂಗಳೂರು:ಶೀಘ್ರದಲ್ಲೇ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಡ್ತೀನಿ ಎಂದಿದ್ದ ಮೋಹಕ ತಾರೆ ರಮ್ಯಾ, ಕೊನೆಗೂ ಆ ಗುಡ್​ನ್ಯೂಸ್​ ಏನೆಂದು ಬಹಿರಂಗ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳ ಮನದಲ್ಲಿ ಸಂತಸ ಮನೆಮಾಡಿದೆ. ರಮ್ಯಾರನ್ನ ಮರು ಸ್ವಾಗತಿಸಲು ವೇದಿಕೆ ಸಜ್ಜುಗೊಳಿಸುತ್ತಾ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ರಾಜಕೀಯದಲ್ಲಿ ರಮ್ಯಾ ಟಾರ್ಗೆಟ್ ಆಗಿದ್ದಾರೆ. ಡಿಕೆಶಿಗೆ ಬುದ್ಧಿಮಾತು ಹೇಳಿದ ರಮ್ಯಾಗೆ ಡಿಕೆಶಿ ಬೆಂಬಲಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ಈ ನಡುವೆ ರಾಜಕೀಯದಿಂದ ಬೇಸತ್ತಂತಿರುವ ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುವ ಸುಳಿವು ಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ನಟಿಸುವ ಆಸೆಯನ್ನೂ ಹೊರಹಾಕಿದ್ದಾರೆ.
‘ಒಟ್ಟಿಗೆ ನಟಿಸೋಣ ರಕ್ಷಿತ್’ ಅಂತ ಇನ್​ಸ್ಟಾಗ್ರಾಂ ಖಾತೆಯಲ್ಲಿ ನಟಿ ರಮ್ಯಾ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ರಮ್ಯಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಕೆಲ ದಿನಗಳ ಹಿಂದೆ‘ದಿಗ್ವಿಜಯ ನ್ಯೂಸ್’ಜೊತೆ ಮಾತನಾಡುತ್ತಾ ‘ಶೀಘ್ರವೇ ಗುಡ್ ನ್ಯೂಸ್ ಕೊಡ್ತೀನಿ’ ಅಂದಿದ್ರು. ಆ ಸಿಹಿ ಸುದ್ದಿ ಸಿನಿಮಾಗೆ ಕಮ್ ಬ್ಯಾಕ್ ಆಗೋದಾ? ಎಂಬ ಚರ್ಚೆಯೂ ಶುರುವಾಗಿದೆ.
ಡಿಕೆಶಿಗೆ ರಮ್ಯ ಬುದ್ಧಿಮಾತು:“ಪಕ್ಷಾತೀತವಾಗಿ ಪರಸ್ಪರ ಭೇಟಿಯಾಗುತ್ತಾರೆ, ಸಮಾರಂಭಗಳಿಗೆ ಹೋಗುತ್ತಾರೆ, ಕೆಲವರ ಕುಟುಂಬಗಳಲ್ಲಿ ವಿವಾಹವೂ ನಡೆಯುತ್ತದೆ. ನನಗೆ ಆಶ್ಚರ್ಯವಾಗಿದೆ ಡಿ.ಕೆ. ಶಿವಕುಮಾರ್​ ಅವರೇ, ಎಂ.ಬಿ.ಪಾಟೀಲ್​ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ. ಪಕ್ಷ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ?” ಎಂದು ಪಕ್ಷದ ಅಧ್ಯಕ್ಷರಿಗೆ ನಿನ್ನೆ ಸಾಮಾಜಿಕ ಜಾಲತಾಣದ ಮೂಲಕ ರಮ್ಯಾ ಬುದ್ಧಿವಾದ ಹೇಳಿದ್ದರು. ಇದು ಡಿಕೆಶಿ ಅಭಿಮಾನಿಗಳನ್ನು ಕೆರಳಿಸಿತ್ತು.
ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

ಗಂಡನ ಎದುರೇ ಮಹಿಳೆಯನ್ನ ವಿವಸ್ತ್ರಗೊಳಿಸಿ ಗ್ಯಾಂಗ್​ರೇಪ್​ಗೆ ಯತ್ನ! ಗೃಹ ಸಚಿವರ ಊರಲ್ಲೇ ಹೇಯಕೃತ್ಯ

ದಾಖಲೆ ಬರೆದ ಕೆಂಪಡಕೆ ಬೆಲೆ! ಅಡಕೆ ಬೆಳೆಗಾರರ ಮೊಗದಲ್ಲಿ ಸಂತಸ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × five =
Remember me
