ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಸರ್ಕಾರಿ ಶಾಲೆ ಮಾರಾಟಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಚಿಕ್ಕಪೇಟೆಯ ಒಟಿಟಿ ರಸ್ತೆಯಲ್ಲಿ 77 ವರ್ಷದ ಹಳೇ ಕಟ್ಟಡದಲ್ಲಿ ಸರ್ಕಾರಿ ಹೈಸ್ಕೂಲ್​ ಇದೆ. 8, 9, 10ನೇ ತರಗತಿ ನಡೆಯುತ್ತಿದ್ದು, 140ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಈ ಶಾಲಾ ಕಟ್ಟಡವನ್ನು ಜಾಗದ ಸಮೇತ ಮಾರಾಟ ಮಾಡುವ ಕುರಿತು ಬೆಂಗಳೂರು ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಜಾಗದ ಪೂರ್ವ ಮಾಲೀಕರು 70 ಸಾವಿರ ಅಡಿ ಜಾಗಯನ್ನು ಕಂದಾಯ ಇಲಾಖೆಗೆ ದಾನ ಕೊಟ್ಟಿದ್ದರು. ಈ ಜಾಗದಲ್ಲಿ ಕಟ್ಟಡ ನಿರ್ಮಿಸಿ ಎರಡನೇ ಮಹಡಿಯಲ್ಲಿ ಶಾಲೆಯನ್ನ ನಡೆಸಲಾಗುತ್ತಿದೆ. ಈ ಜಾಗದಲ್ಲಿ ಹೊಸ ಕಟ್ಟಡ ಕಟ್ಟೋದಕ್ಕೆ ರಜತಾ ಎಂಟರ್​ಪ್ರೈಸಸ್​ ಗುತ್ತಿಗೆ ಪಡೆದಿತ್ತು. ಈ ಕಟ್ಟಡದಲ್ಲಿ 141 ಮಳಿಗೆಗಳಿವೆ. ವ್ಯಾಪಾರಸ್ಥರು ರಜತ ಅಸೋಷಿಯನ್​ ಮಾಡಿಕೊಂಡು ಇಂತಿಷ್ಟು ವರ್ಷಕ್ಕೆ ಎಂದು ಬಾಡಿಗೆಗೆ ಪಡೆದಿದ್ದಾರೆ. ಇದೀಗ ಮಕ್ಕಳು ಶಾಲೆಗೆ ಅತ್ತಿ ಹೋಗಲು ಕಷ್ಟವಾಗುತ್ತೆ. ಹಾಗಾಗಿ ಈ ಶಾಲೆಯನ್ನ ಮುಚ್ಚಿ, ಬೇರೆಡೆ ಪ್ರಾರಂಭಿಸಿ. ನಮ್ಮ ಅಸೋಷಿಯೇನ್​ಗೆ ಈ ಜಾಗವನ್ನು ಕೊಡಿ ಎಂದು​ ಮನವಿ ಮಾಡಿದೆಯಂತೆ. ಈ ಕುರಿತು ಡಿಸಿ ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರಂತೆ.
ಇನ್ನೊಂದು ಮೂಲದ ಪ್ರಕಾರ ಇದು ಸರ್ಕಾರಿ ಶಾಲೆಯ ಜಾಗ ಎಂದು ದೃಢೀಕರಿಸಲೂ ಸೂಕ್ತ ದಾಖಲೆ ಇಲ್ಲದಂತಾಗಿದೆ. ಗುತ್ತಿಗೆ ಪಡೆದವರು ಈ ಜಾಗ ನಮ್ಮದೇ ಅಂತಿದ್ದಾರೆ. ಹೀಗಾಗಿ ಜಾಗ ಮಾರಾಟ ಮಾಡಲು ಕಂದಾಯ ಇಲಾಖೆ ಮುಂದಾಗಿದೆಯಂತೆ.
ಬೆಂಗಳೂರಿನ ಸರ್ಕಾರಿ ಶಾಲೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ವಾ? ಸರ್ಕಾರಿ ಶಾಲೆಯನ್ನ ಉಳಿಸಿ ಎನ್ನುತ್ತಾರೆ, ಈಗ ಶಾಲೆಯನ್ನೇ ಮಾರಾಟ ಮಾಡೋಕೆ ಹೇಗೆ ಸಾಧ್ಯ? ಎಂದು ಸಾರ್ವಜನಕರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮಾಜಿ ಕಾರ್ಪೋರೇಟರ್​ ಶಿವಕುಮಾರ್ ಕೂಡ, ಯಾವುದೇ ಕಾರಣಕ್ಕೂ ಈ ಜಾಗವನ್ನು ಮಾರಾಟ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆಯೇ ಈ ಬಗ್ಗೆ ಸ್ಪಷ್ಟನೆ ಕೊಡಬೇಕು.
ದೆಹಲಿಯ ಕರ್ನಾಟಕ ಭವನದ ಕಾರು ಚಾಲಕ ಆತ್ಮಹತ್ಯೆ! ಮಂಡ್ಯ ಮೂಲದ ಯುವಕನ ಸಾವಿಗೆ ಕಾರಣ?

ಮನೆಯಲ್ಲಿ ಆಟವಾಡುತ್ತಾ ಸೊಳ್ಳೆನಾಶಕ ಲಿಕ್ವಿಡ್​ ಕುಡಿದು 2 ವರ್ಷದ ಮಗು ಸಾವು! ಹೊನ್ನಾವರದಲ್ಲಿ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
