ಇ-ಆಡಳಿತ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಮಗ್ರ ನಾಗರಿಕರ ಸೇವಾ ಕೇಂದ್ರದಿಂದ ಗ್ರಾಮೀಣ ಭಾಗದಲ್ಲಿ ಎಲ್ಲ ನಾಗರಿಕ ಸೇವೆಗಳು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲು ವಿವಿಧ ಜಿಲ್ಲೆಗಳಲ್ಲಿ ‘ಗ್ರಾಮ ಒನ್​’ ಕೇಂದ್ರ ತೆರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಒನ್​ಗೆ ಫ್ರಾಂಚೈಸಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಬೇರೆ ರೀತಿಯಲ್ಲಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಯಾವ ಜಿಲ್ಲೆಗಳಲ್ಲಿ ನೇಮಕ?:ಕಲಬುರಗಿ, ರಾಯಚೂರು, ಯಾದಗಿರಿ, ವಿಜಯನಗರ, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಆಯ್ದ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಫ್ರಾಂಚೈಸಿ ಆಧಾರದ ಮೇಲೆ ಗ್ರಾಮ ಒನ್​ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ.
ಅರ್ಹತೆಗಳೇನು?:ಯಾವುದೇ ವಿಭಾಗದಲ್ಲಿ ಪದವಿ ಪಡೆದಿದ್ದು, ಕಂಪ್ಯೂಟರ್​ ಜ್ಞಾನ ಹೊಂದಿರಬೇಕು. ಕನಿಷ್ಠ 1 ರಿಂದ 2 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯವಿರಬೇಕು. ಗ್ರಾಮ ಒನ್​ ಪೊಲೀಸ್​ ತಪಾಸಣಾ ಪ್ರಮಾಣ ಪತ್ರ ಸಲ್ಲಿಸಬೇಕು. ಸಮುಚ್ಛಯ ಕೇಂದ್ರ ಸ್ಥಾನದಲ್ಲಿರಬೇಕು ಮತ್ತು ಸಾರ್ವಜನಿಕರು ಸುಲಭವಾಗಿ ಸಂಪರ್ಕಿಸುವಂತಿರಬೇಕು.
ತಂತ್ರಜ್ಞಾನದ ಅವಶ್ಯಕತೆಗಳೇನು?:ಡೆಸ್ಕ್​ಟಾಪ್​/ ಲ್ಯಾಪ್​ಟಾಪ್​, ಬಹುಉದ್ದೇಶದ ಪ್ರಿಂಟರ್​ (ಪ್ರಿಂಟ್​/ ಸ್ಕ್ಯಾನ್​), ಬಯೋಮೆಟ್ರಿಕ್​ ಸ್ಕ್ಯಾನರ್​ (ಸೆಕ್ಯೂಜೆನ್​ ಹ್ಯಾಮಸ್ಟರ್​ ಪ್ರೊ20), ವೆಬ್​ ಕ್ಯಾಮರಾ, ವೈ-ಫೈ ರಿಸೀವರ್​, ಇಬ್ಬರು ಅಂತರ್ಜಾಲ ಸೇವೆ ಒದಗಿಸುವವರಿಂದ ಅಂತರ್ಜಾಲ ಸಂಪರ್ಕ ಹೊಂದಿರಬೇಕು.
ಅರ್ಜಿಶುಲ್ಕ:ಫ್ರಾಂಚೈಸಿ ಪ್ರಾಯೋಗಿಕ ಯೋಜನೆಗೆ ಅರ್ಜಿಶುಲ್ಕ 100 ರೂ. ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ:4.5.2022ಅಧಿಸೂಚನೆ:https://bit.ly/3MCFYYgಮಾಹಿತಿಗೆ:karnatakaone.gov.in/sevasindhu.karnataka.gov.in
ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

ಸಹ್ಯಾದ್ರಿ ಕಾಲೇಜಿನಲ್ಲಿ ಪ್ರೊಫೆಸರ್​ ಹುದ್ದೆ ನೇಮಕ: ಅರ್ಜಿ ಸಲ್ಲಿಕೆಗೆ ಮೇ 7 ಕೊನೇ ದಿನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 6 =
Remember me
