ಕಲ್ಯಾಣ ಕರ್ನಾಟಕದ ಬಹುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಅಬ್ಬೆತುಮಕೂರು ಸಿದ್ಧಸಂಸ್ಥಾನದ ಸದ್ಗುರು ಶ್ರೀವಿಶ್ವಾರಾಧ್ಯ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಬೃಹತ್ ಪರಂಪರಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಶ್ರಾವಣ ಮಾಸದ ಒಂದು ತಿಂಗಳ ಅನುಷ್ಠಾನಕ್ಕೆ ಮುನ್ನ ಆ.2ರಂದು ವಿಶ್ವಾರಾಧ್ಯರ ಜನ್ಮಸ್ಥಳವಾದ ಜೇವರ್ಗಿ ತಾಲೂಕಿನ ಗವ್ಹಾರ ಹಿರೇಮಠದ ಶ್ರೀಬನ್ನಿ ಬಸವೇಶ್ವರ ಕ್ಷೇತ್ರದಿಂದ ಅಬ್ಬೆತುಮಕೂರಿನ ಮುಕ್ತಿಕ್ಷೇತ್ರಕ್ಕೆ ಸುಮಾರು 50 ಕಿ.ಮೀ. ಪರಂಪರಾ ಪಾದಯಾತ್ರೆ ನಡೆಯಲಿದೆ. ಶ್ರೀಮಠದ ಅಧ್ಯಕ್ಷರಾದ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮಿಗಳೊಂದಿಗೆ ದಾರಿಯುದ್ದಕ್ಕೂ ಸಾವಿರಾರು ಭಕ್ತರು ಹೆಜ್ಜೆ ಹಾಕಲಿದ್ದಾರೆ. ಆ.4ರಂದು ಸಂಜೆ ಅಬ್ಬೆತುಮಕೂರು ಮಹಾದ್ವಾರದ ಪಾದಗಟ್ಟಿಗೆ ತಲುಪುವ ವೇಳೆಗೆ ಲಕ್ಷಾಂತರ ಸಂಖ್ಯೆಯಾಗುವ ಭಕ್ತರ ಸಮ್ಮುಖದಲ್ಲಿ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮಿಗಳನ್ನು ಸಕಲ ಮಂಗಳವಾದ್ಯಗಳೊಂದಿಗೆ ಶ್ರೀಮಠಕ್ಕೆ ಕರೆದೊಯ್ದು ಶ್ರೀವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಒಂದು ತಿಂಗಳ ಶ್ರಾವಣ ಮಾಸದ ಶಿವಾನುಭವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಸಗರನಾಡಿನ ಕಾಮಧೇನು, ಕಲ್ಪವೃಕ್ಷ, ನಡೆದಾಡುವ ದೇವರೆಂದು ಪ್ರಸಿದ್ಧವಾಗಿರುವ, ಲಕ್ಷಾಂತರ ಭಕ್ತರ ಆರಾಧ್ಯದೈವ ಶ್ರೀಸದ್ಗುರು ವಿಶ್ವಾರಾಧ್ಯರ ಪಾದಯಾತ್ರೆಯಲ್ಲಿ ಪಾಲ್ಗೊಂಡರೆ ಬೇಡಿದ್ದು ಈಡೇರಿಲಿದೆ ಎಂಬ ನಂಬಿಕೆ ಭಕ್ತರಲ್ಲಿದ್ದು, ವಿವಿಧ ಹರಕೆಯನ್ನು ಹೊತ್ತು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರಾವಣ ಮಾಸದ ಒಂದು ತಿಂಗಳ ಪರ್ಯಂತರ ಅಬ್ಬೆತುಮಕೂರು ಮಠದಲ್ಲಿ ಪ್ರತಿನಿತ್ಯ ವಿಶೇಷ ಕಾರ್ಯಕ್ರಮ ನಡೆಲಯಲಿದ್ದು, ಕರ್ತೃ ವಿಶ್ವಾರಾಧ್ಯರ ಗದ್ದುಗೆಗೆ ಹಾಗೂ ಜಗನ್ಮಾತೆ ಭಗಳಾಮುಖಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
