ಬೆಂಗಳೂರು:ಜೆಪಿ ನಗರದ ಸುಪ್ರಸಿದ್ಧ ಆಧುನಿಕ ಬಹುಮಹಡಿ ಕಟ್ಟಡವಾದ ಎಲೀಟ್ ಪ್ರಮೋನೇಡ್‌ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ನಿವಾಸಿಗಳಿಂದ ಸಂಗೀತ ನೃತ್ಯ ನಾಟಕ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಖ್ಯಾತ ಸುಗಮ ಸಂಗೀತಗಾರರಾದ ಉದಯ ಅಂಕೋಲ, ನಾಗಚಂದ್ರಿಕಾ ಭಟ್ ಹಾಗೂ ಸುಪ್ರಿಯಾ ಆಚಾರ್ಯ ಅವರು ನಡೆಸಿ ಕೊಟ್ಟ ಸಂಗೀತ ಸಂಜೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸಮಾರಂಭಕ್ಕೆ ಕಾಂತಾರ ಚಿತ್ರದ ನಾಯಕಿ ಸಪ್ತಮಿ ಗೌಡ ಆಗಮಿಸಿದ್ದರು. ಸಂಕಲ್ಪ ಕನ್ನಡ ಬಳಗದವರು ಸೌರಭ ಸಿರಿ ಎಂಬ ಪ್ರಶಸ್ತಿಯನ್ನು ಎಲೀಟ್ ಪ್ರಮೋನೇಡ್ ನಿವಾಸಿ ಬ್ರಾಹ್ಮಿಲಾ ಮದನ್ ಅವರಿಗೆ ಪ್ರದಾನ ಮಾಡಿದರು. ಬ್ರಾಹ್ಮಿಲಾ ಅವರು ಸಪ್ತಮಿ ಗೌಡ ಅವರ ಮೇಲೆ ಕವನ ರಚಿಸಿದ್ದು ಗಮನ ಸೆಳೆಯಿತು. ಸಂಕಲ್ಪ ಸಂಸ್ಥೆಯ ಅಧ್ಯಕ್ಷೆ ಶುಭಾ ಮಂಜುನಾಥ ಹಾಗೂ ಕಾರ್ಯದರ್ಶಿ ರಘುವೀರ್ ಸಮಾರಂಭದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಪ್ರಾಯೋಜಕರಾದ ವೀಣಾ ವಾದಕಿ ಹಾಗೂ ಪರಿಸರ ಪ್ರೇಮಿ ರೇವತಿ ಕಾಮತ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ‘ಕನ್ನಡದ ಕಲೆ ಹಾಗೂ ಸಂಗೀತಕ್ಕೆ ಪ್ರೋತ್ಸಾಹ ಕೊಡುವುದೇ ನನ್ನ ಅಂತರಾಳದ ಇಚ್ಛೆ’ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ನೆರೆದಿದ್ದ ಎಲ್ಲ ಪ್ರೇಕ್ಷಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಂಕಲ್ಪ ಕನ್ನಡ ಬಳಗದವರು ಸೌರಭ ಸಿರಿ ಪ್ರಶಸ್ತಿಯನ್ನು 2020ರಲ್ಲಿ ಕುಮಾರಿ ಐಶ್ವರ್ಯ ಅವರಿಗೆ ಶಾಸ್ತ್ರೀಯ ಸಂಗೀತಕ್ಕಾಗಿ ಕೊಡಲಾಗಿತ್ತು. ಡಾಕ್ಟರ್ ಕೆ ಎಸ್ ನಾಗೇಶ್ ಅವರಿಗೆ ದಂತ ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
