ಬೆಂಗಳೂರು:ಆರೋಗ್ಯದ ಬಗ್ಗೆ ಬೆಳಕು ಚೆಲ್ಲಲಿರುವ ವಿನೂತ ರಿಯಾಲಿಟಿ ಶೋ ‘ಫಿಟ್‌ಬಾಸ್’ ಕಾರ್ಯಕ್ರಮಕ್ಕೆ ಶುಕ್ರವಾರ ಅದ್ದೂರಿ ಚಾಲನೆ ದೊರೆಯಿತು.ನಗರದ ಕಂಠೀರವ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಶಂಕರಮಠದ ಆಡಳಿತಾಧಿಕಾರಿ, ಸಿಇಒ ಮತ್ತು ಆಯುಷ್ ಟಿ.ವಿಯ ಚೇರ್ಮನ್ ಪದ್ಮಶ್ರೀ ಪುರಸ್ಕೃತ ಡಾ.ವಿ.ಆರ್.ಗೌರಿ ಶಂಕರ್ ಸೇರಿ ಇತರೆ ಗಣ್ಯರು ಚಾಲನೆ ನೀಡಿ ಶುಭ ಹಾರೈಸಿದರು. ಎಸ್‌ಡಿಎಂ ಕ್ಷೇಮವನ ಅರ್ಪಿಸುವ ಈ ಕಾರ್ಯಕ್ರಮವು ಅ.೨ ರಿಂದ ಪ್ರಸಾರ ಆಯುಷ್ ಟಿ.ವಿ ಮತ್ತು ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.ಕಾರ್ಯಕ್ರಮ ಉದ್ಘಾಟಿಸಿ ಡಾ.ಗೌರಿ ಶಂಕರ್ ಮಾತನಾಡಿ, ಫಿಟ್‌ಬಾಸ್ ರಿಯಾಲಿಟಿ ಶೋ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆಯನ್ನು ಆಕರ್ಷಿಸಲಿ. ಫಿಟ್‌ನೆಸ್ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಡಲಿ. ಇದೊಂದು ಸದ್ದುದ್ದೇಶದಿಂದ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಮಾಡಿರುವಂತಹ ಕಾರ್ಯಕ್ರಮವಾಗಿದೆ. ಇದರಲ್ಲಿ ಭಾಗವಹಿಸುತ್ತಿರುವ ೨೧ ಸ್ಪರ್ಧಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಶುಭ ಹಾರೈಸಿದರು.‘ಬಿಗ್‌ಬಾಸ್’ ಈಗಾಗಲೇ ಎಲ್ಲಾ ಭಾಷೆಯಲ್ಲಿಯೂ ಯಶಸ್ವಿಯಾದ ರಿಯಾಲಿಟಿ ಶೋ ಆಗಿದೆ. ಆದರೆ ‘ಫಿಟ್‌ಬಾಸ್’ ಅನ್ನು ಆರೋಗ್ಯದ ಬಗ್ಗೆ ಕಾಳಜಿವುಳ್ಳ ಹೊಸ ಪರಿಕಲ್ಪನೆಯೊಂದಿಗೆ ರೂಪಿಸಲಾಗಿದೆ. ಬಹುತೇಕರಲ್ಲಿ ಇಂದು ಒಂದಲ್ಲ ಒಂದು ರೀತಿ ಆರೋಗ್ಯ ಸಮಸ್ಯೆಗಳಿವೆ. ಇದಕ್ಕೆ ಕಾರಣ ಜೀವನ ಶೈಲಿಯಾಗಿದೆ. ದೇವರು ಎಲ್ಲರನ್ನು ಒಂದೇ ರೀತಿ ಸೃಷ್ಟಿಸಿದ್ದಾನೆ. ಆದರೆ ಆಹಾರ ಪದ್ದತಿ ಮತ್ತು ಜೀವನ ಶೈಲಿಗಳಿಂದ ದೇಹ ದಪ್ಪವಾಗುವುದು ಹಾಗೂ ವಿವಿಧ ರೋಗಗಳಿಗೆ ತುತ್ತಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಫಿಟ್ ಆ್ಯಂಡ್ ೈನ್ ಆಗಿ ಇರಬೇಕು ಎಂದು ಹೇಳಿದರು.ಈ ಕಾರ್ಯಕ್ರಮ ಯಶಸ್ವಿಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದರಲ್ಲಿ ಭಾಗವಹಿಸಿರುವ ಸ್ಪರ್ಧಿಗಳ ಆರೋಗ್ಯದಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬರಲಿದೆ. ನೈಸರ್ಗಿಕವಾಗಿ ದೇಹದ ತೂಕ ಕಡಿಮೆ ಮಾಡುವುದು ಹೇಗೆ ಎಂಬುದನ್ನು ತಿಳಿಸಿ ಕೊಡಲಾಗುತ್ತದೆ. ಸಮತೋಲನ ಆಹಾರ ಪದ್ದತಿ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ. ಜತೆಗೆ ವೀಕ್ಷಕರಲ್ಲಿ ವಿಶೇಷವಾಗಿ ಯುವಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲಿದೆ ಎಂದರು.ಆಯುಷ್ ಟಿ.ವಿ ಉಪಾಧ್ಯಕ್ಷ ಡಾ.ಅರುಣಾಚಲಂ ಮಾತನಾಡಿ, ಮನುಷ್ಯ ಪ್ರತಿನಿತ್ಯ ಹಲವಾರು ವಿಷಯಗಳ ಮೇಲೆ ಗಮನ ಹರಿಸುತ್ತಾನೆ. ಆದರೆ ತಮ್ಮ ಶರೀರದ ಚಲನವಲ ಮತ್ತು ಆರೋಗ್ಯದ ಮೇಲೆ ಗಮನ ಹರಿಸುವುದಿಲ್ಲ. ನಮಗೆ ಆಹಾರದ ಮೇಲೆ ನಿಯಂತ್ರಣ ಇಲ್ಲದಿರುವುದೇ ದೇಹದ ತೂಕ ಹೆಚ್ಚಾಗಲು ಮತ್ತು ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.ಇದೇ ವೇಳೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಆಸ್ಟ್ರೋಲೈಟ್ ಎಂಬ ಆ್ಯಪ್ ಅನ್ನು ದಿನೇಶ್ ಗುರೂಜೀ ಬಿಡುಗಡೆಗೊಳಿಸಿದರು.ಕಾರ್ಯಕ್ರಮದಲ್ಲಿ ಕ್ಷೇಮವನದ ಮುಖ್ಯ ಕ್ಷೇಮ ಅಧಿಕಾರಿ ಡಾ.ನರೇಂದ್ರಶೆಟ್ಟಿ, ಸಿರಿ ಕನ್ನಡ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ, ಮದರಾಸ್ ಸಂಸ್ಕೃತ ಕಾಲೇಜಿನ ಟ್ರಸ್ಟಿ ರಘುನಂದನ್,, ಪ್ರಶಾಂತ್ ಆರ್ಯುವೇದ ಸೆಂಟರ್‌ನ ಮುಖ್ಯಸ್ಥ ಡಾ.ಗಿರಿಧರ್ ಕಜ್ಜೆ, ಇಶಾ ಡಯಗ್ನೋಷ್ಠಿಕ್‌ನ ಮುಖ್ಯಸ್ಥ ಡಾ.ಬಾಲಕೃಷ್ಣ, ವಿಆರ್‌ಎಲ್ ಮೀಡಿಯಾ ಉಪಾಧ್ಯಕ್ಷ ಅರುಣ್ ಕರಡಿ, ನಟ ಆರ್ಯನ್ ಶ್ಯಾಮ್, ನಟಿಯರಾದ ಅಮೂಲ್ಯ,ರೂಪಿಕಾ, ನಿರೂಪಕ ಮುರುಳಿ, ಬಿಗ್‌ಬಾಸ್ ಮಾಜಿ ಸ್ಫರ್ಧಿ ಪ್ರಶಾಂತ್ ಸಂಬರಗಿ, ಅಮೃತ್ ನೋನಿ ಮಾರುಕಟ್ಟೆಯ ಮುಖ್ಯಸ್ಥ ನಾರಾಯಣ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.ಅ.2 ರಿಂದ ಪ್ರಸಾರ:ಅ.2 ರಿಂದ ಆಯುಷ್ ಟಿ.ವಿ ಮತ್ತು ಸಿರಿ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರೈಂಟೈನಲ್ಲಿ ಪ್ರಸಾರವಾಗಲಿದೆ. ಒಟ್ಟು ೬೫ ಎಪಿಸೋಡ್‌ಗಳಿದ್ದು, ನಟ ವಿನಯ್‌ಗೌಡ ಮುಖ್ಯ ನಿರೂಪಕರಾಗಿ ಮತ್ತು ನಿರೂಪಕಿಯಾಗಿ ಸೌಮ್ಯ ಕಾಣಿಸಿಕೊಳ್ಳಲಿದ್ದಾರೆ. ನೆಲಮಂಗಲ ಸಮೀಪವಿರುವ ಕ್ಷೇಮವನದಲ್ಲಿ ನಡೆಯಲಿರುವ ಕಾರ್ಯಕ್ರಮ ಇದ್ದಾಗಿದ್ದು, ಒಟ್ಟು 21 ದಿನಗಳ ಕಾಲ 21 ಸ್ಪರ್ಧಿಗಳು ಈ ರಿಯಾಲಿಟಿ ಷೋದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five − three =
Remember me
