ತುಮಕೂರು:ಜೆ‌ಡಿಎಸ್​ನಿಂದ ನನ್ನನ್ನು ಉಚ್ಛಾಟಿಸಿದ್ದರಲ್ಲಿ ಹೊಸದೇನಿಲ್ಲ. ಉಚ್ಛಾಟನೆ ಮಾಡಿದ್ದು ನನಗೆ ಸಂತೋಷವಾಗಿದೆ. ಡಿಸೆಂಬರ್​ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಉಚ್ಛಾಟಿತ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಶ್ರೀನಿವಾಸ್​, ಈ ಬೆಳವಣಿಗೆ ಮುಜುಗರ ಅಥವಾ ಅವಮಾನ ಎಂದು ನನಗೆ ಅನಿಸೋದಿಲ್ಲ. ಅವರು ನನ್ನ ವಿರುದ್ಧ ಅಭ್ಯರ್ಥಿಯನ್ನು ತಯಾರು ಮಾಡಿದಾಗಲೇ ನಾನು ಉಚ್ಛಾಟಿತನಾಗಿದ್ದೆ. ಡಿಸೆಂಬರ್​​ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿರುಗೇಟು ಕೊಟ್ಡರು. ವಿಪ್ ಉಲ್ಲಂಘನೆಯಾಗಿದ್ರೆ ಸದನದಲ್ಲಿ ಕ್ರಮ ಕೈಗೊಳ್ಳಬಹುದು ಎಂದು ಜೆಡಿಎಸ್​ ವರಿಷ್ಠರಿಗೆ ಗುಬ್ಬಿ ಶಾಸಕ ಸವಾಲು ಹಾಕಿದರು.
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಕೋಲಾರ ಶಾಸಕ ಕೆ.ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬುಧವಾರ ಉಚ್ಛಾಟನೆ ಮಾಡಲಾಗಿದೆ.
ನಾನು ಮನಸ್ಸು ಮಾಡಿದ್ರೆ ಸಿಎಂ ಆಗುವೆ… ಎನ್ನುತ್ತಲೇ CBI ಅಧಿಕಾರಿಗಳ ಬಗ್ಗೆ ಹೊಸ ಬಾಂಬ್​ ಸಿಡಿಸಿದ ಜನಾರ್ದನ ರೆಡ್ಡಿ

ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್​ಗಳ ಶುಲ್ಕ ಹೆಚ್ಚಳ

ಹೆಂಡ್ತಿ ಬಂದ್ಲು, ಗಂಡ ಹೋದ! ಕಾಡಿಬೇಡಿ ಪತ್ನಿಯನ್ನು ತವರಿಂದ ಕರೆತಂದವ ಮರುದಿನ ಹೀಗಾ ಮಾಡ್ಹೋದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 19 =
Remember me
