ತುಮಕೂರು:ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಕರಿಶೆಟ್ಟಿಹಳ್ಳಿಯ ರಸ್ತೆಬದಿ ಮಂಗಳವಾರ ಬೆಳ್ಳಂಬೆಳಗ್ಗೆ ಪತ್ತೆಯಾದ ವ್ಯಕ್ತಿಯ ಶವದ ಪ್ರಕರಣ ಸಂಬಂಧ ಸ್ಫೋಟಕ ರಹಸ್ಯ ಬಯಲಾಗಿದೆ.ಚೌಕೇನಹಳ್ಳಿ ನಿವಾಸಿ ಮೂಡ್ಲಯ್ಯ(40) ಮೃತ ದುರ್ದೈವಿ. ಸೋಮವಾರ ರಾತ್ರಿ ನಡುರಸ್ತೆಯಲ್ಲೇ ಮೂಡ್ಲಯ್ಯನ ಮರ್ಮಾಂಗಕ್ಕೆ ಮಾವ ಮತ್ತು ಬಾಮೈದುನ ಇಬ್ಬರೂ ಒದ್ದು ಕೊಲೆ ಮಾಡಿ ಶವವನ್ನು ಬಿಸಾಡಿ ಹೋಗಿದ್ದಾರೆ. ಅಷ್ಟಕ್ಕೂ ಈ ಕೊಲೆಗೆ ಕಾರಣ ಪರಸ್ತ್ರೀ ಜತೆ ಮೂಡ್ಲಯ್ಯಗಿದ್ದ ಅಕ್ರಮ ಸಂಬಂಧ!
ಐಯ್ಯಣ್ಣ ಎಂಬುವವರು ತನ್ನ ಮಗಳು ಸುಮಿತ್ರಾಳನ್ನು 6 ವರ್ಷದ ಹಿಂದೆ ಮೂಡ್ಲಯ್ಯಗೆ ಕೊಟ್ಟು ಮದುವೆ ಮಾಡಿದ್ದರು. ಪತ್ನಿ ಇದ್ದರೂ ಮೂಡ್ಲಯ್ಯಗೆ ಪರಸ್ತ್ರೀಯ ಸಹವಾಸ ಇತ್ತಂತೆ. ಈ ವಿಚಾರವಾಗಿ ಮೂಡ್ಲಯ್ಯಗೆ ಬುದ್ಧಿಮಾತು ಹೇಳಿದ್ದ ಮಾವ ಐಯ್ಯಣ್ಣ, ಮಗಳ ಜೀವನ ಹಾಳು ಮಾಡಬೇಡ. ಪರಸ್ತ್ರೀ ಜತೆಗಿನ ಸಂಬಂಧಕ್ಕೆ ಬ್ರೇಕ್​ ಹಾಕು ಎಂದು ಮನವಿ ಮಾಡಿಕೊಂಡಿದ್ದರಂತೆ. ಐಯ್ಯಣ್ಣರ ಮಗ ಸೋಮಶೇಖರ್​ ಕೂಡ ಅಕ್ಕನ ಸಂಸಾರ ಹಾಳು ಮಾಡಬೇಡಿ ಎಂದು ಬಾವ ಮೂಡ್ಲಯ್ಯಗೆ ತಿಳಿಹೇಳಿದ್ದರಂತೆ.
ಇದ್ಯಾವುದನ್ನೂ ಕೇಳದ ಮೂಡ್ಲಯ್ಯ, ಪರಸ್ತ್ರೀ ಜತೆಗಿನ ಅಕ್ರಮ ಸಂಬಂಧ ಮುಂದುವರಿಸಿದ್ದರಂತೆ. ಇದರಿಂದ ಸಿಟ್ಟಾದ ಅಪ್ಪ-ಮಗ ಇಬ್ಬರೂ ಮೂಡ್ಲಯ್ಯನ ಮುಗಿಸಲು ಸಂಚು ರೂಪಿಸಿದ್ದರು. ಸೋಮವಾರ ತಡರಾತ್ರಿ ಬೈಕ್​ನಲ್ಲಿ ಬರುತ್ತಿದ್ದ ಮೂಡ್ಲಯ್ಯನನ್ನು ಕರಿಶೆಟ್ಟಿಹಳ್ಳಿ ಬಳಿ ಅಡ್ಡಗಟ್ಟಿದ ಮಾವ-ಬಾಮೈದುನ ಇಬ್ಬರೂ ಆತನ ಮರ್ಮಾಂಗಕ್ಕೆ ಒದ್ದು ಸಾಯಿಸಿದ್ದಾರೆ. ಬಳಿಕ ರಸ್ತೆಬದಿ ಬಟ್ಟೆ ಬಿಚ್ಚಿದ ಸ್ಥಿತಿಯಲ್ಲಿ ಮೃತದೇಹ ಎಸೆದು, ನಡುರಸ್ತೆಯಲ್ಲಿ ಬೈಕ್ ಬಿಸಾಡಿ ಪರಾರಿಯಾಗಿದ್ದರು.
ಮಂಗಳವಾರ ಬೆಳಗ್ಗೆ ಶವ ಮತ್ತು ಬೈಕ್​ ನೋಡಿ ಭಯಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಪ್ರಕರಣ ಸಂಬಂಧ ಆರೋಪಿಗಳಾದ ಐಯ್ಯಣ್ಣ, ಸೋಮಶೇಖರ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.(ದಿಗ್ವಿಜಯ ನ್ಯೂಸ್​, ತುಮಕೂರು)
ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ನೋಡ ನೋಡುತ್ತಿದ್ದಂತೆ ತಾಯಿ ಕಣ್ಣೆದುರೇ ಪ್ರಿಯಕರನೊಂದಿಗೆ ಪರಾರಿ​! ಕೊಳ್ಳೇಗಾಲದಲ್ಲಿ ಘಟನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × one =
Remember me
