ಬೆಂಗಳೂರು:ಅತಿಥಿ ಉಪನ್ಯಾಸಕರ ಹುದ್ದೆಗೆ 2021-22ನೇ ಶೈಣಿಕ ವರ್ಷಕ್ಕೆ ಅನ್ವಯವಾಗುವಂತೆ ಆನ್​ಲೈನ್​ ಮೂಲಕ ಅರ್ಜಿ ಹಾಕುವಾಗ ತಪ್ಪು ಮಾಹಿತಿ ಒದಗಿಸಿದ್ದ ಅಭ್ಯರ್ಥಿಗಳಿಗೆ, ಅದನ್ನು ಸರಿಪಡಿಸಿಕೊಳ್ಳಲು ಫೆ.12 ಮತ್ತು 13ರ ಮಟ್ಟಿಗೆ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ.
ಈ ಕುರಿತು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದಿಪ್​ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಕ್ಕೆ ಈಗಾಗಲೇ ಮೊದಲನೇ ಸುತ್ತಿನ ಕೌನ್ಸೆಲಿಂಗ್​ ಮುಗಿದಿದೆ. ಆಯ್ಕೆಯಾಗಿರುವ ಬಹುತೇಕರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಆದರೆ, ಕೆಲವರು ಅರ್ಜಿ ಸಲ್ಲಿಸುವಾಗ ಸೇವಾ ಅನುಭವ ವಿವರ, ಸ್ನಾತಕೋತ್ತರ ಪದವಿ ಅಂಕಗಳು, ಪಿಎಚ್​.ಡಿ, ಎಂ.ಫಿಲ್​ ಪದವಿಗೆ ಸಂಬಂಧಿಸಿದ ವಿವರಗಳನ್ನು ತಪ್ಪಾಗಿ ತುಂಬಿದ್ದಾರೆ. ಇವುಗಳನ್ನು ಸರಿಪಡಿಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ದಿನ ಅವಕಾಶ ಕೊಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಅಭ್ಯರ್ಥಿಗಳು ವಾಸ್ತವ ಮಾಹಿತಿಯನ್ನು ಒದಗಿಸದೆ, ಪುನಃ ತಪ್ಪು ಮಾಡಿದಲ್ಲಿ ಅಂತಹವರನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸುವುದಿಲ್ಲ ಎಂದು ಪಿ.ಪ್ರದಿಪ್​ ಸ್ಪಷ್ಟಪಡಿಸಿದ್ದಾರೆ.
ನೀಟ್​ ಪರೀಕ್ಷೆ ವಿಳಂಬ, ವಿದ್ಯಾರ್ಥಿಗಳಿಗೆ ವಿಧಿಸುತ್ತಿದ್ದ ದಂಡ ಶುಲ್ಕ ರದ್ದು: ಸಚಿವ ಡಾ. ಅಶ್ವತ್ಥನಾರಾಯಣ

ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

ಯೋಗ ಕ್ಲಾಸ್​​ನಲ್ಲಿ ಪರಪುರಷನ ಜತೆ ಲವ್ವಿಡವ್ವಿ! ಪತ್ನಿಯ ಈ ಅಸಹ್ಯ ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:14 − two =
Remember me
