ಬಳ್ಳಾರಿ:ಕೋವಿಡ್​ನಿಂದಾಗಿ 2 ವರ್ಷಗಳಿಂದ ಸ್ಥಗಿತವಾಗಿದ್ದ ಗುಂತಕಲ್​- ಬಳ್ಳಾರಿ- ಚಿಕ್ಕಜಾಜೂರು ನಿತ್ಯದ ಪ್ಯಾಸೆಂಜರ್​ ರೈಲನ್ನು ಜು.20 ರಿಂದ ಆರಂಭಿಸುವುದಾಗಿ ಸಿಕಂದರಾಬಾದ್​ನ ದಕ್ಷಿಣ ಮಧ್ಯ ರೈಲ್ವೆಯ ಸಿಪಿಟಿಯಂ ಕೆ.ಮಣಿಕುಮಾರ್​ ತಿಳಿಸಿದ್ದಾರೆ ಎಂದು ರಾಜ್ಯ ರೈಲ್ವೆ ಕ್ರಿಯಾ ಕೆ.ಎಂ.ಮಹೇಶ್ವರಸ್ವಾಮಿ ಮಾಹಿತಿ ನೀಡಿದ್ದಾರೆ.
ಗುಂತಕಲ್​- ಚಿಕ್ಕಜಾಜೂರು- ಗುಂತಕಲ್​, ಹುಬ್ಬಳ್ಳಿ- ತಿರುಪತಿ, ಹುಬ್ಬಳ್ಳಿ- ಕೊಲ್ಲಾಪುರ- ಮನುಗೂರು ಈ ಮೂರು ರೈಲುಗಳು ಸಿಕಂದರಾಬಾದ್​ನ ದಕ್ಷಿಣ ಮಧ್ಯ ರೈಲುಗಳಾಗಿದ್ದು, ಕೂಡಲೇ ರೈಲುಗಳ ಆರಂಭಿಸಲು ಒತ್ತಡ ತರುವಂತೆ ಇತ್ತೀಚೆಗೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳನ್ನು ಭೇಟಿಯಾಗಿ ಒತ್ತಾಯಿಸಲಾಗಿತ್ತು. ಕೋರಿಕೆಯಂತೆ ಗುಂತಕಲ್​ನಿಂದ ಚಿಕ್ಕಜಾಜೂರು ಕಡೆಗೆ ರೈಲಿನ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಬೆಳಗ್ಗೆ 7.40ಕ್ಕೆ ಗುಂತಕಲ್​ನಿಂದ ಹೊರಡುವ ಈ ರೈಲು ಮಧ್ಯಾಹ್ನ 1.10ಕ್ಕೆ ಚಿಕ್ಕಜಾಜೂರು ತಲುಪಲಿದೆ. ಅಲ್ಲಿಂದ ರಾತ್ರಿ 9.05ಕ್ಕೆ ಗುಂತಕಲ್​ ತಲುಪಲಿದೆ. ಇದು ಪ್ಯಾಸೆಂಜರ್​ ರೈಲಾಗಿದ್ದು, ಗುಂತಕಲ್​, ಬಂಟಿನಹಾಳ್​, ಗುಮ್ಮನೂರು, ಬೇವಿನಹಾಳ್​, ಸಾಕಿಬಂಡೆ, ವೀರಾಪುರ, ಹಗರಿ, ಹದ್ದಿನಗುಂಡು, ಬಳ್ಳಾರಿ, ಓಬಳಾಪುರಂ, ಸೋಮಲಾಪುರಂ, ರಾಯದುರ್ಗ, ಮೊಳಕಾಲ್ಮೂರು, ಬಿ.ಜಿ.ಕೆರೆ, ತಳಕು, ಚಳ್ಳಕೆರೆ, ಬಲ್ಲೇನಹಳ್ಳಿ, ಚಿತ್ರದುರ್ಗ, ಹುಲಿಯೂರು, ಬೆಟ್ಟದ ನಾಗೇನಹಳ್ಳಿ, ಅಮೃತಪುರ, ಚಿಕ್ಕನಂದವಾಡಿ ಮುಖೇನ ಸಂಚರಿಸಿ ಚಿಕ್ಕಜಾಜೂರು ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಟ್ಟಿನಿಂದ ಕಷ್ಟದಲ್ಲೇ ಬೆಳೆದ ಬಾಲೆಯ ಮೊಗದಲ್ಲಿ ನಗು ಅರಳಿಸಿದ ದಾವಣಗೆರೆ ಎಸ್ಪಿ! ಈ ಸ್ಟೋರಿ ಕೇಳಿದ್ರೆ ಭಾವುಕರಾಗ್ತೀರಿ

ಊರಿಗೆ ಹೋಗ್ಬೇಕಿತ್ತು.. ಅದ್ಕೆ ರಸ್ತೆಬದಿ ನಿಂತಿದ್ದ ಬಸ್​ ಓಡಿಸಿಕೊಂಡು ಬಂದೆ… ಈತನ ಮಾತು ಕೇಳಿ ಮಾಲೀಕ ದಿಗ್ಭ್ರಾಂತ

ಭಾಷೆ ವಿಚಾರಕ್ಕೇ ಚಂದ್ರು ಕೊಲೆ! ಸಿಐಡಿ ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ರಹಸ್ಯ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
