ಚಿಂತಾಮಣಿ:ತಾಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಇಂದಿನಿಂದ(ಜು.11) ಗುರುಪೂಜಾ ಸಂಗೀತೋತ್ಸವ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ.
ಸೋಮವಾರ ಬೆಳಗ್ಗೆ 6ಕ್ಕೆ ಧರ್ಮಾಧಿಕಾರಿ ಡಾ.ಎಂ.ಆರ್​.ಜಯರಾಮ್​ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆಯೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಯಿತು. ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಕಲಾವಿದರ ಜತೆಗೆ ನಾಡಿನ ಖ್ಯಾತ ಸಂಗೀತ ವಿದ್ವಾಂಸರು ಭಾಗವಹಿಸಿದ್ದಾರೆ.
ಗುರುಪೂಜಾ ಸಂಗೀತೋತ್ಸವದಲ್ಲಿ ಬೊಮ್ಮಿಶೆಟ್ಟಿ ರುನಾಥ್​, ಡಿ.ಆರ್​.ರಾಜಪ್ಪ ತಂಡ, ಅದಿತಿ ಪ್ರಹ್ಲಾದ್​, ವಿನಯ್​ ಶರ್ವ ಅವರಿಂದ ಗಾಯನ, ಶ್ರೀಧರ್​ ಸಾಗರ್​ ಅವರಿಂದ ಸ್ಯಾಕ್ಸಪೋನ್​, ಚೆನ್ನೆನ ಕುನ್ನಕುಡಿ ಬಾಲಮುರಳಿಕೃಷ್ಣ, ಕೇರಳದ ಪ್ರಿನ್ಸ್​ ರಾಮವರ್ಮ, ಬೆಂಗಳೂರಿನ ಎಸ್​.ವಿ.ರಮಣಕುಮಾರ್​, ತಿರುವಾರೂರು ಭಕ್ತವತ್ಸಲಂ, ಮುಂಬೈನ ಸುಬ್ಬಲಕ್ಷ್ಮಿ ಸ್ಯಾಕ್ಸಫೋನ್​, ಚೆನ್ನೈನ ಯು.ರಾಜೇಶ್​ ಮ್ಯಾಂಡೋಲಿನ್​, ನೂಪುರ ಫೈನ್​ ಆರ್ಟ್ಸ್​ನ ರೂಪ ರಾಜೇಶ್​ ಅವರಿಂದ ಕೂಚುಪುಡಿ ನೃತ್ಯ, ಬಾಬು, ಕುಮಾರ್​ ಹಾಗೂ ಕೇರಳದ ಆನಂದ್​ ಕಣ್ಣನ್​, ಪಿ.ಎಂ.ರಂಜಿತ್​ ವಿನಾಯಕ್​, ಸ್ವಾಮಿಮಲೈ ಮುತ್ತುಕುಮಾರ್​, ಟಿ.ಜಿ.ಬಾಬು, ಗುರುನಾಥನ್​ ಅವರಿಂದ ವಿಶೇಷ ನಾದಸ್ವರ, ತವಿಲ್​ ವಾದನ ಇರಲಿದೆ.
ಕಾರ್ಯಕ್ರಮದ ಪ್ರಯುಕ್ತ ಸದ್ಗುರು ತಾತಯ್ಯನವರ ದೇವಾಲಯಕ್ಕೆ ವಿದ್ಯುತ್​ ದೀಪಾಲಂಕಾರ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿದ್ದು, ಕಣ್ಮನ ಸೆಳೆಯುತ್ತಿದೆ.
ವಿಜಯವಿಠ್ಠಲ ಮಹಾಮಸ್ತಕಾಭಿಷೇಕ ಸಂಪನ್ನ: ಮಹಾಮಜ್ಜನದಲ್ಲಿ ಮಿಂದೆದ್ದ 36 ಅಡಿ ಎತ್ತರದ ಮೂರ್ತಿ

ಉಕ್ಕಿ ಹರಿಯುತ್ತಿರುವ ಕಾವೇರಿ: ರಂಗನತಿಟ್ಟು ಪಕ್ಷಿಧಾಮದಲ್ಲಿ ನಡುಗಡ್ಡೆ ಮುಳುಗಡೆ, ನದಿ ಪಾತ್ರದಲ್ಲಿ ಪ್ರವಾಹ ಭೀತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
