ಹುಬ್ಬಳ್ಳಿ:ನಗರದ ಖಾಸಗಿ ಆಸ್ಪತ್ರೆಯಲ್ಲಿ‌ ಕೋವಿಡ್ ಸೋಂಕಿತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಳ್ಳಾರಿಯ ಸಿರಗುಪ್ಪ ತಾಲೂಕಿನ 57 ವರ್ಷದ ಮಹಿಳೆಗೆ ಕರೊನಾ ಸೋಂಕು ತಗುಲಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಪಾಶ್ವವಾಯ ಪೀಡಿತೆಯಾಗಿದ್ದ ಕರೊನಾ ಸೋಂಕಿತ ಮಹಿಳೆಗೆ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆ ಮಹಿಳೆಯ ಪುತ್ರ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಮಗ ಆಸ್ಪತ್ರೆಗೆ ಬಂದಾಗ ಕೈ ಸನ್ನೆ ಮೂಲಕ ತಾಯಿ ತನ್ನ ಮೇಲಾದ ದೌರ್ಜನ್ಯ ಕುರಿತು ತಿಳಿಸಿದ್ದಾರೆ.
ಈ ಪ್ರಕರಣ ಕುರಿತು ‘ದಿಗ್ವಿಜಯ ನ್ಯೂಸ್’ಗೆ ಪ್ರತಿಕ್ರಿಯಿಸಿದ ಖಾಸಗಿ ಆಸ್ಪತ್ರೆ ಎಂಡಿ ಡಾ. ಕ್ರಾಂತಿ ಕಿರಣ, ನಮ್ಮ ಆಸ್ಪತ್ರೆ ಸಿಬ್ಬಂದಿಯಿಂದ ತಪ್ಪು ನಡೆದಿಲ್ಲ. ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಶುದ್ಧ ಸುಳ್ಳು. ಸೋಂಕಿತ ಮಹಿಳೆಗೆ ಪಾಶ್ವವಾಯ ಆಗಿದೆ. ಅವರಿಗೆ ಸ್ಕ್ಯಾನಿಂಗ್ ಮಾಡಿಸುವ ವೇಳೆ ಆಸ್ಪತ್ರೆ ಸಿಬ್ಬಂದಿ ಲಿಪ್ಟ್ ಮಾಡಿರಬಹುದು. ಯೂರಿನ್ ಸರಾಗವಾಗಿ ಪಾಸ್ ಆಗಲು ಕ್ಯಾಥಡ್ರಲ್ ಪೈಪ್ ಹಾಕಬೇಕಾಗುತ್ತೆ. ಲೈಂಗಿಕ ದೌರ್ಜನ್ಯದ ಆರೋಪ ಮಾಡುವ ಪುತ್ರ ಆಸ್ಪತ್ರೆಯ ಅನುಮತಿ ಇಲ್ಲದೆ ಕೋವಿಡ್ ವಾರ್ಡ್​ ಪ್ರವೇಶ ಮಾಡಿದ್ದಾರೆ. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಲೈಂಗಿಕ ದೌರ್ಜನ್ಯದ ಆರೋಪ ಮಾಡ್ತಾ ಇದ್ದಾರೆ. ನಮ್ಮ ಆಸ್ಪತ್ರೆಯ ಸಿಸಿ ಕ್ಯಾಮರಾಗಳಲ್ಲಿ ಎಲ್ಲವೂ ದಾಖಲಾಗಿದೆ. ತನಿಖೆಯಿಂದ ಎಲ್ಲವೂ ದೃಢಪಡಲಿದೆ ಎಂದರು.
ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

ಒಂದೇ ಕುಟುಂಬದ ಮೂವರು ಸಹೋದರರ ಸಾವು!

ಅನುಮಾನಾಸ್ಪದವಾಗಿ ಪತ್ನಿ ಸತ್ತ 5 ದಿನಕ್ಕೆ ಸಾವಿನ ಮನೆಯ ಕದ ತಟ್ಟಿದ ಟೆಕ್ಕಿ! ಕಳೆದ ತಿಂಗಳಷ್ಟೆ ಮದ್ವೆ ಆಗಿದ್ದವರ ಬದುಕಲ್ಲಿ ದುರಂತ

ಗರ್ಭಿಣಿ ಕಣ್ಣೀರಿಟ್ಟರೂ ಅಡ್ಮಿಟ್​ ಮಾಡಿಕೊಳ್ಳಲಿಲ್ಲ, ಆಸ್ಪತ್ರೆ ಬಾಗಿಲಲ್ಲಿ ನಿಂತಿರುವಾಗಲೇ ಹೆರಿಗೆ, ಕೆಳಗೆ ಬಿದ್ದು ಮಗು ಸಾವು!

ಧಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
