ಬೆಳಗಾವಿ:ಪ್ರಕರಣವೊಂದರ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ 27 ವರ್ಷದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಮನೆಗೆ ಬಂದ ವ್ಯಕ್ತಿಯೊಬ್ಬ ಆಕೆಯನ್ನ ತನ್ನೊಂದಿಗೆ ಮಲಗುವಂತೆ ಪೀಡಿಸುತ್ತಿದ್ದ. ಇದಕ್ಕೆ ಆಕೆ ಒಪ್ಪಿರಲಿಲ್ಲ. ಇಷ್ಟಕ್ಕೆ ಸುಮ್ಮನಾಗದ ಆತ ಕಳೆದ ತಿಂಗಳು ಒಂದು ದಿನ ಸಂಜೆ ವೇಳೆ ಮನೆಗೆ ನುಗ್ಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೆ, ಬೆದರಿಕೆಯನ್ನೂ ಹಾಕಿದ್ದಾನೆ. ಇದೆಲ್ಲವೂ ಸಂತ್ರಸ್ತೆಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಜೂ.7ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರ ಆರೋಪಿ ಬಾಳಪ್ಪ ನಾಯಕನನ್ನು ಬಂಧಿಸಲಾಗಿದೆ. ಸಂತ್ರಸ್ತ ಮಹಿಳೆಗೆ ಈಗಾಗಲೇ ಮದುವೆ ಆಗಿ 7 ವರ್ಷದ ಮಗನಿದ್ದಾನೆ. 2017ರಲ್ಲಿ ಈಕೆಯ ಗಂಡ ಮೃತಪಟ್ಟಿದ್ದಾನೆ. ಗೋಕಾಕ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ಮಗನೊಂದಿಗೆ ಈಕೆ ವಾಸವಿದ್ದಾಳೆ. ಕ್ರಿಮಿನಲ್​ ಕೇಸ್​ವೊಂದರಲ್ಲಿ ಮಹಿಳೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದು, ಈ ಸಂಬಂಧ ಪ್ರತಿವಾದಿಗೆ ಒಪ್ಪಿ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥ ಮಾಡಿಸುವ ನೆಪದಲ್ಲಿ ಮಹಿಳೆಯನ್ನ ಬಾಳಪ್ಪ ನಾಯಕ ಎಂಬಾತ ಪರಿಚಯ ಮಾಡಿಕೊಂಡಿದ್ದ. ಇದನ್ನೇ ಬಂಡವಾಳ ಮಾಡಿಕೊಂಡು ಮಹಿಳೆಯ ಮನೆಗೆ ಬರುತ್ತಿದ್ದ ಬಾಳಪ್ಪ, ತನ್ನನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸುತ್ತಿದ್ದ.
ಜೂ.7ರ ಸಂಜೆ ಮಹಿಳೆಯ ಮನೆಗೆ ಬಾಳಪ್ಪ ಬಂದಿದ್ದು ಮತ್ತೆ ಹಳೇ ಚಾಳಿ ಮುಂದುವರಿಸಿದ್ದ. ಆ ವೇಳೆ ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಲೆಂದು ಮಹಿಳೆ ಮೊಬೈಲ್​ನಲ್ಲಿ ಕ್ಯಾಮರಾ ಅನ್​ ಮಾಡಿದ್ದಳು. ಆಗಲೂ ಸೆಕ್ಸ್​ ಮಾಡುವಂತೆ ಪೀಡಿಸಿದ್ದು, ಆಕೆ ಒಪ್ಪಿಲ್ಲ. ಆಗ ಒತ್ತಾಯಪೂರ್ವಕವಾಗಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ದೃಶ್ಯ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದೆ. ಇನ್ನು ಈ ಬಗ್ಗೆ ಹೊರಗೆ ಬಾಯಿಬಿಟ್ಟರೆ ನಿನ್ನ ಮತ್ತು ನಿನ್ನ ಮಗನನ್ನು ಕೊಂದು ಹಾಕುವುದಾಗಿಯೂ ಬೆದರಿಕೆ ಹಾಕಿದ್ದ. ಹಾಗಾಗಿ ತಡವಾಗಿ ಬಂದು ದೂರು ನೀಡುತ್ತಿರುವೆ ಎಂದು ಗೋಕಾಕ ನಗರ ಠಾಣೆಯಲ್ಲಿ ವಿಡಿಯೋ ಸಮೇತ ಸಂತ್ರಸ್ತೆ ದೂರು ಕೊಟ್ಟಿದ್ದಾಳೆ. ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಊರಿಗೆ ತಂಗಿಯ ಶವ ತರುತ್ತಿದ್ದ ಅಣ್ಣನ ಪ್ರಾಣವನ್ನೂ ಮಾರ್ಗಮಧ್ಯೆ ಹೊತ್ತೊಯ್ದ ಜವರಾಯ!

ಕಿರುಕುಳ ಸಹಿಸಲಾಗದೆ ತವರಿಗೆ ಹೋಗಿದ್ದ ಪತ್ನಿಗೆ ಫೋನ್​ನಲ್ಲೇ ಹಿಂಸಿಸುತ್ತಿದ್ದ ಭೂಪ! ನಡೆದೇ ಹೋಯ್ತು ದುರಂತ

ಆಂಜನೇಯ ವಿಗ್ರಹದ ಮುಂದೆ ಗುಂಡಿ ತೋಡಿದ್ದರು, ದೇಗುಲದಲ್ಲೇ ಇತ್ತು ಮಹಿಳೆ ಶವ! ವಾಸನೆ ಜಾಡು ಹಿಡಿದು ಹೊರಟವರಿಗೆ ಶಾಕ್​

ಹುಟ್ಟೂರಲ್ಲೇ 14 ವರ್ಷದ ಬಾಲಕಿ ಜತೆ ಪರಪುರುಷರ ಕಾಮದಾಟ​! ಹೆತ್ತವರ ಸಾಥ್​, ಮಧುಗಿರಿ ಗೌರಿಗಾಗಿ ಹುಡುಕಾಟ​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + one =
Remember me
