ಹಾಸನ:ನಗರದ ಅಧಿದೇವತೆ ಹಾಸನಾಂಬೆ ಇಂದು(ಗುರುವಾರ) ವಿಶ್ವರೂಪ ದರ್ಶನ ಕರುಣಿಸಿದಳು. ವರ್ಷದ ಬಳಿಕ ದೇವಸ್ಥಾನದ ಗರ್ಭಗುಡಿ ಬಾಗಿಲನ್ನು ತೆರೆಯುತ್ತಿದ್ದಂತೆ ಭಕ್ತರ ಜಯಘೋಷ ಮೊಳಗಿತ್ತು.
ಸಂಪ್ರದಾಯದಂತೆ ತಳವಾರ ವಂಶಸ್ಥ ನರಸಿಂಹರಾಜ ಅರಸ್ ದೇವಾಲಯದ ಬಾಗಿಲು ಎದುರು ಪೂಜೆ ಸಲ್ಲಿಸಿ ಬಾಳೆ ಗೊನೆಯುಳ್ಳ ಬಾಳೆಕಂದನ್ನು ಕತ್ತರಿಸಿದರು. ಬಳಿಕ ಮುಖ್ಯ ಅರ್ಚಕರು ಮಧ್ಯಾಹ್ನ 12.12ಕ್ಕೆ ಗರ್ಭಗುಡಿಯ ಬಾಗಿಲನ್ನು ತೆರೆದರು. ಒಳಗೆ ದೀಪ ಉರಿಯುತ್ತಲೇ ಇತ್ತು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ ಅರ್ಚನಾ ಎಂ.ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇಂದಿನಿಂದ ಅ.27ರ ವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯಲಿದೆ.ಮೊದಲ ದಿನವಾದ ಇಂದು ಸಾರ್ವಜನಿಕ ದರ್ಶನ ಇರುವುದಿಲ್ಲ. ನಾಳೆಯಿಂದ (ಶುಕ್ರವಾರ) ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶವಿದೆ.

ಗೊಂದಲ ರಹಿತ ವ್ಯವಸ್ಥೆ:ಈ ಬಾರಿ ಯಾವುದೇ ಗೊಂದಲ ಉಂಟಾಗದಂತೆ ದೇವಿಯ ದರ್ಶನ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿವಿಧ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದ್ದು, ವಿಐಪಿ ಪಾಸ್‌ಗಳು, ವಿಶೇಷ ದರ್ಶನ ಟಿಕೆಟ್‌ಗಳ ಮೇಲೆ ಪ್ರವೇಶ ದ್ವಾರಗಳ ಸಂಖ್ಯೆಯನ್ನು ನಮೂದಿಸಲಾಗುವುದು. ಪಾಸ್ ಮತ್ತು ಟಿಕೆಟ್ ಪಡೆದವರು ಸಂಬಂಧಪಟ್ಟ ಪ್ರವೇಶ ದ್ವಾರದ ಮೂಲಕ ಸಾಲಾಗಿ ಹೋಗಿ ದೇವಿಯ ದರ್ಶನ ಪಡೆಯಬಹುದು. ಟಿಕೆಟ್ ಕೌಂಟರ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಬಸ್ ಮತ್ತು ರೈಲು ನಿಲ್ದಾಣಗಳಲ್ಲೂ ಟಿಕೆಟ್ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಅಲ್ಲಿಯೇ ಟಿಕೆಟ್ ಖರೀದಿಸಿ ನೇರವಾಗಿ ದೇವಾಲಯಕ್ಕೆ ಬರಬಹುದು ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.
ಟಿಕೆಟ್ ಖರೀದಿ ಮತ್ತು ವಾಹನ ಪಾರ್ಕಿಂಗ್ ವಿಚಾರದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ತೆರೆಯಲಾಗಿದೆ. ತಾತ್ಕಾಲಿಕ ಶೌಚಗೃಹಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸರದಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದ ಅಂಗವಿಕಲರು, ಗರ್ಭಿಣಿಯರು ಮತ್ತು ವೃದ್ಧರಿಗೆ ದೇವಾಲಯದ ಹಿಂಬಾಗಿಲ ಗೇಟ್ ಮೂಲಕ ಪ್ರವೇಶ ನೀಡಲಾಗುವುದು. ದೇವಾಲಯದ ಮುಂಭಾಗದ ಪ್ರಮುಖ ದ್ವಾರದಲ್ಲಿ ಅತಿಗಣ್ಯರಿಗೆ ಮಾತ್ರ ಪ್ರವೇಶ ಇರುತ್ತದೆ. ಈ ಬಾರಿಯ ವಿಶೇಷ ವ್ಯವಸ್ಥೆ ಎಂದರೆ, ಸಾರ್ವಜನಿಕ ದರ್ಶನದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಸರತಿ ಸಾಲನ್ನು ತಡೆಯುವುದಿಲ್ಲ. ಅತಿಗಣ್ಯರು ಬಂದು ಪೂಜೆ ಸಲ್ಲಿಸುವ ಸಮಯದಲ್ಲೂ ಸಾರ್ವಜನಿಕರ ಸರತಿ ಸಾಲಿನ ದರ್ಶನ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ದೇವಾಲಯದ ಆಡಳಿತಾಧಿಕಾರಿ ಆಗಿರುವ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್ ಮಾತನಾಡಿ, ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ತೆರೆಯುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಹಾಸನ ಶಾಸಕ ಪ್ರೀತಂಗೌಡ ಮತ್ತು ಇತರ ಗಣ್ಯರು ಹಾಜರಿರುತ್ತಾರೆ. ಗರ್ಭಗುಡಿಯ ಸ್ವಚ್ಛತೆ ಮತ್ತು ದೇವರ ಅಲಂಕಾರ ಕಾರ್ಯ ಇರುವುದರಿಂದ ಮೊದಲ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಗ್ರಹಣದ ದಿನವಾದ ಅ.25 ಮತ್ತು ಗರ್ಭಗುಡಿಯ ಬಾಗಿಲು ಮುಚ್ಚುವ ದಿನವಾದ ಅ.27 ರಂದು ಸಾರ್ವಜನಿಕರಿಗೆ ದೇವಾಲಯ ಪ್ರವೇಶ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ‘ಪುನೀತ್ ಫುಡ್ ಫೆಸ್ಟಿವಲ್’! ಅಪ್ಪು ಇಷ್ಟಪಡುತ್ತಿದ್ದ ಎಲ್ಲ ರೀತಿಯ ಆಹಾರ ಸವಿಯಲು ಫ್ಯಾನ್ಸ್​ಗೆ ಅವಕಾಶ

ಮಂಗಳೂರಲ್ಲಿ ಡೆತ್​ನೋಟ್​ ಬರೆದಿಟ್ಟು ಗುಂಡು ಹಾರಿಸಿಕೊಂಡ ಮಹಿಳಾ ಪಿಎಸ್​ಐ! ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
