ಹಾವೇರಿ:ಇಡೀ ದೇಶಕ್ಕೆ ದೇಶವೇ ಕರೊನಾ ಆತಂಕದಲ್ಲಿದೆ. ಆದರೆ ಇಲ್ಲೊಂದು ಜೋಡಿ ಒಟ್ಟಿಗೆ ಬಾಳಲು ಮನೆಯವರು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಸಾವಿನ ಮನೆಯ ಕದ ತಟ್ಟಿದೆ.
ಹಾವೇರಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇರ್ಷಾದ್ ಕುಡುಚಿ(22) ಮತ್ತು ವಿದ್ಯಾ ಗಾಳಿ(21) ಮೃತ ದುರ್ದೈವಿಗಳು. ಒಂದೇ ಗ್ರಾಮದ ಇವರಿಬ್ಬರೂ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.ಇದನ್ನೂ ಓದಿರಿಆಸ್ಪತ್ರೆ ಆವರಣದಲ್ಲೇ ಕರೊನಾ ಸೋಂಕಿತ ನೇಣಿಗೆ ಶರಣು! ಆತ್ಮಹತ್ಯೆಗೆ ಅದೊಂದೇ ಕಾರಣ…
ಇವರಿಬ್ಬರ ಮದುವೆಗೆ ಮನೆಯಲ್ಲಿ ವಿರೋಧ ಇತ್ತು. ಈ ಕಾರಣಕ್ಕೆ ನೊಂದ ಪ್ರೇಮಿಗಳು ಬೇರೆಬೇರೆ ಆಗುವ ಆತಂಕದಲ್ಲಿ ಸಾಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮೂರು ದಿನದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳು ಗ್ರಾಮ ಹೊರವಲಯದ ಜಮೀನೊಂದರಲ್ಲಿ ನಿನ್ನೆ (ಭಾನುವಾರ) ಶವವಾಗಿ ಪತ್ತೆಯಾಗಿದ್ದಾರೆ. ಅಕ್ಕಪಕ್ಕದಲ್ಲೇ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಈ ಘಟನೆಗೆ ಗ್ರಾಮಸ್ಗರು ಬೆಚ್ಚಿಬಿದ್ದಿದ್ದಾರೆ. ಶನಿವಾರ ರಾತ್ರಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರೇಮಿಗಳಿಬ್ಬರೂ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಸ್ಪತ್ರೆ ಆವರಣದಲ್ಲೇ ಕರೊನಾ ಸೋಂಕಿತ ನೇಣಿಗೆ ಶರಣು! ಆತ್ಮಹತ್ಯೆಗೆ ಅದೊಂದೇ ಕಾರಣ…

ರುಂಡ-ಮುಂಡ-ಕೈಕಾಲು ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ​: ಶವದೊಂದಿಗೆ ಪ್ರಯಾಣಿಸಿದ್ದ ನಟಿ ಶನಾಯ, ಬೆಚ್ಚಿಬೀಳಿಸುತ್ತೆ ಟ್ರಾವೆಲ್ ಹಿಸ್ಟರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 19 =
Remember me
