ಮೈಸೂರು:ಚುನಾವಣೆ ವೇಳೆ ವೋಟ್​ಗಾಗಿ ಕಾಲು ಹಿಡೀತಾರೆ, ಗೆದ್ದ ಮೇಲೆ ಅದೇ ಕಾಲನ್ನೇ ಕಚ್ಚುತ್ತಾರೆ… ಎಂಬ ಮಾತು ಈ ಪ್ರಕರಣಕ್ಕೆ ಹಿಡಿದ ಕನ್ನಡಿ. ‘ವೋಟ್ ಕೇಳ್ವಾಗ ನಾನು ನಿಮ್​ ಕಾಲು ಹಿಡಿದಿದ್ದೆ, ಈಗ ನಿನಗೆ ಮನೆ ಬೇಕು ಅಂದ್ರೆ ನನ್​ ಕಾಲು ಹಿಡಿ…’ ಎಂದು ವಸತಿ ವಂಚಿತನಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ ಅವಾಜ್​ ಹಾಕಿದ್ದಾನೆ.
ಇಂತಹ ಘಟನೆ ಎಚ್.ಡಿ.ಕೋಟೆ ತಾಲೂಕಿ‌ನ ಅಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಸಂಭವಿಸಿದೆ. ಗ್ರಾಪಂ ವ್ಯಾಪ್ತಿಯ ಟೈಗರ್ ಬ್ಲಾಕ್​ನಲ್ಲಿ ನಡೆಯುತ್ತಿದ್ದ ವಾರ್ಡ್ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಶಿವಸ್ವಾಮಿ ಗೌಡ ಅವಾಜ್​ ಹಾಕಿದ್ದಾನೆ.
ವಾರ್ಡ್​ ಸಭೆಯಲ್ಲಿ ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಫಲಾನುಭವಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. 15 ವರ್ಷಗಳಿಂದ ಮನೆಗಾಗಿ ಅರ್ಜಿ ಹಾಕುತ್ತಿದ್ದರೂ ಗ್ರಾಮದ ವ್ಯಕ್ತಿಯೊಬ್ಬರ ಆಯ್ಕೆ ಆಗಿರಲಿಲ್ಲ. ಈ ಬಗ್ಗೆ ಅವರು ಸಭೆಯಲ್ಲಿ ಕೇಳಿದರು. ಈ ವೇಳೆ ‘ಪಂಚಾಯಿತಿ ಮನೆ ಬೇಕಿದ್ದರೆ ಈಗ ನನ್ನ ಕೈಕಾಲು ಹಿಡಿ’ ಎಂದು ಅಧ್ಯಕ್ಷ ಹೇಳಿದ್ದಾನೆ.
ಕೋಟಿ ಬೆಲೆ ಬಾಳುವ ಅಡಕೆ ತೋಟಕ್ಕೆ ಬರೀ 15 ಲಕ್ಷ ರೂ. ಪರಿಹಾರ! ರೈಲ್ವೆ ಮಾರ್ಗಕ್ಕೆ ಭೂಮಿ ಕೊಟ್ಟ ರೈತ ಆತ್ಮಹತ್ಯೆ

ಥೂ ಇದೆಂಥಾ ಅಸಹ್ಯ? ಅಣ್ಣ-ತಂಗಿ ನಡುವೆಯೇ ಅಕ್ರಮ ಸಂಬಂಧ, ಅಡ್ಡಿಬಂದ ತಾಯಿಯನ್ನೇ ಕೊಂದ ಕಾಮುಕರು!

ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

Sign in to your account
Please enter an answer in digits:two × 1 =
Remember me
