ಬೆಂಗಳೂರು:ಹಿಜಾಬ್​ ವಿವಾದದ ಬಳಿಕ ಶುರವಾದ ವ್ಯಾಪಾರ ಸಂಘರ್ಷ, ಹಲಾಲ್​, ಜಟ್ಕಾ ಕಟ್​ ವರೆಗೂ ಮುಂದುವರಿದಿತ್ತು. ಇದೀಗ ಆಜಾನ್​ಗೂ ವ್ಯಾಪಿಸಿದೆ. ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಇಷ್ಟು ವರ್ಷ ಇಲ್ಲದೇ ಇರುವ ಧ್ವನಿವರ್ಧಕ ವಿವಾದ ಈಗೇಕೆ? ಇದು ಕರ್ನಾಟಕ. ಉತ್ತರ ಪ್ರದೇಶವಲ್ಲ. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳಿದ್ದರು. ಹೀಗೆ ಮಾಡಿದರೆ ಬಿಜೆಪಿ ಮುಕ್ತವಾಗಲಿದೆ ಎಂದು ಟಾಂಗ್ ಕೊಟ್ಟರು.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಎಚ್​ಡಿಕೆ, ಇತ್ತೀಚಿಗೆ ಒಂದಲ್ಲ ಒಂದು ವಿವಾದ ಸೃಷ್ಟಿಯಾಗುತ್ತಲೇ ಇದೆ. ಬಿಜೆಪಿಯು ಸಮಾಜದ ಸಾಮರಸ್ಯ ಕೆಡಿಸಲಿದೆ ಎಂದು ಈ ಹಿಂದೆಯೇ ಹೇಳಿದ್ದೆ. ಅದೀಗ ಪ್ರಾರಂಭವಾಗಿದೆ. ನಾನು ಬಿಜೆಪಿ ವಿರುದ್ಧ ಸೆಟೆದು ನಿಂತಿರುವುದು ಜನರ ರಕ್ಷಣೆಗಾಗಿ ಅಷ್ಟೇ. ಯಾರನ್ನೂ ಮೆಚ್ಚಿಸಲು ಅಲ್ಲ. ಇಷ್ಟೆಲ್ಲಾ ಆದರೂ ಸರ್ಕಾರ ಜಾಣ ಕಿವುಡಾಗಿದೆ. ಬಿಜೆಪಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ಚಿತ್ರನಟ ಚೇತನ್​ರ ಒಂದು ಹೇಳಿಕೆಗೆ ಅವರನ್ನು ಜೈಲಿಗೆ ಹಾಕಿದರು. ಕಾಂಗ್ರೆಸ್​ನವರು ಏನು‌ ಮಾಡುತ್ತಿದ್ದಾರೆ? ಎಂದು ಕೆಣಕಿದರು.
ಶ್ರೀಲಂಕಾದಲ್ಲಿನ ಹಾಹಾಕಾರ ನಮಗೂ ಬರಲಿದೆ. ಸಾಲ ಮಾಡೋದು, ಲೂಟಿ ಹೊಡೆಯೋದು ನಡೆಯುತ್ತಿದೆ. ನನ್ನ ಸರ್ಕಾರವನ್ನ ಬೀಳಿಸಿದಾಗಲೂ ಆಕ್ರೋಶ ಹೊರ ಹಾಕಲಿಲ್ಲ. ಆಗಲೂ ಸೌಮ್ಯವಾಗಿದ್ದೆ. ಈ ಸರ್ಕಾರಕ್ಕೆ ಪಾಪದ‌ ಕೊಡ ತುಂಬಿದೆ. ಇನ್ಮುಂದೆ ಹೋರಾಟ ಮಾಡುತ್ತೇವೆ. ಜನರನ್ನ ಉದ್ಧಾರ ಮಾಡೋರು ಬಿಜೆಪಿಯವರಾ? ನಾನೇನು ಸಮಾಜ ಬದಲಾವಣೆಯ ಪರಿವರ್ತಕನಲ್ಲ. ನಾನು ವೋಟ್ ಬ್ಯಾಂಕ್​ಗಾಗಿ ಮಾತನಾಡುತ್ತಿಲ್ಲ. ಎಲ್ಲಿ ಅನ್ಯಾಯ ಆಗಲಿದೆಯೋ ಅಲ್ಲಿ ಧ್ವನಿ ಎತ್ತುತ್ತೇನೆ. ನಾನು ಬೆಂದ ಮನೆಯಲ್ಲಿ ಗಳ ಹಿರಿಯುವವನಲ್ಲ ಎಂದು ಎಚ್​ಡಿಕೆ ಹರಿಹಾಯ್ದರು.
ಮತ‌ ಪಡೆಯುವ ಸಲುವಾಗಿ ಹಿಂದೂ ಎಂದು ಹೇಳುತ್ತಾರೆ. ಅಧಿಕಾರದ ಸುಪ್ಪತ್ತಿಗೆಗಾಗಿ‌‌ ಕಂದಾಚಾರ ಮಾಡುತ್ತಿರುವವರು ಬಿಜೆಪಿಯವರು. ಕಾಶ್ಮೀರ್ ಫೈಲ್ ಸಿನಿಮಾಗೆ ತೆರಿಗೆ ವಿನಾಯಿತಿ‌ ಕೊಟ್ಟಿದ್ದಾರೆ. ಮಂತ್ರಿಗಳ ಕಚೇರಿಯಲ್ಲಿರುವ ಜನರ ಫೈಲ್​ಗಳಿಗೆ ತೆರಿಗೆ ವಿನಾಯಿತಿ ಕೊಡಲಿ. ಜನರ ಜತೆ ಚೆಲ್ಲಾಟ ಆಡುವುದನ್ನ ನಿಲ್ಲಿಸುವ ಬದಲು ಹಲಾಲ್, ಜಟ್ಕಾ ಹಿಡಿದುಕೊಂಡು ಕುಳಿತಿದ್ದಾರೆ. ವಿಶ್ವ ಹಿಂದೂ ಪರಿಷತ್, ಭಜರಂಗ ದಳದವರು ದೇಶವನ್ನು ಉದ್ಧಾರ ಮಾಡುತ್ತಿದ್ದಾರಾ? ದೇಶದ ನಿಜವಾದ ಉದ್ಧಾರಕ ರೈತರು. ರೈತರು ಕಷ್ಟದಲ್ಲಿರುವಾಗ ವಿಶ್ವ ಹಿಂದೂ ಪರಿಷತ್, ಭಜರಂಗ ದಳದವರು ಬಂದಿದ್ದಾರಾ? ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಈ ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ. ಆರ್‌ಎಸ್‌ಎಸ್ ರಿಮೋಟ್​ ಕಂಟ್ರೋಲ್​ನಲ್ಲಿ ಸರ್ಕಾರ ನಡೆಯುತ್ತಿದೆ. ಬಿಜೆಪಿಯ ಕುತಂತ್ರ ರಾಜಕಾರಣದ ವಿರುದ್ಧ ಹೋರಾಟ ಆರಂಭಿಸಿದ್ದೇನೆ. ಸ್ವಾಭಿಮಾನ ಇಟ್ಟುಕೊಂಡೇ ಚುನಾವಣೆ ಎದುರಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
SSLC ಎಕ್ಸಾಂ ಬರೆಯಲು ಹೋಗುತ್ತಿದ್ದ ವಿದ್ಯಾರ್ಥಿ ಸಾವು: ಬಸ್​ ಇದ್ದಿದ್ರೆ ನನ್ನ ತಮ್ಮ ಸಾಯುತ್ತಿರಲಿಲ್ಲ… ಮನಕಲಕುತ್ತೆ ಅಕ್ಕನ ಗೋಳಾಟ

ಮೇಕೆ ಜೊತೆ ಯುವಕನ ಮದ್ವೆ! ಕುಟುಂಬಸ್ಥರ ಸಮ್ಮುಖದಲ್ಲೇ ತಾಳಿ ಕಟ್ಟಿದ… ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ

‘ನನ್ನಮ್ಮ ಸೂಪರ್​ ಸ್ಟಾರ್​’ ಟ್ರೋಫಿಗೆ ಮುತ್ತಿಟ್ಟ ಮಾಸ್ಟರ್ ಆನಂದ್​ ಪುತ್ರಿ ವಂಶಿಕಾ! ಅಮ್ಮ-ಮಗಳಿಗೆ ಸಿಕ್ಕ ಬಹುಮಾನ ಎಷ್ಟು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × one =
Remember me
