ರಾಮನಗರ:ಮುಂಬರುವ ವಿಧಾನಸಭೆ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರ್ತೀನಿ ಅಂದಿದ್ದು ಚುನಾವಣೆಯಲ್ಲಿ ನಿಲ್ಲೋಕೆ ಅಲ್ಲ ಎಂದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ದೇವೇಗೌಡರ ಕುಟುಂಬಕ್ಕೂ ರಾಮನಗರ ಕ್ಷೇತ್ರಕ್ಕೂ ತಾಯಿ ಮಗುವಿನ ಸಂಬಂಧ ಇದೆ ಎಂದರು.
ರಾಮನಗರದಲ್ಲಿ ಕಾರ್ಯಕರ್ತರೊಂದಿಗೆ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಎಚ್​ಡಿಕೆ, ನನ್ನ ಕಾರ್ಯಕರ್ತರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರು ಜೆಡಿಎಸ್​ ನಾಯಕರು? ಎಂದರು. ಅದಕ್ಕೆ ‘ನಾನೇ ಬರ್ತೀನಿ ನಡೆಯಿರಿ’ ಎಂದೆ. ನಾನೇ ಬರ್ತೀನಿ ನಡೆಯಿರಿ ಅಂದ್ರೆ ಚುನಾವಣೆಗೆ ನಿಲ್ಲಲು ಅಲ್ಲ. ಈ ಹಿಂದೆ ಹೇಗೆ ಚುನಾವಣೆ ನಡೆಸಿದೆ, ಹಾಗೆಯೇ ಈ ಭಾರಿಯೂ ಚುನಾವಣೆ ನಡೆಸಲು ಬರ್ತೀನಿ ಅಂದೆ. 10 ದಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಳ್ಳಿಹಳ್ಳಿಗೆ ಭೇಟಿ ನೀಡಿ ಕಳೆದ ಚುನಾವಣೆಯಲ್ಲಿ ಕೆಲಸ ಮಾಡಿದ್ದೆ. ಅದೇರೀತಿ ಈ ಸಲವೂ ನಾನೇ ನಾಯಕತ್ವ ವಹಿಸಿಕೊಂಡು ಕೆಲಸ ಮಾಡುವೆ ಎಂಬರ್ಥದಲ್ಲಿ ಹೇಳಿದೆ. ‘ನಾನು ಚುನಾವಣೆಗೆ ಬರ್ತೀನಿ’ ಅಂದಿಲ್ಲ, ‘ನಾನೇ ಬರ್ತೀನಿ ನಡೆಯಿರಪ್ಪಾ’ ಅಂತ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಆ ಮೂಲಕ ಎಚ್​ಡಿಕೆ ರಾಮನಗರ ಬಿಟ್ಟು ಹೋಗ್ತಾರಾ? ಎಂಬ ಗೊಂದಲಕ್ಕೆ ತೆರೆ ಎಳೆದರು.
ರಾಮನಗರದ ಜನರು ಮತ್ತು ಕಾರ್ಯಕರ್ತರ ಜತೆ ನನಗಿರುವ ಬಂಧವನ್ನು ನೂರಾರು ಬಾರಿ ಹೇಳಿದ್ದೇನೆ. ದೇವೇಗೌಡರ ಕುಟುಂಬಕ್ಕೂ ರಾಮನಗರ ಕ್ಷೇತ್ರಕ್ಕೂ ತಾಯಿ-ಮಗುವಿನ ಸಂಬಂಧವಿದೆ. ಮಗುವನ್ನು ಬೆಳೆಸಿದ ತಾಯಿಯೇ ಮಗುವಿನ ರಕ್ಷಣೆ ಮಾಡುತ್ತಾಳೆ. ಯಾವುದೇ ಕಾರಣಕ್ಕೂ ಮಗುವಿಗೆ ತೊಂದರೆಯಾಗಲು ಬಿಡಲ್ಲ ಎಂಬ ಅಚಲ ವಿಶ್ವಾಸ ರಾಮನಗರ ಕ್ಷೇತ್ರದ ಮೇಲೆ ನನಗಿದೆ ಎನ್ನುತ್ತಲೇ ಎಚ್​ಡಿಕೆ ಭಾವುಕರಾದರು.
ಯಾವುದೇ ಕಾರಣಕ್ಕೂ ರಾಮನಗರದಲ್ಲಿ ಕಾಂಗ್ರೆಸ್ ಬೇರೂರಲು ಸಾಧ್ಯವಿಲ್ಲ. ಫೆ.24ರಂದು ಅಧಿವೇಶನ ಮುಗಿಯುತ್ತದೆ. ಬಳಿಕ ರಾಮನಗರದ ಪ್ರತಿ ಹಳ್ಳಿಗೂ ಭೇಟಿ ನೀಡುವೆ. ಸ್ಥಳೀಯ ಸಮಸ್ಯೆಗಳು, ಸಣ್ಣಪುಟ್ಟ ಸಮಸ್ಯೆಗಳು ಇರ್ತಾವೆ. ಖುದ್ದಾಗಿ ಜನರ ಬಳಿ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚಿಸುವೆ. ನಾವೇನು ತಪ್ಪು ಮಾಡಿದ್ದೇವಾ? ಜನಕ್ಕೆ ಏನು ಸಮಸ್ಯೆ ಇದೆ ಎಂದು ತಿಳಿದು ಪರಿಹರಿಸಲು ಹೋಗುವೆ ಎಂದರು.
ಅಪ್ಪು ಆಗಮನಕ್ಕಾಗಿ ಕಾಯುತ್ತಿದೆ ಹಿರಿಯ ಜೀವ! ಪುನೀತ್​ ಅಗಲಿರುವ ವಿಷಯವೇ ಗೊತ್ತಿಲ್ಲ… ಮನಕಲಕುತ್ತೆ ಈ ಸ್ಟೋರಿ

ಬೆಂಗಳೂರಲ್ಲಿ ಒಣ ಕೊಂಬೆ ಬಿದ್ದು ಕೋಮಾದಲ್ಲಿದ್ದ ಬಾಲಕಿ ಸಾವು: 702 ದಿನ ಸತತ ಚಿಕಿತ್ಸೆಯ ನಂತರವೂ ಬದುಕಲಿಲ್ಲ…

ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
