ರಾಮನಗರ:ಸುಮ್ಮನೆ ನಾನು ಸಿಎಂ ಸಿಎಂ ಅಂದ್ರೆ ಸಾಲದು, ಡಿ.ಕೆ. ಶಿವಕುಮಾರ್ ಆ ರೀತಿಯಲ್ಲಿ ಆಸೆ ಪಡುವುದು ತಪ್ಪಲ್ಲ, ಅವರು ಮುಖ್ಯಮಂತ್ರಿ ಆದರೆ ಹೇಗೆ ಅಭಿವೃದ್ಧಿ ಮಾಡುತ್ತೇವೆ? ಹಿಂದೆ ಏನು ಮಾಡಿದ್ದೇನೆ? ಅನ್ನೋದನ್ನು ಜನರ ಮುಂದೆ ಹೇಳಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಗೌಡರ ವಿರುದ್ಧ ಸೋತಿಲ್ಲವೇ?:ಕುಮಾರಸ್ವಾಮಿ ಅವರನ್ನೇ ಸೋಲಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದರು. ಇದಕ್ಕೆ ಗರಂ ಆದ ಎಚ್​ಡಿಕೆ, ದೇವೇಗೌಡರ ವಿರುದ್ಧ ಡಿಕೆಶಿ ಎರಡು ಬಾರಿ ಸೋತಿದ್ದಾರೆ. ಇದನ್ನು ಇವರು ಮರೆಯಬಾರದು. ನಾನು ಡಿಕೆಶಿ ವಿರುದ್ಧ ಸೋತಾಗ ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೆ. ಇವರು ಚುನಾವಣೆ ಗೆದ್ದು ಬಂದಿರುವ ಇತಿಹಾಸ ನಮಗೂ ಗೊತ್ತು. ಯಾವ ರೀತಿಯಲ್ಲಿ ಚುನಾವಣೆ ಗೆದ್ದಿದ್ದಾರೆಂದು ಗೊತ್ತಿಲ್ವಾ? ಇವರ ಎಲೆಕ್ಷನ್ ಕುರಿತು ದೊಡ್ಡ ಕಥೆ-ಪುಸ್ತಕವನ್ನೇ ಬರೆಯಬಹುದು. ನಾನು ಕೂಡ ನಾಲ್ಕು ಬಾರಿ ಶಾಸಕ ಮತ್ತು ಎರಡು ಬಾರಿ ಸಂಸದನಾಗಿದ್ದೇನೆ ಎನ್ನುವುದನ್ನು ಮರೆಯಬಾರದು ಎಂದು ಮಾತಿನಲ್ಲೇ ತಿವಿದಿದ್ದಾರೆ.
ಡಿ.ಕೆ. ಶಿವಕುಮಾರ್ ಯಾವ ಟ್ರಂಪ್ ಕಾರ್ಡ್ ಆದರೂ ಬಳಸಲಿ, ಅಂತಿಮವಾಗಿ ಮತದಾರರು ತೀರ್ಮಾನ ಮಾಡುತ್ತಾರೆ. ತಾನೂ ಸಿಎಂ ಆಗಬೇಕೆಂದು ಡಿ.ಕೆ. ಶಿವಕುಮಾರ್ ಆಸೆ ಪಡುವುದು ತಪ್ಪಲ್ಲ ಎಂದು ಕುಮಾರಸ್ವಾಮಿ ಹೇಳಿದರು.
4ನೇ ಸುತ್ತಲ್ಲೂ ರಿಷಿ ಸುನಕ್​ ಗೆಲುವು: ನಾನು ಬ್ರಿಟನ್​ ಪ್ರಧಾನಿಯಾದ್ರೆ ಚೀನಾ ವಿರುದ್ಧ ಕ್ರಮ ಎಂದ ಇನ್ಫಿ ಅಳಿಯ

ಮಗು ಅಳುವ ಶಬ್ದ ಕೇಳಿ ಕಲ್ಯಾಣಿ ಬಳಿ ಬಂದವರಿಗೆ ಕಾದಿತ್ತು ಶಾಕ್​! ಮಗು ಕಣ್ಣೆದುರೇ ಸಾವಿನ ಮನೆಯ ಕದ ತಟ್ಟಿದ ತಾಯಿ

ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
