ಬೆಂಗಳೂರು:2023ಕ್ಕೆ ನಮ್ಮನ್ನು ಬಿಟ್ಟು ಯಾರೂ ಏನೂ ಮಾಡಲು ಆಗುವುದಿಲ್ಲ ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷವೇ ಕಿಂಗ್​ ಮೇಕರ್​ ಎಂದು ಪರೋಕ್ಷವಾಗಿ ಹೇಳಿದರು.
ಜೆ.ಪಿ.ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಬೇರೆ ಪಕ್ಷಗಳಿಂದ ವಲಸೆ ಬರುತ್ತಿದ್ದಾರೆ. ಪಟ್ಟಿಗಳನ್ನು ಇಟ್ಕೊಂಡಿದ್ದೇವೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಹೇಳ್ತಿದ್ದಾರೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಜೆಡಿಎಸ್​ನಿಂದ ಶಾಸಕರು ಬರುತ್ತಿದ್ದಾರೆ ಎಂದಿದ್ದಾರೆ. ಅತ್ತ ಬಿಜೆಪಿ ಅವರು ಕಾಂಗ್ರೆಸ್ ಶಾಸಕರು ತಮ್ಮ ಪಕ್ಷಕ್ಕೆ ಬರುತ್ತಾರೆ ಎನ್ನುತ್ತಿದ್ದಾರೆ. ಜೆಡಿಎಸ್ ಅನ್ನು ಬಿಜೆಪಿ ಬಾಲಂಗೋಚಿ ಅಂದಿದ್ದಾರೆ. ತುಮಕೂರಿನಿಂದ ಜೆಡಿಎಸ್ ಒದ್ದು ಓಡಿಸಿ ಎಂದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರಿಗೂ ನಾನು ಕೇಳ್ತೇನೆ. ಯಾರ್ಯಾರು ಇದ್ದಾರೆ ಅನ್ನೋದನ್ನ ಹೇಳಲಿ. ಯಾರು ಹೋಗಬಹುದೆಂಬ ಮಾಹಿತಿ ನಮಗೂ ಗೊತ್ತಿದೆ. ಅದರಿಂದ ನನಗೇನು‌ ಗಾಬರಿ ಇಲ್ಲ ಎಂದರು.
ನಮ್ಮ ಪಕ್ಷಕ್ಕೂ ಬಿಜೆಪಿ ಮತ್ತು ಕಾಂಗ್ರೆಸ್​ನ ಕೆಲವರು ಅರ್ಜಿ ಹಾಕಿಕೊಂಡಿದ್ದಾರೆ. ಆದರೆ ನಮಗೆ ಬರುವವರು ಸಣ್ಣ ಮುಖಂಡರು ಎಂದರು. ರಮೇಶ್ ಜಾರಕಿಹೊಳಿ 16 ಮಂದಿಯನ್ನು ರೆಡಿ ಮಾಡಿದ್ದೇವೆ ಎಂದಿದ್ದಾರೆ. ಜೆಡಿಎಸ್​ಗೆ ನಾವು ಕೈಹಾಕಲ್ಲ ಎಂದಿದ್ದಾರೆ. ಅಷ್ಟಾದ್ರೂ ಅವರು ನಮಗೆ ಗೌರವ ಕೊಟ್ಟಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಎಚ್​ಡಿಕೆ ಉತ್ತರಿಸಿದರು. ಮುಂದಿನ ಚುನಾವಣೆಗೆ ನಮ್ಮ ಶ್ರಮ ಏನು ಅಂತ ಗೊತ್ತಾಗುತ್ತದೆ. ನಮ್ಮ ಕಾರ್ಯಕರ್ತರು ಕೂಡ ಇದ್ದಾರೆ. ಕರೊನಾ ಕಾರಣ ಇನ್ನೂ ನಾನು ಹೊರಗಡೆ ಬಂದಿಲ್ಲ. ಕರೊನಾ ಕಡಿಮೆ ಆಗಲಿ ಆಗ ನಮ್ಮ ಹೋರಾಟ ಶುರುವಾಗುತ್ತದೆ. ಎಲ್ಲ ಪಕ್ಷಗಳು ಬಾಗಿಲು ತೆಗೆದು ಕೂತಿವೆ. ಇವತ್ತಿನ ರಾಜಕಾರಣದಲ್ಲಿ ನಿಷ್ಠೆ ಎನ್ನುವುದು ಇಲ್ಲ. ನಾನು ಹೊಸ ನಾಯಕತ್ವಕ್ಕೆ ರೆಡಿ‌ ಇದ್ದೇನೆ ಎಂದರು.
ಚಿಂತಾಮಣಿಯಲ್ಲಿ ಅಪ್ಪನನ್ನೇ ಹೊರದಬ್ಬಿದ ಮಗ: ನ್ಯಾಯಾಲಯ ಕೊಟ್ಟ ಈ ತೀರ್ಪಿಗೆ ಜನರ ಬಹುಪರಾಕ್​!

ಒಲ್ಲೆ ಎಂದರೂ ಅಣ್ಣನ ಎದುರೇ ‘ಬಾ.. ಮೊದಲಿನಂತೆ ನನ್ನ ಜತೆಗಿರು ಬಾ..’ ಎಂದು ಸೋದರಿಯನ್ನ ಪೀಡಿಸುತ್ತಿದ್ದ… ನಡೆದೇ ಹೋಯ್ತು ಘೋರ ಕೃತ್ಯ

ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮಾನ್ಸ್​! ತಬ್ಬಿಕೊಂಡು ಮುತ್ತಿಡುತ್ತಿರುವ ವಿಡಿಯೋ ವೈರಲ್​, ಎಚ್​.ಡಿ.ಕೋಟೆಯಲ್ಲಿ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
