ಕೋಲಾರ:ರಾಜ್ಯದ ಖಜಾನೆಯಲ್ಲಿ ಭಾಗ್ಯಲಕ್ಷ್ಮೀ ತುಂಬಿ ತುಳುಕುತ್ತಿದ್ದರೂ, ಚಂಬಲ್​ ಕಣಿವೆ ಡಕಾಯಿತರು ಆಡಳಿತ ನಡೆಸುತ್ತಿರುವುದರಿಂದ ಜನರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಸಂಪತ್ತನ್ನು ಚಂಬಲ್​ ಕಣಿವೆ ಡಕಾಯಿತರ ಕೊಳ್ಳೆ ಹೊಡೆಯುತ್ತಿದ್ದಾರೆ. ಇದನ್ನು ತಡೆಯಲು ಯಾವ ಪ್ರಯತ್ನವೂ ನಡೆಯುತ್ತಿಲ್ಲ. ಸರ್ಕಾರ ಅತ್ತಂತೆ ನಟಿಸಿದರೆ, ವಿರೋಧ ಪಕ್ಷ ಹೊಡೆದಂತೆ ನಟನೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಟೀಕಿಸಿದರು.
ನಗರದ ಜೂನಿಯರ್​ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಎಚ್​ಡಿಕೆ, ಅಭಿವೃದ್ಧಿಗೆ ಹಣದ ಕೊರತೆಯಿಲ್ಲ. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬಿಜೆಪಿಯವರಲ್ಲಿಲ್ಲ. ಬಡವರ ರಕ್ತ ಹೀರುವ ಮೂಲಕ ಸರ್ಕಾರ ಬದುಕಿದೆ. ಶೇ.40 ಕಮಿಷನ್​ ಪಡೆಯುತ್ತಿರುವುದಲ್ಲದೆ, ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ದುರಾಡಳಿತ ವಿರುದ್ಧ ಗಟ್ಟಿ ಧ್ವನಿ ಮಾಡಬೇಕಾದ ಕಾಂಗ್ರೆಸ್​ ಆಡಳಿತಗಾರರೊಂದಿಗೆ ರಾಜಿ ಮಾಡಿಕೊಂಡಂತೆ ಕಾಣುತ್ತಿದೆ. ಲೂಟಿ ತಡೆಗೆ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಸರ್ಕಾರ ಅತ್ತಂತೆ ನಟಿಸಿದರೆ, ವಿರೋಧ ಪಕ್ಷ ಹೊಡೆದಂತೆ ನಟನೆ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಉತ್ತಮ ದಿನಗಳನ್ನು ಕಾಣಬೇಕಾದರೆ 6.5 ಕೋಟಿ ಜನ ಮನಸ್ಸು ಮಾಡಿ ಜಾತ್ಯತೀತ ಜನತಾದಳವನ್ನು ಅಧಿಕಾರಕ್ಕೆ ತರಬೇಕಿದೆ ಎಂದರು.
ಹುಳಿಯಾರು ಠಾಣೆ ಮಹಿಳಾ ಪೇದೆ ಕೊಲೆ: ಸ್ನೇಹಿತನ ಜತೆ ಸೇರಿ ಗಂಡನನ್ನು ಕೊಂದಿದ್ದಳಾ ಅಕ್ಕ? ಡೆತ್​ನೋಟಲ್ಲಿದೆ ಆಘಾತಕಾರಿ ವಿಷ್ಯ…

ಪ್ರಧಾನಿ ಮೋದಿಗೆ ಮೈಸೂರಿನಿಂದ ಬಟ್ಟೆ ಉಡುಗೊರೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
