ರಾಮನಗರ:ಚಿಕ್ಕಮಗಳೂರಿನಲ್ಲಿ ಆಡಿದ ಆಟವನ್ನು ಇಲ್ಲಿ ಆಡಲು ಬಂದ್ರೆ ನಾನು ಬಿಡಲ್ಲ ಎಂದು ರಾಮನಗರ ಎಸ್​ಪಿ ಸಂತೋಷ್​ ಬಾಬು ವಿರುದ್ಧ ಕಿಡಿಕಾರಿದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಪಕ್ಷಾತೀತವಾಗಿ ಕೆಲಸ ಮಾಡಲು ಮುಂದಾಗಿ ಎಂದು ಎಚ್ಚರಿಕೆ ನೀಡಿದರು.
ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿಯಲ್ಲಿ ಜೆಡಿಎಸ್​ ಕಾರ್ಯಕರ್ತ ಪ್ರಸನ್ನ ಎಂಬಾತ ತನ್ನ ಅಂಗಡಿಯಲ್ಲಿ ಮದ್ಯವನ್ನು ಅಕ್ರಮವಾಗಿ ಮಾರುತ್ತಿದ್ದ ಎಂಬ ಆರೋಪದ ಮೇಲೆ ರಾಮನಗರ ಪೊಲೀಸರು ಆತನನ್ನು ಶನಿವಾರ ಬಂಧಿಸಿದ್ದರು. ಖಾಸಗಿ ಕಾರ್ಯಕ್ರಮ ನಿಮಿತ್ತ ರಾಮನಗರಕ್ಕೆ ಭಾನುವಾರ ಬಂದಿದ್ದ ಎಚ್​ಡಿಕೆ ಬಳಿ ಜೆಡಿಎಸ್​ ಕಾರ್ಯಕರ್ತರು ಈ ವಿಚಾರ ಹೇಳಿದರು. ಸ್ಥಳದಲ್ಲೇ ಎಸ್​ಪಿಗೆ ಫೋನ್​ ಮಾಡಿದ ಎಚ್​ಡಿಕೆ,  ನಿಮ್ಮ ಚಿಕ್ಕಮಗಳೂರಿನ ಆಟವನ್ನು ಇಲ್ಲಿ ಆಡೋಕೆ ಬರ್ಬೇಡಿ. 500 ಮದ್ಯದ ಬಾಟಲಿಗಳೊಂದಿಗೆ ಸಿಕ್ಕಿಬಿದ್ದವರನ್ನು ನಿಮ್ಮ ಇಲಾಖೆಯವರೇ ಸ್ಟೇಷನ್​ ಬೇಲ್​ ಮೇಲೆ ಬಿಡುಗಡೆ ಮಾಡುತ್ತಾರೆ. ದುಡಿದು ಹೈರಾಣಾಗಿರುವ ರೈತರ ಕುಡಿಯಲೆಂದು ಹೊಲಗಳಲ್ಲಿ 20 ಬಾಟಲಿಗಳನ್ನು ಇಟ್ಟುಕೊಂಡಿದ್ದರೆ ಅವರನ್ನು ಜೈಲಿಗೆ ಕಳಿಸುತ್ತೀರಾ? ಎಂದು ಪ್ರಶ್ನಿಸಿದರು.
ನನ್ನ ಕ್ಷೇತ್ರದಲ್ಲಿ ಬಂದು ನೀವೇನು ಸೆಕ್ಯೂರಿಟಿ ಕೊಡಬೇಕಿಲ್ಲ. ನೀವು ಪಕ್ಷಾತೀತವಾಗಿ ಕೆಲಸ ಮಾಡಿ. ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಬೇಡಿ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಮಾಡ್ತೇನೆ. ಜೆಡಿಎಸ್​ ಕಾರ್ಯಕರ್ತನನ್ನು ಅರೆಸ್ಟ್​ ಮಾಡ್ತೀರಿ, ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಟೇಷನ್ ಬೇಲ್ ನೀಡಿದ್ದೀರಿ. ಒಬ್ಬರಿಗೊಂದು ನ್ಯಾಯವೇ? ಎಂದು ಎಚ್​ಡಿಕೆ ಸಿಡಿಮಿಡಿಗೊಂಡರು.
ನೀವು ಎಲ್ಲಾ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡೋದನ್ನ ನಿಲ್ಲಿಸಿ. ಆಗ ನಿಮ್ಮನ್ನು ನಾನು ಮೆಚ್ಚುತ್ತೇನೆ. ಜನರಿಗೆ ಒಳ್ಳೆಯದಾಗಬೇಕು ಅಷ್ಟೇ ಎಂದ ಎಚ್​ಡಿಕೆ, ಈ ಜಿಲ್ಲೆಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ. ನಾನು ಅಧಿಕಾರಿಗಳಿಗೆ ಗೌರವ ಕೊಡ್ತೇನೆ, ಪಕ್ಷಾತೀತವಾಗಿ ಕೆಲಸ ಮಾಡದಿದ್ದಲ್ಲಿ ಕನಕಪುರದವರ ತರಹ ಡೈಲಾಗ್ ಹೇಳ್ತೇನೆ ಎಂದರು.
ಪಂಚಾಯಿತಿ ಚುನಾವಣೆ: ಮತದಾನಕ್ಕೂ ಮುನ್ನ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ!

ಪೊಲೀಸರಿಂದಲೇ ಆಟೋ ತಳ್ಳಿಸಿದ ಭೂಪ! ಆಟೋ ಸ್ಟಾರ್ಟ್​ ಮಾಡಲ್ಲ… ಎಂದು ರೋಡಲ್ಲೇ ಚಾಲಕ ಕಿರಿಕ್​

ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರ್ತೀನಿ ಅಂದಿದ್ದು ಚುನಾವಣೆಗೆ ನಿಲ್ಲೋಕಲ್ಲ: ಕುಮಾರಸ್ವಾಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
