ಬೆಂಗಳೂರು:ಮಂಡ್ಯ ಸಂಸದೆ ಸುಮಲತಾ ವಿರುದ್ಧದ ವಾಕ್ಸಮರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ನಿನ್ನೆಯೇ ವಿರಾಮ ಘೋಷಿಸಿದ್ದರೂ ಸುಮಲತಾ ಅಭಿಮಾನಿಗಳು ಹಾಗೂ ಜೆಡಿಎಸ್​ ಕಾರ್ಯಕರ್ತರು ತಮ್ಮ ನಾಯಕರ ಪರ ಜಿದ್ದಾಜಿದ್ದಿಗೆ ಬಿದ್ದವರಂತೆ ಪ್ರತಿಭಟನೆ ನಡೆಯುತ್ತ ಆಕ್ರೋಶ ಹೊರಹಾಕುತ್ತಲೇ ಇದೆ.
ಸುಮಲತಾ ಪರ ಬ್ಯಾಟಿಂಗ್​ ಬೀಸುತ್ತಾ, ಎಚ್​ಡಿಕೆ ವಿರುದ್ಧ ಮಾತಾನಡಿದ್ದನ್ನು ಖಂಡಿಸಿ ಶನಿವಾರ ಬೆಳಗ್ಗೆ ರಾಕ್​ಲೈನ್​ ವೆಂಕಟೇಶ್​ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇಂದು ಅಂಬಿ ಅಭಿಮಾನಿಗಳು ಎಚ್​ಡಿಕೆ ವಿರುದ್ಧ ಕಂಠೀರವ ಸ್ಟುಡಿಯೋ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಅಂಬರೀಶ್ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ ಅಭಿಮಾನಿಗಳು ಕುಮಾರಸ್ವಾಮಿ ಮತ್ತು ರವೀಂದ್ರ ಶೀಕಂಠಯ್ಯ ವಿರುದ್ಧ ಧಿಕ್ಕಾರ ಕೂಗಿದರು.
ಇನ್ನು ಇದೇ ವೇಳೆ ಜೆಡಿಎಸ್ ಕಾರ್ಯಕರ್ತನೊಬ್ಬ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ನಾನು ಅಪ್ಪಟ ಜೆಡಿಎಸ್ ಕಾರ್ಯಕರ್ತ. ರಾಜಕೀಯವಾಗಿ ದೇವೇಗೌಡರ ಮನೆಯವರನ್ನ ಪೂಜಿಸುತ್ತೇನೆ. ಅದೇ ರೀತಿ ಸಿನಿಮಾ ರಂಗದಲ್ಲಿ ಅಂಬಿಯಣ್ಣನ ಅಭಿಮಾನಿ. ಆದ್ರೆ ಕೆಆರ್​ಎಸ್ ಅಕ್ಕಪಕ್ಕ ತೊಂದರೆ ಅಗಿದೆ ಅಂತ ಸುಮಲತಾ ಮೇಡಂ ಹೇಳಿದ್ದಾರೆ. ಮುಂದೆ ಮಂಡ್ಯಕ್ಕೆ ಯಾವುದೇ ತೊಂದರೆ ಆಗಬಾರದು ಅಂತ ಹೇಳಿಕೆ ಕೊಟ್ಟಿರಬಹುದು. ಅವರ ಜತೆಯಲ್ಲಿ ಇರೋರು ಇವರಿಬ್ಬರ ಮಧ್ಯೆ ತಂದಿಟ್ಟು ಬೇಳೆ ಬೇಯಿಸಿಕೊಳ್ಳಲು ಹೋಗಬೇಡಿ. ಸುಮಲತಾರ ಹೇಳಿಕೆ ತಪ್ಪಾಗಿದ್ರೆ ಅವರನ್ನು ಕರೆದು ಕುಮಾರಣ್ಣ ಮಾತನಾಡಬೇಕಿತ್ತು. ಮಾತಿನ ಮೂಲಕ ಸರಿ ಮಾಡಿಕೊಳ್ಳಬಹುದಾಗಿತ್ತು. ಇದು ಜಗಳದ ಮಟ್ಟಕ್ಕೆ ಹೋಗಿದ್ದು ವಿಪರ್ಯಾಸ. ಸದ್ಯ ಜಗಳಕ್ಕೆ ತೆರೆ ಎಳೆದಿದ್ದು ಸಂತೋಷದ ವಿಚಾರ. ನಮಗೆ ಕುಮಾರಣ್ಣ ಹಾಗೂ ಸುಮಲತಾ ಇಬ್ಬರೂ ಒಂದೇ. ಅಭಿಮಾನ ಅಂತ ಬಂದ್ರೆ ನಾವು ಅಂಬರೀಶ್ ಪರ ನಿಲ್ಲುತ್ತೇನೆ ಎಂದರು.
ಭಿಕ್ಷೆ ಬೇಡುತ್ತಿದ್ದ ವೃದ್ಧೆಗೆ ಅಚ್ಛೇ ದಿನ್​! ನೆಲಮಂಗಲ ತಹಸೀಲ್ದಾರ್ ಮಂಜುನಾಥ್​ರ ಕಾರ್ಯಕ್ಕೊಂದು ಸಲಾಂ

ಸಲಿಂಗಕಾಮಕ್ಕೆ ಒಪ್ಪದ ಸರ್ಕಾರಿ ಶಾಲೆ ಶಿಕ್ಷಕನ ಬರ್ಬರ ಹತ್ಯೆ! ಬೆಚ್ಚಿಬೀಳಿಸುತ್ತೆ ಆ ರಾತ್ರಿಯ ಕೃತ್ಯ

ಬೆಟ್ಟದ ಮೇಲಿನ ಆಂಜನೇಯ ದೇವಸ್ಥಾನದಲ್ಲಿ ನಿಧಿಗಾಗಿ ಮಹಿಳೆ ಹತ್ಯೆ: ರಾತ್ರಿಯಿಡೀ ಬೆಟ್ಟದಲ್ಲೇ ಎಸ್​ಪಿ ವಾಸ್ತವ್ಯ

‘ಲೈಂಗಿಕ ಉತ್ಸವ’ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್​ ಫೆಸ್ಟಿವಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 18 =
Remember me
