ಹಾವೇರಿ:ತಂದೆಯ ಹೃದಯಬಡಿತ ನಿಂತಿದ್ದರೂ ಬಾಯಿಗೆ ಬಾಯಿಟ್ಟು ಉಸಿರು ಕೊಡುತ್ತಾ ‘ಅಪ್ಪಾ.. ಏಳಪ್ಪಾ.. ಏಳಪ್ಪಾ…’ ಎನ್ನುತ್ತಿದ್ದ ಮಗ. ‘ನಿಮ್ಮಪ್ಪ ಬದುಕಿದ್ದಾರೋ… ಬೇರೆ ಆಸ್ಪತ್ರೆಗೆ ತಗೊಂಡು ಹೋಗೋಣ… ರೀ ಎದ್ದೇಳ್ರೀ… ಕಣ್ಣುಬಿಡ್ರೀ…’ ಎನ್ನುತ್ತಾ ಗೋಳಾಡುತ್ತಿದ್ದ ಪತ್ನಿ…
ಇಂತಹ ಕರುಣಾಜನಕ ಘಟನೆ ಹಾವೇರಿ ಜಿಲ್ಲಾಸ್ಪತ್ರೆ ಮುಂಭಾಗ ನಿನ್ನೆ(ಬುಧವಾರ) ರಾತ್ರಿ ಸಂಭವಿಸಿದೆ. ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದ ನಾಗಪ್ಪ ಹೊನ್ನಪ್ಪ(65) ಎಂಬುವವರು ನಿನ್ನೆ ರಾತ್ರಿ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನ ಪತ್ನಿ-ಮಗ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ದುರಂತ ಅಂದ್ರೆ ಆಸ್ಪತ್ರೆಗೆ ಬರುವ ಮಾರ್ಗಮಧ್ಯೆ ನಾಗಪ್ಪ ಮೃತಪಟ್ಟಿದ್ದರು. ಪರಿಶೀಲಿಸಿದ ವೈದ್ಯರು ನಾಗಪ್ಪ ಬದುಕಿಲ್ಲ ಎನ್ನುತ್ತಿದ್ದಂತೆ ರೋದಿಸಿದ ತಾಯಿ ಮತ್ತು ಮಗ, ಮೃತದೇಹಕ್ಕೆ ಬಡಿದೆಬ್ಬಿಸಲು ಯತ್ನಿಸಿದರು. ತಂದೆಯ ಹಾರ್ಟ್​ಬೀಟ್ ನಿಂತಿದ್ದರೂ ‘ಏಳಪ್ಪಾ ಏಳಪ್ಪಾ’ ಎಂದು ನರಳಾಡಿದ ಮಗ ರಾಜು ತಂದೆಯ ಶವಕ್ಕೆ ಬಾಯಿಟ್ಟು ಉಸಿರು ನಿಡುತ್ತಿದ್ದ. ‘ನಿಮ್ಮಪ್ಪ ಕಣ್ಣು ಬಿಟ್ಟಿದ್ದ ಬೇರೆ ಆಸ್ಪತ್ರೆಗೆ ತಗೊಂಡು ಹೋಗೋಣ’ ಎಂದು ಪತ್ನಿ ಕರಬಸವ್ವ ಹೊನ್ನತ್ತಿ ಗೋಳಾಡುತ್ತಿದ್ದಳು.

ಜೀವ ಇಲ್ಲದ ದೇಹವನ್ನ ಬದುಕಿಸಲು ತಾಯಿ-ಮಗ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಅಂತಿಮವಾಗಿ ನಾಗಪ್ಪ ಬದುಕಿಲ್ಲ ಎಂಬುದನ್ನ ಅರಿತ ತಾಯಿ-ಮಗ ಶವ ತೆಗೆದುಕೊಂಡು ಹೋದರು.(ವರದಿ:ರಮೇಶ್​ ಬಿ.ಎಚ್​., ದಿಗ್ವಿಜಯ ನ್ಯೂಸ್​)
ಮಹಿಳೆ ಮೃತಪಟ್ಟ ಸಿಟ್ಟಿಂದ ಹಾವು ಕೊಂದ ಕುಟುಂಬಸ್ಥರಿಗೆ ಶಾಕ್​! ತಾಯಿ ಸಾವಿಗೆ ಸೇಡು ತೀರಿಸಿಕೊಂಡ ಹಾವಿನ ಮರಿಗಳು

ಅನುಮಾನಾಸ್ಪದವಾಗಿ ಪತ್ನಿ ಸತ್ತ 5 ದಿನಕ್ಕೆ ಸಾವಿನ ಮನೆಯ ಕದ ತಟ್ಟಿದ ಟೆಕ್ಕಿ! ಕಳೆದ ತಿಂಗಳಷ್ಟೆ ಮದ್ವೆ ಆಗಿದ್ದವರ ಬದುಕಲ್ಲಿ ದುರಂತ

ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + seven =
Remember me
