ಉಡುಪಿ:ಹಲವಾರು ವರ್ಷಗಳಿಂದ ಉಡುಪಿಯಲ್ಲಿ ಮೆಕ್ಯಾನಿಕ್​ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಬಾದಾಮಿ ಮೂಲದ ಯುವಕ ಗುರುವಾರ ಹೃದಯಾಘಾತದಿಂದ ನಿಧನ ಹೊಂದಿದ್ದು, ಮೃತದೇಹ ಪಡೆಯಲು ಬಂದ ಸಂಬಂಧಿಕರು, ಈತನ ಬಾಣಂತಿ ಪತ್ನಿ ಹಾಗೂ 20 ದಿನದ ಮಗುವನ್ನು ತಿರಸ್ಕರಿಸಿ ತೆರಳಿದ ಅಮಾನವೀಯ ಘಟನೆ ನಡೆದಿದೆ.
ಅಯ್ಯಪ್ಪ(28) ಮೃತರು. ಇವರಿಗೆ ಗುರುವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಾದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಅಯ್ಯಪ್ಪ ಎರಡು ವರ್ಷಗಳ ಹಿಂದೆ ಗಂಗಾವತಿ ಮೂಲದ ಯುವತಿಯನ್ನು ಪ್ರೀತಿಸಿದ್ದರು. ವರಿಬ್ಬರ ಮದುವೆಗೆ ಎರಡೂ ಕುಟುಂಬಸ್ಥರಿಂದಲೂ ತೀವ್ರ ವಿರೋಧವಿತ್ತು. ಮನೆಯವರ ವಿರೋಧದ ನಡುವೆಯೂ ಪ್ರೇಮಿಗಳು ಮದ್ವೆಯಾಗಿದ್ದರು. ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. 20 ದಿನದ ಹಿಂದಷ್ಟೇ ಅಯ್ಯಪ್ಪನ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಪ್ರೀತಿಯ ಪ್ರತೀಕವಾಗಿ ಮಗು ಜನಿಸಿದ ಖುಷಿಯಲ್ಲಿದ್ದ ದಂಪತಿ ಬಾಳಲ್ಲಿ ವಿಧಿ ಆಟವಾಡಿಬಿಟ್ಟಿದೆ. ಸುಖ ಜೀವನಕ್ಕೆ ಇನ್ನೇನು ಬೇಕಿಲ್ಲ, ಪತ್ನಿ ಮತ್ತು ಮಗು ಜತೆ ಪ್ರತಿ ಕ್ಷಣವನ್ನೂ ಕಳೆಯಬೇಕು ಅಂದುಕೊಂಡಿದ್ದ ಅಯ್ಯಪ್ಪ ನಿನ್ನೆ ಹೃದಯಾಘಾತಕ್ಕೆ ಬಲಿಯಾದರು.ಗಂಡನ ಅಕಾಲಿಕ ಸಾವಿಂದ ಕಂಗೆಟ್ಟ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. ತಂದೆಯನ್ನ ಕಳೆದುಕೊಂಡ ಇನ್ನೂ ಅರಿಯದ ಹಸುಗೂಸನ್ನ ನೋಡಿದ್ರೆ ಎಂಥವರ ಮನವೂ ಕಲಕುತ್ತೆ. ಇಂತಹ ದಯನೀಯ ಸ್ಥಿತಿಯಲ್ಲೂ ಸೊಸೆ-ಮೊಮ್ಮಗುವನ್ನ ಬಿಟ್ಟು ಅಯ್ಯಪ್ಪ ಮೃತದೇಹವನ್ನ ಕುಟುಂಬಂಸ್ಥರು ತೆಗೆದುಕೊಂಡು ಹೋಗಿದ್ದಾರೆ.
ಅಯ್ಯಪ್ಪ ನಿಧನರಾದ ಸುದ್ದಿಯನ್ನು ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದು, ಮೃತದೇಹವನ್ನು ಸ್ವೀಕರಿಸಲು ಒಪ್ಪಿದ್ದಾರೆ. ಆದರೆ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗುವನ್ನು ಸ್ವೀಕರಿಸಿಲು ನಿರಾಕರಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಅಯ್ಯಪ್ಪ ಅವರ ಹೆಂಡತಿ ಮತ್ತು 20 ದಿನದ ಮಗುವನ್ನು ಸಖಿ ಸೆಂಟರ್​ಗೆ ದಾಖಲಿಸಲಾಗಿದೆ. ಮೃತದೇಹವನ್ನು ಆಂಬುಲೆನ್ಸ್​ ಮೂಲಕ ಬಾದಾಮಿಗೆ ರವಾನಿಸಲಾಗಿದೆ.
ಬಾಣಂತಿಯಾಗಿರುವ ಈಕೆಯ ಔಷಧೋಪಾಚಾರ ಹಾಗೂ ಸೂಕ್ತ ಆರೈಕೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಕೂಡಲೇ ಗಮನ ಹರಿಸಬೇಕು. ಪತ್ನಿ ಮಾನಸಿಕವಾಗಿ ತೀವ್ರ ಅಘಾತಗೊಂಡಿದ್ದಾರೆ. ಹೀಗಾಗಿ ಸಾಂತ್ವನ ಮತ್ತು ಆರೈಕೆಯ ಅಗತ್ಯವಿದೆ. ಈ ಕುಟುಂಬ ಬಾಡಿಗೆ ಮನೆಯಲ್ಲಿ ಇರುವುದರಿಂದ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಿದೆ. ಹೀಗಾಗಿ ಜಿಲ್ಲಾಡಳಿತ ತಾಯಿ-ಮಗು ಬೀದಿ ಪಾಲಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಒತ್ತಾಯಿಸಿದ್ದಾರೆ.
ಅತ್ಯಾಚಾರ ಆರೋಪಿಯನ್ನೇ ಮದ್ವೆಯಾದ ಯುವತಿ! ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್​

ಪರಸ್ತ್ರೀಗಾಗಿ ಕೋಮುಗಲಭೆ ನಾಟಕ! ಶಿವಮೊಗ್ಗ ಪೊಲೀಸರನ್ನೇ ಬೆಚ್ಚಿಬೀಳಿಸಿದ್ದ ಪತ್ರ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 10 =
Remember me
