ಬೆಂಗಳೂರು:ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಇನ್ನೂ 4 ದಿನ ಮುಂದುವರಿಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಜು.18ರಿಂದ ಜು.21ರವರೆಗೆ ಭಾರೀ ಮಳೆ ಬೀಳುವ ಮೂನ್ಸೂಚನೆಯಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಆಗಾಗ್ಗೆ ಚದುರಿದಂತೆ ಸಾಧಾರಣ ಮಳೆ ಸುರಿಯಲಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾನುವಾರ ಸರಾಸರಿ 20 ಸೆಂ.ಮೀ. ಮಳೆ ಬಿದ್ದಿದೆ.
ಶೇ.26 ಹೆಚ್ಚು ಮಳೆ: ಜೂ 1ರಿಂದ ಜು.16ರವರೆಗೆ ರಾಜ್ಯಾದ್ಯಂತ 336 ಮಿ.ಮೀ. ಮಳೆ ಬದಲಾಗಿ 423 ಮಿ.ಮೀ. ಮಳೆಯಾಗಿದ್ದು, ಶೇ.26 ವಾಡಿಕೆಗಿಂತ ಹೆಚ್ಚು ಸುರಿದಿದೆ. ದಕ್ಷಿಣ ಒಳನಾಡಿನಲ್ಲಿ 103 ಮಿ.ಮೀ. ಮಳೆಯಾಗಬೇಕಿತ್ತು. 182 ಮಿ.ಮೀ. ಮಳೆಯಾಗಿದ್ದು, ಶೇ.77 ಹಾಗೂ ಉತ್ತರ ಒಳನಾಡಿನಲ್ಲಿ 158 ಮಿ.ಮೀ. ಮಳೆ ಬದಲಾಗಿ 191 ಮಿ.ಮೀ. ಮಳೆ ಬಿದ್ದಿದ್ದು, ಶೇ.21 ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅದೇ ರೀತಿ, ಮಲೆನಾಡು ಜಿಲ್ಲೆಗಳಲ್ಲಿ 670 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 826 ಮಿ.ಮೀ. ಮಳೆ ಸುರಿದಿದ್ದು, ಶೇ.23 ಹೆಚ್ಚು ಬಿದ್ದಿದೆ. ಕರಾವಳಿ ಜಿಲ್ಲೆಗಳಲ್ಲಿ 1,415 ಮಿ.ಮೀ. ಮಳೆ ಬದಲಾಗಿ 1,689 ಮಿ.ಮೀ. ಮಳೆಯಾಗಿದ್ದು, ಶೇ.10 ಹೆಚ್ಚುವರಿ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
ಬೈಕ್​ ಸ್ಕಿಡ್​ ಆಗಿ ವಿದ್ಯಾರ್ಥಿಗಳಿಬ್ಬರ ಸಾವು: ರಜೆ ಹಿನ್ನೆಲೆ ಮುರುಡೇಶ್ವರಕ್ಕೆ ತೆರಳುವಾಗ ಅವಘಡ

ಶಿವಮೊಗ್ಗದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ತಾಯಿ-ಮಗು ಬಲಿ: ಪ್ರೀತಿಸಿ ಮದ್ವೆಯಾದವಳ ಬಾಳಲ್ಲಿ ದುರಂತ

ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ: ರೊಚ್ಚಿಗೆದ್ದ ಜನರಿಂದ 14 ಶಾಲಾ ಬಸ್​ಗಳಿಗೆ ಬೆಂಕಿ ಇಟ್ಟು ದಾಂಧಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 17 =
Remember me
