ಬೆಂಗಳೂರು:ಮಳೆಯ ಅಬ್ಬರ ಮುಂದುವರಿದಿದ್ದು, ರಾಜಧಾನಿ ಬೆಂಗಳೂರು ನಲುಗಿದ್ದರೆ, ರಾಜ್ಯ ರಾಜಧಾನಿ ಬೆಂಗಳೂರನ್ನೂ ತಲ್ಲಣಗೊಳಿಸಿದೆ.
ರಾಜಧಾನಿಯಲ್ಲಿ ಸೋಮವಾರವಿಡೀ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಉಂಟಾಗುತ್ತಿದ್ದ ಪ್ರವಾಹ ಪರಿಸ್ಥಿತಿ ರಸ್ತೆಗಳಲ್ಲೂ ಕಾಣಿಸಿಕೊಂಡಿದ್ದು, ಹಲವೆಡೆ ಜಲಾವೃತಗೊಂಡಿದೆ. ರೈನ್​ಬೋ ಡ್ರೈವ್​ ಬಡಾವಣೆಗೆ ಜಲದಿಗ್ಭಂಧನವಾಗಿದ್ದು, ಜನ-ಜೀವನ ಅಸ್ತವ್ಯಸ್ತಗೊಂಡಿದೆ.

ಬೊಮ್ಮನಹಳ್ಳಿ ವಲಯದ ಅನುಗ್ರಹ ಬಡಾವಣೆಯ 1ನೇ ಮತ್ತು 2ನೇ ಹಂತದ ರಸ್ತೆಗಳಲ್ಲಿ ಮೂರ್ನಾಲ್ಕು ಅಡಿಗಳಷ್ಟು ನೀರು ನಿಂತಿತ್ತು. ಕೆಂಗೇರಿಯಿಂದ ಮೈಸೂರು ಮಾರ್ಗವಾಗಿ ಹೋಗುವ ವಾಹನಗಳಿಗೆ ರಸ್ತೆ ಸಂಪರ್ಕವೇ ಸ್ಥಗಿತಗೊಂಡಂತಾಗಿತ್ತು. ಬೆಂಗಳೂರು ನಗರ ವ್ಯಾಪ್ತಿಯ ಎಲ್ಲ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ.

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಾರತಹಳ್ಳಿ-ಬೆಳ್ಳಂದೂರಿನಲ್ಲೂ ರಸ್ತೆ ಜಲಾವೃತಗೊಂಡಿದ್ದು, ಕಿಲೋ ಮೀಟರ್​ ವರೆಗೆ ವಾಹನಗಳು ನಿಂತಿವೆ.
ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಹುಬ್ಬಳ್ಳಿ, ಹಾವೇರಿ, ಗದಗ ಜಿಲ್ಲೆಗಳಲ್ಲಿ ವರ್ಷಧಾರೆಗೆ ಜನ-ಜೀವನ ತತ್ತರಿಸಿದೆ. ರಕ್ಕಸ ಮಳೆಗೆ ರಾಮನಗರ ಜಿಲ್ಲೆ ಅಕ್ಷರಶಃ ನಲುಗಿದೆ.
ದಶಕದ ಬಳಿಕ ನೀರಲ್ಲಿ ಮುಳುಗುತ್ತಿದೆ ಕಾರೇಹಳ್ಳಿ ಶ್ರೀ ರಂಗನಾಥಸ್ವಾಮಿ! ಕಣ್ತುಂಬಿಕೊಳ್ಳಲು ಹರಿದು ಬರ್ತಿದೆ ಜನಸಾಗರ

ಒಬ್ಬಳನ್ನೇ ಮದ್ವೆಯಾದ ಇಬ್ಬರು! ಆ.28ರ ರಾತ್ರಿ ಮಾಡಬಾರದ್ದು ಮಾಡಲು ಹೋಗಿ ಸಿಕ್ಕಿಬಿದ್ದ 2ನೇ ಪತಿ

ಸಕ್ಕರೆನಾಡಲ್ಲಿ ಬೆಲ್ಲದ ಗೌರಿ-ಗಣಪತಿ ಮೂರ್ತಿಗಳದ್ದೇ ಸದ್ದು! ಸಿಹಿಯಾದ ಪರಿಸರ ಸ್ನೇಹಿ ಮೂರ್ತಿಗಳಿಗೆ ಡಿಮಾಂಡ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 3 =
Remember me
