ಯಾದಗಿರಿ: ಶಾಲಾ-ಕಾಲೇಜುಗಲ್ಲಿ ಹಿಜಾಬ್​ಗೆ ಅವಕಾಶವಿಲ್ಲ. ಸರ್ಕಾರದ ವಸ್ತ್ರಸಂಹಿತೆ ನೀತಿಯನ್ನು ಪ್ರಶ್ನಿಸುವಂತಿಲ್ಲ. ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೈಕೋರ್ಟ್​ನ ಪೂರ್ಣ ಪೀಠವು ಐತಿಹಾಸಿಕ ತೀರ್ಪು ನೀಡಿದೆ. ತೀರ್ಪು ಪ್ರಕಟ ಆಗುತ್ತಿದ್ದಂತೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬಿಟ್ಟು 35 ಮುಸ್ಲಿಂ ವಿದ್ಯಾರ್ಥಿನಿಯರು ಮನೆಗೆ ವಾಪಸ್​ ಆಗಿದ್ದಾರೆ.
ನಾವು ಮತ್ತು ಪೊಲೀಸರು ಕೋರ್ಟ್ ಆದೇಶ ಪಾಲಿಸಿ ಎಂದು ಎಷ್ಟೇ ಮನ ಒಲಿಸಿದರೂ ವಿದ್ಯಾರ್ಥಿನಿಯರು ನಮ್ಮ ಮಾತು ಕೇಳಲಿಲ್ಲ. ಪರೀಕ್ಷೆಗೆ ಬಂದಾಗ ಹಿಜಾಬ್ ತೆಗೆದು ಕುಳಿತುಕೊಳ್ಳಿ ಎಂದೆವು. ಅದಕ್ಕೆ ಅವರು ಹಿಜಾಬ್ ಹಾಕಿಕೊಂಡೇ ಇರ್ತೀವಿ. ಕೋರ್ಟ್ ಆದೇಶ ಬರುವವರೆಗೂ ಕಾಯ್ತೀವಿ ಅಂದ್ರು. ಕೋರ್ಟ್ ತೀರ್ಪು ಪ್ರಕಟ ಆಗುತ್ತಿದ್ದಂತೆ ಹಿಜಾಬ್ ಬಿಟ್ಟು ತರತಿಗೆ ಬರಲ್ಲ ಎನ್ನುತ್ತಾ ತರಗತಿಯಿಂದ ಹೊರ ಹೋದರು. ಕೆಲ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ. ಒಟ್ಟು 35 ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದ್ದಾರೆ ಎಂದು ಪ್ರಾಂಶುಪಾಲೆ ಶಕುಂತಲಾ ಸ್ಪಷ್ಟಪಡಿಸಿದ್ದಾರೆ.
ಹಾಸನದಲ್ಲೂ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು:ಹಿಜಾಬ್ ಕುರಿತು ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸುತ್ತಿದ್ದಂತೆ ಹಾಸನದಲ್ಲೂ ತರಗತಿ ಬಹಿಷ್ಕರಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹೊರ ನಡೆದಿದ್ದಾರೆ. ಹಾಸನದ ಎಂ.ಜಿ.ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ‌ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲ್ಲ‌ ಎಂದು ಪಟ್ಟು ಹಿಡಿದು ತರಗತಿ ಬಹಿಷ್ಕರಿಸಿದರು. ಪ್ರಾಂಶುಪಾಲರು ಎಷ್ಟೇ ಮನವಿ ಮಾಡಿದರೂ ಕ್ಯಾರೆ ಎನ್ನದೆ ಹೊರ ನಡೆದರು.
ಶಾಲೆಯಲ್ಲಿ ಹಿಜಾಬ್​ ಬ್ಯಾನ್​: ​ಸಮವಸ್ತ್ರ ಆದೇಶ ಎತ್ತಿಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್​

ವಿಚ್ಛೇದನ ಕೇಳಿದ್ದ ಅಪ್ಪ-ಅಮ್ಮನನ್ನು ಜಡ್ಜ್​ ಎದುರೇ ಒಂದುಗೂಡಿಸಿದ ಮಗ! ಶಿವಮೊಗ್ಗದಲ್ಲಿ ಮನಮಿಡಿಯುವ ಘಟನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − two =
Remember me
