ಬೆಂಗಳೂರು:ರಾಜ್ಯದಲ್ಲಿ ಹಿಜಾಬ್​ ವಿವಾದ ತಣ್ಣಗಾಗುತ್ತಿಲ್ಲ. ಗುರುವಾರವೂ ಹಲವೆಡೆ ಹಿಜಾಬ್​ಗಾಗಿ ಆಗ್ರಹಿಸಿ ಕೆಲ ವಿದ್ಯಾರ್ಥಿಗಳು ತರಗತಿ ಬಹಿಸ್ಕರಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ:ಡಿವಿಎಸ್ ಕಾಲೇಜಿನಲ್ಲಿ 20ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದರು. ಸರಸ್ವತಿ ಪೂಜೆ, ಗಣಪತಿ ಹಬ್ಬವನ್ನು ಕಾಲೇಜಿನಲ್ಲಿ ಮಾಡಿದಾಗ ನಮ್ಮ ಮಕ್ಕಳು ಸುಮ್ಮನಿದ್ದರು. ಹಿಜಾಬ್​ ಬೇಡ ಅನ್ನವುದಾದರೆ ಇನ್ಮುಂದೆ ಶಾಲೆಯಲ್ಲಿ ಸರಸ್ವತಿ ಫೋಟೋ ಕೂಡ ಬೇಡ ಎಂದು ಮುಸ್ಲಿಂ ವಿದ್ಯಾರ್ಥಿನಿಯೊಬ್ಬರ ತಾಯಿ ಆಗ್ರಹಿಸಿದರು.
ಉಡುಪಿ:ಎಂಜಿಎಂ ಕಾಲೇಜಿನಲ್ಲಿ ಇಂದು ಪಿಯುಸಿ ವಿದ್ಯಾರ್ಥಿಗಳಿಗೆ ಇಂದು ನಡೆಯಬೇಕಿದ್ದ ಪ್ರಾಕ್ಟಿಕಲ್ ಪರೀಕ್ಷೆಯನ್ನು ಹಿಜಾಬ್ ವಿವಾದದ ಹಿನ್ನೆಲೆ ಮುಂದೂಡಲಾಗಿದೆ.
ಬೆಳಗಾವಿ:ವಿಜಯಾ ಇನ್​ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಮುಸ್ಲಿಂ ಯುವಕರು ಪ್ರಾಚಾರ್ಯರ ವಿರುದ್ಧ ದಿಕ್ಕಾರ ಕೂಗುತ್ತಾ, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದರು. ಈ ವೇಳೆ ಪೋಷಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು 6 ಯುವಕರನ್ನ ವಶಕ್ಕೆ ಪಡೆದರು.
ವಿಜಯಪುರ:ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅನುಮತಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
ದಾವಣಗೆರೆ:ಎವಿಕೆ ಮಹಿಳಾ ಕಾಲೇಜಿನ 42, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 4 ವಿದ್ಯಾರ್ಥಿನಿಯರು, ಹೊನ್ನಾಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ 12, ಹರಿಹರದಲ್ಲಿ 7 ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿ ತರಗತಿಗೆ ಹಾಜರಾಗದೆ ಮನೆಗೆ ವಾಪಸಾದರು.

ಬಳ್ಳಾರಿ:ಹೈಕೋರ್ಟ್​ನ ಮಧ್ಯಂತರ ಆದೇಶ ಧಿಕ್ಕರಿಸಿ ಹಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು‌. ಇದರಿಂದ ಗೊಂದಲ ವಾತಾವರಣ ಉಂಟಾಗಿ ಪೊಲೀಸರು ಹಾಗೂ ಪಾಲಕರು, ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆಯಿತು. ಸರಳ ದೇವಿ ಕಾಲೇಜಿನಲ್ಲಿ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದರು.
ತುಮಕೂರು:ತರಗತಿಯಲ್ಲಿ ಹಿಜಾಬ್‌ ಧರಸಲು ಅವಕಾಶ ಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಬಳಿಕ ಡಿಸಿಗೆ ಮನವಿ ಸಲ್ಲಿಸಿದರು.
ಯಾದಗಿರಿ:ಸರ್ಕಾರಿ ಉರ್ದು ಶಾಲೆಯ ಮುಸ್ಲಿಂ ಮಕ್ಕಳು ತರಗತಿ ಬಹಿಷ್ಕರಿಸಿ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸ್ವಪ್ನ ಮೈದಾನದಲ್ಲಿರುವ ಪಿಯು ಕಾಲೇಜು ವಿದ್ಯಾರ್ಥಿಗಳೂ ತರಗತಿ ಬಹಿಷ್ಕಾರ ಮಾಡಿದರು. ಪ್ರತಿಭಟನೆಗೆ ಮುಂದಾಗಿದ್ದ ವಿದ್ಯಾರ್ಥಿನಿಯರ ಗುಂಪನ್ನು ಪೊಲೀಸರು ಚದುರಿಸಿದರು.
ಧಾರವಾಡ, ದಕ್ಷಿಣಕನ್ನಡ, ಮಂಡ್ಯ ಸೇರದಿಂತೆ ವಿವಿಧೆಡೆ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿ ಮನೆಗೆ ವಾಪಸ್ ಆದರು.
ಬೆಂಗಳೂರಲ್ಲಿ ದುರ್ಘಟನೆ: ತಂದೆಯ ತಿಥಿ ಕಾರ್ಯದ ವೇಳೆ ಮಗಳು ಬೆಂಕಿಗಾಹುತಿ, 6 ಜನರ ಸ್ಥಿತಿ ಗಂಭೀರ

ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

ನೀನೊಳ್ಳೆ ಜಮೀರ್​ ಆಡ್ದಂಗೆ ಆಡ್ತಿಯಲ್ಲೋ… ರೇಣುಕಾಚಾರ್ಯರನ್ನು ಮಾತಲ್ಲೇ ಚಿವುಟಿದ ಬಿಎಸ್​ವೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 16 =
Remember me
