ಬೆಂಗಳೂರು:ಹಿಜಾಬ್​ ಗದ್ದಲ ರಾಜ್ಯದ ಹಲವೆಡೆ ಮಂಗಳವಾರವೂ ಮುಂದುವರಿದೆ. ಹಿಜಾಬ್​ ಧರಿಸಿಯೇ ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗಳಿಗೆ ಬಂದಿದ್ದರು. ಇವರ ಜತೆ ಪಾಲಕರೂ ಆಗಮಿಸಿ, ಹಿಜಾಬ್​ ಧರಿಸಲು ಅವಕಾಶ ಕೊಡಿ ಎಂದು ಶಾಲಾ ಆಡಳಿತ ಮಂಡಳಿಯವರ ಜತೆ ವಾಗ್ವಾದಕ್ಕಿಳಿದ ದೃಶ್ಯ ಕೆಲವೆಡೆ ಕಂಡು ಬಂತು. ಕೆಲವರು ಹಿಜಾಬ್ ತೆಗೆಸಲ್ಲ ಎಂದು ಮಕ್ಕಳನ್ನು ವಾಪಸ್​ ಮನೆಗೆ ಕರೆದೊಯ್ದಿದ್ದಾರೆ. ಇನ್ನು ಕೆಲವೆಡೆ ಮುಸ್ಲಿಂ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲೇ ತರಗತಿಯಲ್ಲಿ ಕುಳಿತು ಪಾಠ ಕೇಳುವ ಮೂಲಕ ಹೈಕೋರ್ಟ್​ ಮಧ್ಯಂತರ ಆದೇಶ ಪಾಲಿಸಿ ಇತರರಿಗೆ ಮಾದರಿಯಾದರು.
ಉಡುಪಿ:ಕಾಪು ಮಲ್ಲಾರು ಉರ್ದು ಸಂಯುಕ್ತ ಪ್ರೌಢಶಾಲೆಯಲ್ಲಿ ಹಿಜಾಬ್ ತೆಗೆದು ಶಾಲೆ ಪ್ರವೇಶಿಸಲು ವಿದ್ಯಾರ್ಥಿಗಳು ನಕಾರ ಮಾಡಿದರು. ಪಾಲಕರಿಂದಲೂ ವಿರೋಧ ವ್ಯಕ್ತವಾಯಿತು. ಕೊನೆಗೆ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಎಸ್​ಎಸ್​ಎಲ್​ಸಿ ಪೂರ್ವ ಸಿದ್ಧತಾ ಪರೀಕ್ಷೆ ಬರೆದರು. ಇವರಿಗಾಗಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಯಿತು.
ಶಿವಮೊಗ್ಗ:ಶಿವಮೊಗ್ಗದ ಕೆಪಿಎಸ್ ಪ್ರೌಢಶಾಲೆಯಲ್ಲಿ ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರಿಬ್ಬರು ತರಗತಿಗೆ ಹಾಜರಾಗದೇ ಮನೆಗೆ ತೆರಳಿದರು.
ಚಿಕ್ಕಮಗಳೂರು:ಅಲ್ಪಸಂಖ್ಯಾತ ಇಲಾಖೆಯ ಮೌಲಾನಾ ಆಜಾದ್ ಇಂದಾವರ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಿಜಾಬ್ ಜಟಾಪಟಿ ಜೋರಾಗಿಯೇ ನಡೆದಿದೆ. ಹಿಜಾಬ್ ತೆಗೆದು ಬರುವಂತೆ ಶಿಕ್ಷಕರು ಸೂಚಿಸಿದ್ದು, ಹಿಜಾಬ್ ತೆಗೆಯಲು 11 ವಿದ್ಯಾರ್ಥಿನಿಯರು ನಿರಾಕರಿಸಿದ್ದಾರೆ. ಇದೇ ವೇಳೆ ಪೋಷಕರು, ಶಿಕ್ಷಕರ ನಡುವೆ ವಾಗ್ವಾದವಾಗಿದ್ದು, ಶಾಲೆಗೆ 2 ದಿನ ರಜೆ ಘೋಷಿಸಲಾಗಿದೆ.
ಗದಗ:ಉರ್ದು ಶಾಲೆ ನಂ.2ರಲ್ಲಿ ಹಿಜಾಬ್ ಧರಿಸಿಯೇ ತರಗತಿಯಲ್ಲಿ ಮಕ್ಕಳು ಕೂತರು. ಮಕ್ಕಳನ್ನು ತರಗತಿಯಿಂದ ಹೊರಗೆ ಕರೆತಂದ ಮಹಿಳೆಯೊಬ್ಬರು, ಶಿಕ್ಷಕರೇ ಹೊರಗೆ ಕಳುಹಿಸಿದರು ಎಂದು ಆರೋಪಿಸಿದರು. ಸ್ಥಳಕ್ಕೆ ಬಂದ ಡಿಡಿಪಿಐ ಮನವಿಗೂ ಪಾಲಕರು ಮತ್ತು ಮಕ್ಕಳು ಸ್ಪಂದಿಸಲಿಲ್ಲ.
ಮಂಡ್ಯ:ಹಿಜಾಬ್​ ಹಾಕಿಸಿಕೊಂಡು ಗೌಸಿಯಾ ಶಾಲೆಗೆ ಕರೆದುಕೊಂಡು ಬಂದ ತಂದೆಯು ಹಿಜಾಬ್​ ತೆಗೆಸಲು ಒಪ್ಪದೆ, ಮಗಳನ್ನು ವಾಪಸ್ ಕರೆದುಕೊಂಡು ಹೋದರು.
ದಾವಣಗೆರೆ:ಹೊನ್ನಾಳಿಯಲ್ಲಿ 50, ಚನ್ನಗಿರಿಯಲ್ಲಿ 30, ನಲ್ಲೂರಿನಲ್ಲಿ 20, ಹರಿಹರದಲ್ಲಿ 23 ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ನಿರಾಕರಿಸಿ ಮನೆಗೆ ವಾಪಸ್ ತೆರಳಿದ್ದಾರೆ.
ಯಾದಗಿರಿ:ಗುರುಮಠಕಲ್‌ನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆಯಿತು.
ತುಮಕೂರು:ನಿಷೇಧಾಜ್ಞೆ ನಡುವೆಯೇ ಎಸ್‌ವಿಎಸ್ ಶಾಲೆ ಮುಂದೆ ಅಲ್ಲಾಹು ಅಕ್ಬರ್ ಘೋಷಣೆ ಎಂದು ಪಾಲಕರು ಘೋಷಣೆ ಕೂಗಿದರು. ಹಿಜಾಬ್ ಧರಿಸಲು ಅವಕಾಶ ಕೋರಿದ ಪಾಲಕರಿಗೆ ಎಚ್ಚರಿಕೆ ನೀಡಿ ಪೊಲೀಸರು ಮನೆಗೆ ಕಳುಹಿಸಿದರು.
ಚಿಕ್ಕಬಳ್ಳಾಪುರ:ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಮನವೊಲಿಕೆ ಬಳಿಕ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾದರು.
ಲೋಕ ರಕ್ಷಿಸುವ ಮಾಯೆ ನಾನು, ನಿಮ್ಮನ್ನು ಕಾಪಾಡುವೆ… ಪ್ರಧಾನಿ ಮೋದಿಗೆ ಶಿಬರೂರು ಕೊಡಮಣಿತ್ತಾಯ ದೈವ ಅಭಯ

ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್​ ಆದೇಶ: ರೈತನಿಗೆ ಪರಿಹಾರ ಕೊಡದೆ ಸತಾಯಿಸುತ್ತಿದ್ದ ಡಿಸಿಗೆ ಶಾಕ್

ಹಾವೇರಿಯಲ್ಲಿ ಭೀಕರ ಅಪಘಾತ: ಜಮೀನಿನಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು, ಕಾರಲ್ಲಿದ್ದ ಶಿಕ್ಷಕ ದುರ್ಮರಣ

ಸೂರಿಲ್ಲದೆ ಅಂಬೇಡ್ಕರ್​ ಭವನದಲ್ಲಿ ತಂಗಿದ್ದೇ ತಪ್ಪಾ? ಬಡ ವೃದ್ಧೆಯ ಪ್ರಾಣ ತೆಗೆದ ಗ್ರಾಪಂ ಸದಸ್ಯನ ಮಗ! ಮೈಸೂರಲ್ಲಿ ಅಮಾನವೀಯ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − four =
Remember me
