ಹಾಸನ:ತರಬೇತಿ ನಿರತ ವೈದ್ಯೆಗೆ ಲಿಫ್ಟ್​ನಲ್ಲಿ ಬಲವಂತವಾಗಿ ಮುತ್ತುಕೊಟ್ಟು ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಹಿಮ್ಸ್ ಆಸ್ಪತ್ರೆಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಪಕ ಡಾ. ಲೋಕೇಶ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಡಾ.ಲೋಕೇಶ್ ಅವರನ್ನ ಅಮಾನತು ಮಾಡಲಾಗಿದೆ.
ಜ.12ರಂದು ಲಿಫ್ಟ್​ನಲ್ಲಿ ತೆರಳುತ್ತಿದ್ದ ತರಬೇತಿ ನಿರತ ವೈದ್ಯೆಗೆ ಡಾ.ಲೋಕೇಶ್​ ಏಕಾಏಕಿ ಮುತ್ತು ಕೊಟ್ಟಿದ್ದಾಗಿ ಸಂತ್ರಸ್ತೆಯು ಹಾಸನ‌ ವೈದ್ಯಕೀಯ ಸಂಸ್ಥೆಗೆ ಜ.14ರಂದು ದೂರು ನೀಡಿದ್ದರು. ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ ಮೂರು ವಾರದೊಳಗೆ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಆರೋಪವನ್ನು ತಳ್ಳಿ ಹಾಕಿರುವ ವೈದ್ಯ ಡಾ.ಲೋಕೇಶ್​, ತನಿಖೆ ನಡೆಯುತ್ತಿದೆ. ನಾನು ನಿರಪರಾಧಿ ಅಂತ ಸಾಬೀತಾಗುತ್ತೆ. ನಾನು ಬೈದೆ ಅಂತ ಎಚ್​ಒಡಿ ಜತೆ ಸೇರಿ ಇಲ್ಲಸಲ್ಲದ ಕತೆ ಕಟ್ಟಿದಾರೆ ಎಂದುವಿಜಯವಾಣಿಗೆ ಪ್ರತಿಕ್ರಿಯಿಸಿದರು.
ಈ ಪ್ರಕರಣದ ತನಿಖಾಧಿಕಾರಿಯೂ ಆದ ಅಪರ ಜಿಲ್ಲಾಧಿಕಾರಿ ಕವಿತಾರಾಜಾರಾಂ ಮಾತನಾಡಿ, ಪಿಜಿ ನರ್ಸಿಂಗ್ ವೈದ್ಯೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಡಾ.ಲೋಕೇಶ್ ಎಂಬುವವರ ವಿರುದ್ಧ ದೂರು ಬಂದಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅವರು ಲೋಕೇಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಆಂತರಿಕ ದೂರು ಮಹಿಳಾ ಸಮಿತಿಯಲ್ಲೂ ತನಿಖೆ ನಡೆಯುತ್ತೆ. ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದ್ದಾರೆ. ಮೂರು ವಾರದೊಳಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದಾರೆ. ತನಿಖೆ ನಡೆಸಿ ವರದಿ ಸಲ್ಲಿಸುತ್ತೇವೆ ಎಂದರು.
ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮಾನ್ಸ್​! ತಬ್ಬಿಕೊಂಡು ಮುತ್ತಿಡುತ್ತಿರುವ ವಿಡಿಯೋ ವೈರಲ್​, ಎಚ್​.ಡಿ.ಕೋಟೆಯಲ್ಲಿ ಘಟನೆ

ಒಲ್ಲೆ ಎಂದರೂ ಅಣ್ಣನ ಎದುರೇ ‘ಬಾ.. ಮೊದಲಿನಂತೆ ನನ್ನ ಜತೆಗಿರು ಬಾ..’ ಎಂದು ಸೋದರಿಯನ್ನ ಪೀಡಿಸುತ್ತಿದ್ದ… ನಡೆದೇ ಹೋಯ್ತು ಘೋರ ಕೃತ್ಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 − one =
Remember me
