ಹುಬ್ಬಳ್ಳಿ:‘ಹಿಂದಿ ಭಾಷೆ’ ಕುರಿತು ಸ್ಯಾಂಡಲ್​ವುಡ್​ ನಟ ಸುದೀಪ್ ಮತ್ತು ಬಾಲಿವುಡ್​ ನಟ ಅಜಯ್​ ದೇವಗನ್​ ನಡುವಿನ ಟ್ವೀಟ್​ ವಾರ್​ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸುದೀಪ್ ಹೇಳಿಕೆ ಪರವಾಗಿ ಸ್ಯಾಂಡಲ್​ವುಡ್ ನಟ-ನಟಿಯರು ಬೆಂಬಲ ವ್ಯಕ್ತಪಡಿಸಿದ್ದು, ಇದೀಗ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸುದೀಪ್​ ಹೇಳಿದ್ದು ಸರಿ ಇದೆ ಎನ್ನುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ನಟ ಸುದೀಪ್ ಹೇಳಿದ್ದು ಸರಿಯಿದೆ. ಭಾಷಾವಾರು ಪ್ರಾಂತ್ಯವಾರು ಆದ್ಮೇಲೆ ಎಲ್ಲವೂ ಮಾತೃಭಾಷೆ ಆಗಿದೆ. ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯೇ ಸಾರ್ವಭೌಮ. ಆಯಾ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ಇರುತ್ತೆ. ಸುದೀಪ್ ಅದನ್ನು ಸರಿಯಾಗಿಯೇ ಹೇಳಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ನಾನು ಯಾರ ಟ್ವೀಟ್​ಗೂ ರಿಪ್ಲೇ ಮಾಡಲು ಸಿದ್ಧವಿಲ್ಲ. ನಮ್ಮ ದೇಶದಲ್ಲಿ ಯಾವ ಭಾಷೆ ಬೇಕು ಅಂತ ಸರ್ಕಾರ ತೀರ್ಮಾನ ಮಾಡಿದೆ. ಕನ್ನಡ ಇದೆ, ತೆಲುಗು ಇದೆ, ಎಲ್ಲ ಭಾಷೆಗಳು ಇವೆ. ನೋಟಿನ ಮೇಲೆ ಎಲ್ಲಾ ಭಾಷೆಗಳು ಇವೆ. ನಮ್ಮ ನೆಲ, ನಮ್ಮ ಭಾಷೆ, ನಮ್ಮ ಜನರನ್ನು ರಕ್ಷಣೆ ಮಾಡಬೇಕಾದ್ದು ನಮ್ಮ ಕೆಲಸ. ಪಾರ್ಲಿಮೆಂಟ್​ನಲ್ಲಿ ಕನ್ನಡದಲ್ಲಿ ಭಾಷಣ ಮಾಡಲು ಅವಕಾಶ ಮಾಡಿಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ.
#SinghamOurRealHero ಹ್ಯಾಶ್​ಟ್ಯಾಗ್ ಟ್ರೆಂಡ್​ ಮಾಡಿ ಟ್ರೋಲ್​​ ಆದ ಅಜಯ್​ ದೇವಗನ್​ ಬೆಂಬಲಿಗರು

Sign in to your account
Please enter an answer in digits:10 + 5 =
Remember me
