ಮಂಗಳೂರು:ಆಟದಲ್ಲಿ ಧರ್ಮವನ್ನು ಎಳೆದು ತಂದ ಬಿಜೆಪಿ ಮುಖಂಡನೊಬ್ಬ ಆಟದ ಮೈದಾನದಿಂದಲೇ ಕ್ರೈಸ್ತ ಯುವಕನನ್ನು ಹೊರ ಕಳಿಸಿದ ಅಮಾನವೀಯ ಘಟನೆ ಸುಳ್ಯದ ಜಯನಗರದಲ್ಲಿ ಸಂಭವಿಸಿದೆ.
ಇಲ್ಲಿನ ಕೊರಗಜ್ಜ ದೇವಸ್ಥಾನಕ್ಕೆ ಸೇರಿದ ಪ್ರದೇಶದಲ್ಲಿ ಹಿಂದೂ ಸ್ನೇಹಿತರೊಂದಿಗೆ ಕ್ರೈಸ್ತ ಯುವಕನೊಬ್ಬ ಕ್ರಿಕೆಟ್ ಆಡುತ್ತಿದ್ದ. ಈ ವೇಳೆ ಆಟವನ್ನು ತಡೆದ ಸ್ಥಳೀಯ ಬಿಜೆಪಿ ಮುಖಂಡ ಪ್ರವೀಣ್, ಚರ್ಚ್, ಮಸೀದಿ ಜಾಗದಲ್ಲಿ ಹಿಂದೂಗಳನ್ನು ಆಡೋಕೆ‌ ಬಿಡ್ತಾರಾ? ಹಿಂದೂಗಳ ಜಾಗದಲ್ಲಿ ಕ್ರೈಸ್ತ ಯುವಕ ಆಡೋದು ಬೇಡ ಎಂದು ಗದರಿಸಿದ್ದಾನೆ. ಶಾಸಕರ ಬಳಿ ಕೇಳಿಯೇ ಈ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾನೆ.
ಈ ವೇಳೆ ಕ್ರೈಸ್ತ ಯುವಕನ ಪರ ನಿಂತ ಹಿಂದೂ ಯುವಕರು, ಆಟದಲ್ಲಿ ಧರ್ಮವಿಲ್ಲ ಎಂದು ಮನವರಿಕೆ ಮಾಡಲು ಯತ್ನಿಸಿದರೂ ಕ್ರೈಸ್ತ ಯುವಕನ ಮೇಲೆ ಬಿಜೆಪಿ ಮುಖಂಡ ಹಲ್ಲೆಗೆ ಯತ್ನಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್​ಪಿಗೆ ದೂರು ಕೊಟ್ಟ ಯುವತಿ!

ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

ಎರಡು ಜರ್ಮನ್​ ಶಫರ್ಡ್​ ನಾಯಿಗಳಿಗೆ ಮರಣದಂಡನೆ! ಈ ತಪ್ಪಿಗೆ ಇಂಥಾ ಘೋರ ಶಿಕ್ಷೆನಾ?

Sign in to your account
Please enter an answer in digits:9 + 12 =
Remember me
