ದಕ್ಷಿಣ ಕನ್ನಡ:ನವೀಕರಣಕ್ಕಾಗಿ ಮಂಗಳೂರು ಹೊರವಲಯದ ದರ್ಗಾವನ್ನು ಕೆಡವಿದಾಗ ಕಳೆದ ತಿಂಗಳು ಹಿಂದು ದೇವಸ್ಥಾನ ಹೋಲುವ ಮಾದರಿ ಪತ್ತೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಹಿಂದೂ ಪರಿಷತ್, ಜಾಗದ ಧಾರ್ಮಿಕ ಮಹತ್ವ ತಿಳಿಯಲು ನಿರ್ಧರಿಸಿದೆ. ಇದಕ್ಕಾಗಿ ತಾಂಬೂಲ ಪಶ್ನೆ ಕೇಳಲು ಸಜ್ಜಾಗಿದೆ. ಇದಕ್ಕಾಗಿ ಮೇ 25ರಂದು ದಿನಾಂಕ ನಿಗದಿ ಮಾಡಲಾಗಿದೆ.
ಗಂಜೀಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಿ ಪೇಟೆಯಲ್ಲಿರುವ ಜುಮಾ ಮಸೀದಿ ಕಟ್ಟಡಕ್ಕೆ ಹೊಂದಿಕೊಂಡ ಅಸ್ಸಯ್ಯಿದ್​ ಅಬ್ದುಲ್ಲಾಹಿಲ್​ ಮದನಿ(ಐ.ಸಿ) ದರ್ಗಾ ಶರೀಫ್​ನಲ್ಲಿ ದೇವಳ ಮಾದರಿ ಪತ್ತೆಯಾಗಿದೆ. ಮಸೀದಿ ಮತ್ತು ದರ್ಗಾವನ್ನು ಹೊಸದಾಗಿ ನಿರ್ಮಿಸುವ ಉದ್ದೇಶದಿಂದ ಕೆಲ ದಿನಗಳ ಹಿಂದೆ ಹಳೆಯ ದರ್ಗಾವನ್ನು ಕೆಡವಿದಾಗ ದೇಗುಲ ಮಾದರಿ ರಚನೆ ಕಂಡುಬಂದಿದೆ. ಒಳಗಡೆ ಗುಡಿ ಕಂಡು ಬಂದಿದ್ದು, ಅದನ್ನು ಕೆಡವದೆ ಹಾಗೆಯೇ ಬಿಡಲಾಗಿದೆ. ಗುಡಿಯ ಕಲಶ, ತೋಮರ, ಕಂಬಗಳಿಗೆ ಯಾವುದೇ ಹಾನಿಯಾಗಿಲ್ಲ. ಬಜ್ಪೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಜಾಗ ಮಸೀದಿಯೋ, ದೇಗುಲವೋ, ಜೈನ ಬಸದಿಯೋ ಎಂಬುದು ಅರಿಯಲು ಹಿಂದೂಪರ ಸಂಘಟನೆಯು ತಾಂಬೂಲ ಪ್ರಶ್ನೆ ಕೇಳಲು ಮುಂದಾಗಿದೆ. ಅಷ್ಟಕ್ಕೂ ಈ ತಾಂಬೂಲ ಪ್ರಶ್ನೆ ಹೇಗೆ ನಡೆಯುತ್ತೆ ಗೊತ್ತಾ?

ಜಾಗದ ಕುರಿತು ಸಮಸ್ಯೆ ಎದುರಾದಾಗ, ಜಾಗದ ಹಿನ್ನೆಲೆ ತಿಳಿಯಲು ದಕ್ಷಿಣ ಕನ್ನಡ ಭಾಗದಲ್ಲಿ ತಾಂಬೂಲ ಪ್ರಶ್ನೆ ಕೇಳುವ ಪದ್ಧತಿ ಇದೆ. ಯಾರು ತಾಂಬೂಲ ಪ್ರಶ್ನೆ ಕೇಳಲು ಕೂರುತ್ತಾರೋ ಅವರಿಗೆ ಒಂದು ಕಟ್ಟು ವೀಳ್ಯದೆಲೆಯಲ್ಲಿ ತರಲು ಹೇಳಲಾಗುತ್ತೆ. ಆ ಕಟ್ಟಿನಲ್ಲಿ 12 ಎಲೆಗಳನ್ನು ತೆಗೆಯಲಾಗುತ್ತೆ. ಆ ಎಲೆಯಲ್ಲಿ ಪೂರ್ವಾಪರ ಮಾಹಿತಿ ಗೊತ್ತಾಗುತ್ತೆ ಅನ್ನೋದು ಧಾರ್ಮಿಕ ನಂಬಿಕೆ. ವೀಳ್ಯದೆಲೆಯಲ್ಲಿ ಒಂದು ಪುರುಷಗುಣ, ಮತ್ತೊಂದು ಸ್ತ್ರೀಗುಣ ಇರುತ್ತೆ. ವೀಳ್ಯದೆಲೆ ಮೇಲಿನ ಚುಕ್ಕೆ, ಪದರಗಳನ್ನು ಗಮನಿಸಿ ಫಲಾಫಲವನ್ನ ಹೇಳಲಾಗುತ್ತೆ. ಪ್ರಶ್ನೆ ಕೇಳುವವರು ಬರುವ ರೀತಿ, ಕೂರುವ ರೀತಿ ಇದೆಲ್ಲವನ್ನೂ ಗಮನಿಸಲಾಗುತ್ತೆ. ಇದರ ಜತೆಗೆ ಕವಡೆ ಹಾಕಲಾಗುತ್ತೆ. ಎರಡರಲ್ಲೂ ಒಂದೇ ಪ್ರಶ್ನೆಯ ಸಾಮ್ಯತೆ ಬರಬೇಕು. ವೀಳ್ಯದೆಲೆ ಒಂದೊಂದು ಭಾಗಕ್ಕೂ ಒಂದೊಂದು ವೈಶಿಷ್ಟ್ಯವಿದೆ.

ದಿಗ್ವಿಜಯ ನ್ಯೂಸ್​ ಜೊತೆ ಮಾತನಾಡಿದ ಜ್ಯೋತಿರ್ವಿಜ್ಞಾನಿಗಳಾದ ಪ್ರಕಾಶ್​ ಅಣ್ಣಮ್ಮಯ್ಯ, ಜ್ಯೋತಿರ್ಗಣಿತ ವಿಶೇಷ ಜ್ಞಾನ ಹೊಂದಿದೆ. ಯಾವುದೇ ಪ್ರಶ್ನೆ ಇಡಬೇಕೆಂದರೆ ಉದ್ದೇಶ ಮತ್ತು ಅದಕ್ಕೊಬ್ಬ ಯಜಮಾನ ಇರಬೇಕು. ವಿಮರ್ಶೆ ಜಾಸ್ತಿ ಆದಾಗ ಉತ್ತರ ಸಿಗಲು 2, 3 10 ದಿನವೇ ಆಗಬಹುದು. ತರುವ ವೀಳ್ಯದೆಲೆ ಕಟ್ಟಿನಲ್ಲಿ ಕೊಳೆತ ಎಲೆ, ಹರಿದ ಎಲೆ ಎಲ್ಲವೂ ಉತ್ತರದಲ್ಲಿ ನಿರ್ಧರವಾಗುತ್ತೆ. ದೈವಿಕ ಶಕ್ತಿ ಇದೆ ಎಂಬುದು ಖಚಿತವಾದ ಬಳಿಕ ಅಷ್ಟಮಂಗಲ ಪ್ರಶ್ನೆ ಕೇಳಬಹುದು ಎಂದರು.
ತಾಂಬೂಲ ಪ್ರಶ್ನೆ ಇಡಲು ಕೇರಳದ ಪೊದುವಾಳ್‌ ಅವರನ್ನು ಕರೆಸಲಾಗುತ್ತಿದೆ. ಇದೇ ಸಮಯದಲ್ಲಿ ಮುಂದಿನ ಹೋರಾಟದ ಬಗ್ಗೆ ಪೂರ್ವಸಿದ್ದತೆ ಸಭೆ ನಡೆದಿದ್ದು, ಸ್ಥಳೀಯ ಶಾಸಕ ಭರತ್ ಶೆಟ್ಟಿ, ವಿ.ಎಚ್.ಪಿ ಮುಖಂಡರ ನೇತೃತ್ವ ವಹಿಸಿದ್ದರು. ಹಿಂದೂ ಸಂಘಟನೆ ಪ್ರಮುಖರು, ಸ್ಥಳೀಯ ಜನ ಪ್ರತಿನಿಧಿಗಳು, ಊರಿನ ಹಿರಿಯರ ಜೊತೆ ಸಭೆ ನಡೆದಿದೆ.
ಮಂಗಳೂರಿನ ದರ್ಗಾದಲ್ಲಿ ದೇವಸ್ಥಾನ ಹೋಲುವ ಮಾದರಿ ಪತ್ತೆ: ಮಸೀದಿ ಹಳೇ ಕಟ್ಟಡ ಕೆಡವಿದಾಗ ಬೆಳಕಿಗೆ

Sign in to your account
Please enter an answer in digits:8 + 3 =
Remember me
