ಬೆಂಗಳೂರು ಗ್ರಾಮಾಂತರ:ನೆಲಮಂಗಲದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗ್ರಾಮಾಂತರ ಶಿಕ್ಷಣ ಇಲಾಖೆ ಆಯೋಜಿಸಿರುವ ಹೋಬಳಿ ಮಟ್ಟದ ಕ್ರೀಡಾಕೂಟದ ಅವ್ಯವಸ್ಥೆ ಇಡೀ ಜಿಲ್ಲಾಡಳಿತವೇ ತಲೆತಗ್ಗಿಸುವಂತೆ ಮಾಡಿದೆ.
500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿರುವ ಈ ಕ್ರೀಡಾಕೂಟದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಬಟ್ಟೆ ಬದಲಿಸಲು ಕನಿಷ್ಠ ವ್ಯವಸ್ಥೆಯೂ ಇಲ್ಲ. ಕ್ರೀಡಾಂಗಣದಲ್ಲಿರುವ ಕೊಠಡಿಗೂ ಬೀಗ ಹಾಕಿದ್ದು, ಕ್ರೀಡಾಂಗಣದ ಮರಗಿಡಗಳ ಮರೆಯಲ್ಲಿ ಬಟ್ಟೆ ಬದಲಿಸುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ತೀವ್ರ ಮುಜುಗರ ಎದುರಿಸುವಂತಾಗಿದೆ.
ನಾಲ್ಕೂ ದಿನಗಳಿಂದ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಕುಡಿವ ನೀರು, ಶೌಚಗೃಹ, ಉಪಹಾರ, ಆಂಬುಲೆನ್ಸ್ ಸೇರಿ ಯಾವುದೇ ಸೌಲಭ್ಯ ಇಲ್ಲವಾಗಿದೆ. ವಿದ್ಯಾರ್ಥಿನಿಯರು ಗುಂಪುಕಟ್ಟಿಕೊಂಡು ಮರಗಿಡಗಳ ಮರೆಯಲ್ಲಿ ಡ್ರಸ್ ಬದಲಿಸುವ ದುಸ್ಥಿತಿ ಎದುರಾಗಿರುವುದು ಹಳ್ಳಹಿಡಿಯುತ್ತಿರುವ ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಅಣಕ ಮಾಡುವಂತಿದೆ.
ಇನ್ಯಾವತ್ತೂ ಮಕ್ಕಳನ್ನು ಕಳಿಸಲ್ಲ:ಹೆಣ್ಣುಮಕ್ಕಳ ಖಾಸಗಿತನಕ್ಕೆ ಬೆಲೆ ಕೊಡದ ಶಿಕ್ಷಣ ಇಲಾಖೆ ದುರ್ವರ್ತನೆಗೆ ಬೇಸತ್ತ ಪಾಲಕರು ಇನ್ಯಾವತ್ತೂ ನಮ್ಮ ಮಕ್ಕಳನ್ನು ಇಂಥ ಕ್ರೀಡಾಕೂಟಗಳಿಗೆ ಕಳುಹಿಸಲ್ಲ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ. ಕೆಲ ಪಾಲಕರು ಈಗಾಗಲೇ ತಮ್ಮ ಮಕ್ಕಳನ್ನು ಕರೆದುಕೊಂಡು ಮನೆಗಳತ್ತ ಹೆಜ್ಜೆ ಹಾಕಿದ್ದಾರೆ. ಇಷ್ಟಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಆಯೋಜಕರು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತಿರುವುದು ವಿಪರ್ಯಾಸ.
ಮಂಗಳೂರಲ್ಲಿ ವಿದ್ಯಾರ್ಥಿಗಳ ಚುಂಬನ ವಿಡಿಯೋ ವೈರಲ್​ ಬೆನ್ನಲ್ಲೇ ಕಾಮಪುರಾಣ ಲೀಕ್​!

ಆರತಕ್ಷತೆ ವೇಳೆ ಕುಸಿದು ಬಿದ್ದು ಮದುಮಗ ಸಾವು! ಹೊಸಪೇಟೆಯಲ್ಲಿ ದುರಂತ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + sixteen =
Remember me
