ಬೆಳಗಾವಿ:ಚನ್ನಪಟ್ಟಣ ತಾಲೂಕಿನ ಕಾಂಗ್ರೆಸ್​ನ ಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದ ನವ್ಯಶ್ರೀ ರಾಮಚಂದ್ರರಾವ್​ ವಿರುದ್ಧ ಹನಿಟ್ರ್ಯಾಪ್ ಪ್ರಕರಣ ದಾಖಲಾಗಿದ್ದು, ಈ ಕುರಿತು ಬೆಳಗಾವಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಬೇಕು ಎಂದುಕೊಂಡಿರುವ ಮಹಾನಾಯಕನೇ ಈ ಪ್ರಕರಣದ ಸೂತ್ರಧಾರಿ. ಒಂದು ಪತ್ರಿಕೆಯೊಂದ ಸಂಪಾದಕರ ಕೈವಾಡವೂ ಇದೆ. ಅವರಿಬ್ಬರ ಮುಖವಾಡವನ್ನ ಕಳಚುತ್ತೇನೆ. ಚನ್ನಪಟ್ಟಣದ ಆ ಮಹಾನಯಕ, ರಾಜಕಾರಣದಲ್ಲಿ ದೆಹಲಿ ಮಟ್ಟದಲ್ಲಿ ಲಿಂಕ್​ ಇಟ್ಟುಕೊಂಡಿದ್ದ ಒಬ್ಬ ಹೆಣ್ಣು ಮಗಳ ಜೀವನ ಹಾಳು ಮಾಡಿದ್ದಾನೆ ಎಂದು ಹೆಸರು ಹೇಳದೆ ಆಕ್ರೋಶ ಹೊರ ಹಾಕಿದರು. ಆತನ ಮುಂದಿನ ರಾಜಕಾರಣಕ್ಕೆ ನನ್ನ ಪ್ರಕರಣವೇ ಮುಳ್ಳಾಗುವಂತೆ ಮಾಡ್ತೇ‌ನೆ ಎಂದು ಸವಾಲು ಹಾಕಿದರು. ಆ ಪತ್ರಿಕಾ ಸಂಪಾದಕನ ವಿರುದ್ಧವೂ ದೂರು‌ ನೀಡ್ತೇನೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ವಿಡಿಯೋ, ಫೋಟೋ ವೈರಲ್ ಮಾಡಿ ಅಪಪ್ರಚಾರ ಮಾಡಲಾಗಿದೆ. ನಾನು ಆ ವೇಳೆ ವಿದೇಶದಲ್ಲಿದ್ದೆ. ಭಾರತಕ್ಕೆ ವಾಪಸ್ ಆಗುತ್ತಿದ್ದಂತೆ ಈ ಘಟನೆಗಳ ಬಗ್ಗೆ ತಿಳಿದಿದ್ದು, ಪರಿಶೀಲನೆ ನಡೆಸಿ ದೂರು ಕೊಡುವಷ್ಟರಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಕುಮಾರ ಟಾಕಳೆ ಅವರೇ ರಾತ್ರೋರಾತ್ರಿ ಎಪಿಎಂಸಿ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ನಾನು ಹನಿಟ್ರ್ಯಾಪ್ ಮಾಡಿದ್ದೇನೆ ಎಂದು ಪ್ರಕರಣ ದಾಖಲಿಸಿದ್ದಾರೆ. ವಾಸ್ತವದಲ್ಲಿ ಅನ್ಯಾಯ ಆಗಿರೋದು ನನಗೆ. ರಾಜಕುಮಾರ ಟಾಕಳೆಯಿಂದ ನನಗೆ ಅನ್ಯಾಯವಾಗಿದೆ. ಇತ್ತಿಚಿಗೆ ಬೆಳಗಾವಿಗೆ ಬಂದು ದೂರು ನೀಡುವ ವೇಳೆ ನನ್ನ ಮೇಲೆ ಬಹಳಷ್ಟು ಒತ್ತಡ ಇತ್ತು. ಈಗಾಗಲೇ ನಾನು 2 ಬಾರಿ ಬೆಳಗಾವಿ ‌ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ವಿವರಿಸಿದರು.
2020ರ ಮೇ ತಿಂಗಳಲ್ಲಿ ಬೆಂಗಳೂರಿನ ಕುಮಾರಕೃಪಾ ಪ್ರವಾಸಿ ಮಂದಿರದ ಹಿಂಬದಿ ಇರುವ ಗಣೇಶ ದೇವಸ್ಥಾನದಲ್ಲಿ ರಾಜಕುಮಾರ ಟಾಕಳೆ ಹಾಗೂ ನಾನು ಮದುವೆಯಾಗಿದ್ದೇವೆ. ಆತ ನನ್ನ ಗಂಡ. ಕುಮಾರಕೃಪಾ ಸರ್ಕಾರಿ ಕಟ್ಟಡವನ್ನು ಟಾಕಳೆ ಯಾವ ರೀತಿ ಬಳಕೆ ಮಾಡಿಕೊಂಡಿದ್ದಾನೆ ಎಂಬುದನ್ನು ನ್ಯಾಯಾಲಯದಲ್ಲಿ ಹೇಳುತ್ತೇನೆ. ಟಾಕಳೆಯಿಂದ ನನಗಾದ ನೋವು-ಅನ್ಯಾಯ ಮತ್ತೊಂದು ಮಹಿಳೆಗೆ ಆಗಬಾರದು. ಮೊದಲನೇ ಪತ್ನಿ ಇದ್ದರೂ 2ನೇ ಮದುವೆಯಾಗಿದ್ದ ಬಗ್ಗೆ, ಮಾವಿನ ತೋಪಿನಲ್ಲಿ ನನ್ನ ಕಿಡ್ನ್ಯಾಪ್ ಮಾಡಿರುವ ಪ್ರಕರಣ, ಸಾರ್ವಜನಿಕ ಜೀವನದಲ್ಲಿ ನನ್ನ ಮಾನ ತಗೆದಿರುವುದು, ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ವೆಬ್​ಸೈಟ್​ಗೆ ಮಾರಾಟ ಮಾಡಿರುವ ಬಗ್ಗೆ, ಆತನ ಬ್ಲ್ಯಾಕ್ ಮೇಲ್ ಬಗ್ಗೆ ದೂರು ದಾಖಲಿಸುತ್ತೇನೆ ಎಂದು ನವ್ಯಶ್ರೀ ತಿಳಿಸಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಹಾಗೂ ರಾಷ್ಟ್ರೀಯ ನಾಯಕರ ಜತೆ ನಾನಿರುವ ಫೋಟೋ ಇಟ್ಟುಕೊಂಡು, ಫೋಟೋ ವೈರಲ್ ಮಾಡಿ ಪಕ್ಷ ಹಾಗೂ ನನ್ನ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ. ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಬೇಕು ಎಂದುಕೊಂಡಿರುವ ಮಹಾನಾಯಕನೇ ಈ ಪ್ರಕರಣದ ಸೂತ್ರಧಾರಿ ಎಂದು ಆಕ್ರೋಶ ಹೊರಹಾಕಿದರು.
ರಾಜಕುಮಾರ ಟಾಕಳೆ ಗ್ರೂಪ್ ಬಿ ನೌಕರ. ಅವನಿಗೆ 50 ಲಕ್ಷ ರೂ. ಕೊಡಲು ಆಗಲ್ಲ‌ ಅಂತ ನನಗೆ ಗೊತ್ತಿದೆ. ನಾನು ಆತನ ಬಳಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದೇನೆ ಎಂಬುದೆಲ್ಲ ಸುಳ್ಳು. ರಾಜಕುಮಾರ ಟಾಕಳೆ ದೊಡ್ಡ ಹೆಣ್ಣು ಬಾಕ. ನಾನು ಅವನಿಗೆ ಸೆಕ್ಸ್‌ಮೇಟ್ ತರಹ ಬೇಕು ಅನ್ನೋದು ರಾಜಕುಮಾರ ಟಾಕಳೆಯ ಉದ್ದೇಶ. ತಿಲಕ್​ರಾಜ್ 13 ವರ್ಷದಿಂದ ನನ್ನ ಕುಟುಂಬದ ಸ್ನೇಹಿತ ಎಂದು ನಿವ್ಯಶ್ರೀ ಹೇಳಿದರು.
ನನಗೆ ದೆಹಲಿಮಟ್ಟದ, ರಾಜ್ಯಮಟ್ಟದ ಕಾಂಗ್ರೆಸ್‌ ನಾಯಕರ ಜತೆ ಸಂಪರ್ಕ ಇರೋದು‌ ನಿಜ. 2023ಕ್ಕೆ ಬೆಳಗಾವಿಯಿಂದ ಚುನಾವಣೆಗೆ ನಿಲ್ಲಬೇಕೆಂದಿದ್ದೆ. ಕಾಂಗ್ರೆಸ್​ನಿಂದ ನನ್ನನ್ನು ಸಸ್ಪೆಂಡ್ ಮಾಡುವ ಲೆಟರ್ ಎಲ್ಲಿದೆ? ನಾನು ಕಾಂಗ್ರೆಸ್‌ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆ. ಯಾವ ಪೋಸ್ಟ್ ಅಂತಾ ಹೇಳಲ್ಲ. ಇದನ್ನು ರಾಜಕೀಯವಾಗಿ ತಿರುಚೋದು‌ ತಪ್ಪು ಎಂದರು.
ಹನಿಟ್ರ್ಯಾಪ್​ ಕೇಸಲ್ಲಿ ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ: ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಈಕೆ ಹಿನ್ನೆಲೆ ಇಲ್ಲಿದೆ

ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ಅಡ್ಡ ಬಂದ ನಾಯಿ: ಬೈಕ್​ ಸವಾರರಿಬ್ಬರ ಸಾವು

ಆಟವಾಡುತ್ತಲೇ ಅಪ್ಪನ ವಾಹನಕ್ಕೆ ಬಲಿಯಾದ ಕಂದಮ್ಮ! ವಾಹನ ರಿವರ್ಸ್​ ತೆಗೆದುಕೊಳ್ಳುವಾಗ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − ten =
Remember me
