ಬೆಂಗಳೂರು:ಹನಿಟ್ರ್ಯಾಪ್​ ಕೇಸ್​ನಲ್ಲಿ ಸ್ಯಾಂಡಲ್​ವುಡ್​ ನಟರೊಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಟ ಯುವರಾಜ್ ಬಂಧಿತ. ‘ಮಿಸ್ಟರ್ ಭೀಮರಾವ್’ ಸಿನಿಮಾ ನಾಯಕ ಯುವರಾಜ್​, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಬ್ಬರಿಗೆ ಇಬ್ಬರು ಯುವತಿಯರ ಹೆಸರಲ್ಲಿ ಚಾಟ್​ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಸಿದ್ದ ಆರೋಪ ಕೇಳಿಬಂದಿದೆ. ಉದ್ಯಮಿ ಕೊಟ್ಟ ದೂರಿನ ಮೇರೆಗೆ ನಟನನ್ನು ಬಂಧಿಸಲಾಗಿದೆ.
ಉದ್ಯಮಿಯೊಬ್ಬರಿಗೆ ಇತ್ತೀಚೆಗೆ ಇಬ್ಬರು ಯುವತಿಯರು ಪರಿಚಯ ಆಗಿದ್ದರು. ಅವರ ಹೆಸರನ್ನು ಬಳಸಿಕೊಂಡು ಉದ್ಯಮಿಗೆ ಯುವರಾಜ್​ ಮೆಸೇಜ್​ ಮಾಡುತ್ತಿದ್ದರಂತೆ. ನಂತರ ಉದ್ಯಮಿಯನ್ನು ಭೇಟಿಯಾಗಿ, ನಾವು ಕ್ರೈಂ ಪೊಲೀಸರು ಎಂದು ಹೇಳಿ ಹೆದರಿಸಿದ್ದರಂತೆ. ಯುವತಿಯರ ಜತೆ ನೀವು ಅಶ್ಲೀಲ ಚಾಟ್ ಮಾಡಿರುವ ಬಗ್ಗೆ ನಿಮ್ಮ ವಿರುದ್ಧ ಕೇಸ್​ ದಾಖಲಾಗಿದೆ. ಈ ಕೇಸನ್ನು ಇಲ್ಲಿಗೆ ಕೈ ಬಿಡಲು ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದರಂತೆ. ಆರಂಭದಲ್ಲಿ ಹೆದರಿದ ಉದ್ಯಮಿ, ಮೊದಲಿಗೆ ಐವತ್ತು ಸಾವಿರ ರೂಪಾಯಿ ಕೊಟ್ಟಿದ್ದರಂತೆ. ಮತ್ತೆ ಬ್ಯಾಂಕ್​ನಲ್ಲಿ ಮೂರು ಲಕ್ಷ ಡ್ರಾ ಮಾಡಿ ಕೊಟ್ಟಿದ್ದರಂತೆ. ಹೀಗೆ ಹಂತ ಹಂತವಾಗಿ ಒಟ್ಟು 14 ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.
ಹೀಗೆ ಪದೇಪದೆ ಹಣ ವಸೂಲಿ ಮಾಡುತ್ತಿದ್ದ ಯುವರಾಜ್​ ಮೇಲೆ ಅನುಮಾನಗೊಂಡ ಉದ್ಯಮಿ, ಇದೀಗ ಹಲಸೂರು ಗೇಟ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
