ಬೆಂಗಳೂರು:ಚನ್ನಪಟ್ಟಣ ತಾಲೂಕಿನ ಕಾಂಗ್ರೆಸ್​ನ ಯುವ ನಾಯಕಿಯಾಗಿ ಗುರಿತಿಸಿಕೊಂಡಿದ್ದ ನವ್ಯಶ್ರೀ ರಾಮಚಂದ್ರರಾವ್​ ಮತ್ತು ಈಕೆಯ ಪ್ರಿಯಕರ ಚನ್ನಪಟ್ಟಣದ ತಿಲಕ್​ ರಾಜ್​ ಹನಿಟ್ರ್ಯಾಪ್ ಪ್ರಕರಣ ದಾಖಲಾಗುತ್ತಿದ್ದಂತೆ, ರಾಜ್ಯ-ರಾಷ್ಟ್ರ ಮಟ್ಟದ ಕಾಂಗ್ರೆಸ್​ ನಾಯಕರೊಂದಿಗೆ ಈಕೆ ತೆಗೆಸಿಕೊಂಡಿದ್ದ ಫೋಟೋಗಳು ವೈರಲ್​ ಆಗಿವೆ. ಇತೆಗೆ ಯಾರೀ ನವ್ಯಶ್ರೀ? ಈಕೆಯ ಹಿನ್ನೆಲೆ ಏನು? ಎಂಬ ಪ್ರಶ್ನೆಯೂ ಮೂಡಿದೆ.
ಚನ್ನಪಟ್ಟಣದ ಮೂಲದ ನವ್ಯಶ್ರೀ ರಾಮಚಂದ್ರರಾವ್, 7 ವರ್ಷಗಳ ಹಿಂದೆ ನವ್ಯಶ್ರೀ ಫೌಂಡೇಷನ್ ಎಂಬ ಹೆಸರಿನಲ್ಲಿ ಸಮಾಜ ಸೇವೆ ಮಾಡುವುದಾಗಿ ಗುರುತಿಸಿಕೊಂಡಿದ್ದಳು. ನವ್ಯಶ್ರೀ ಫೌಂಡೇಷನ್​ಗೆ ಈಕೆಯೇ ಸಂಸ್ಥಾಪಕಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಳು. ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತ ನವ್ಯಶ್ರೀ, ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಳು. ಕಳೆದ ಬಾರಿ ಡಿ.ಕೆ.ಶಿವಕುಮಾರ್ ಇಡಿ ವಶದಲ್ಲಿದ್ದಾಗ ರಾಮನಗರದಲ್ಲಿ ನಡೆದ ಪ್ರತಿಭಟನೆಯ ಮುಂದಾಳತ್ವವನ್ನೂ ನವ್ಯಶ್ರೀ ವಹಿಸಿದ್ದಳು.
ಪ್ರತಿಭಟನೆ ಮುಂದಾಳತ್ವ ವಹಿಸಿಕೊಂಡ ವೇಳೆ ತೆಗೆದ ಫೋಟೋವನ್ನು ನವ್ಯಶ್ರೀ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದಳು.ಇದನ್ನು ನೋಡಿದ ಮಾಜಿ ಸಂಸದೆ ರಮ್ಯಾ, ಗುಡ್ ಜಾಬ್ ಎಂದು ಟ್ವೀಟ್​ ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ಕೆಲವರಿಗೆ ಬಿಸ್ಕತ್​, ಆಹಾರ ವಿತರಿಸಿದದ್ದಳು. ಪ್ರಚಾರಕ್ಕಾಗಿ ಬೇರೆಯವರು ಮಾಡುತ್ತಿದ್ದ ಸಮಾಜ ಸೇವೆಯಲ್ಲೂ ಪೋಸ್​ ನೀಡುತ್ತಿದ್ದಳು. ಕಾಂಗ್ರೆಸ್ ಪಕ್ಷದ ಪ್ರಮುಖ ಸಭೆಗಳಲ್ಲೂ ನವ್ಯಶ್ರೀ ಪಾಲ್ಗೊಳ್ಳುತ್ತಿದ್ದಳು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಹಾಗೂ ಎಂಎಲ್‌ಸಿ ಲಿಂಗಪ್ಪ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದಳು. ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಅವರ ಜತೆಗೋ ಫೋಟೋ ತೆಗೆಸಿಕೊಂಡು ತನ್ನನ್ನು ಕಾಂಗ್ರೆಸ್​ನ ಯುವ ನಾಯಕಿ ಎಂದು ಕ್ಷೇತ್ರದಲ್ಲಿ ಬಿಂಬಿಸಿಕೊಂಡಿದ್ದಳು.(ದಿಗ್ವಿಜಯ ನ್ಯೂಸ್​)
ತಿಲಕ್​ ರಾಜ್​ಗೆ ಈಗಾಗಲೇ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಐದಾರು ವರ್ಷಗಳಿಂದ ನವ್ಯಶ್ರೀ ಜತೆ ಇದ್ದಾನೆ. ಇವರಿಬ್ಬರೂ ಒಟ್ಟಿಗೆ ಸೇರಿಕೊಂಡು ರಾಜಕುಮಾರ್​ ಕಾಟಳೆಯನ್ನ ಗಾಳಕ್ಕೆ ಬೀಳಿಸಿಕೊಂಡು ಹಣ ವಸೂಲಿಗೆ ಯತ್ನಿಸಿದ್ದರು ಎಂಬ ಆರೋಪ ಇದೆ. ಇದೀಗ ನವ್ಯಶ್ರೀ, ರಾಜಕುಮಾರ್​ ಕಾಟಳೆಯೇ ನನ್ನ ಗಂಡ ಎನ್ನುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟಿದ್ದಾಳೆ. ಹಾಗಾದರೆ ತಿಲಕ್​ ರಾಜ್​ಗೂ ಈಕೆಗೂ ಏನು ಸಂಬಂಧ? ಎಂದು ಸ್ಥಳೀಯರಲ್ಲಿ ಗುಸುಗುಸು ಶುರುವಾಗಿದೆ.
ಆತ ನನ್ನ ಗಂಡ… ಹನಿಟ್ರ್ಯಾಪ್​ ಕೇಸ್​ಗೆ ಟ್ವಿಸ್ಟ್​ ಕೊಟ್ಟ ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ!

:https://www.vijayavani.net/a-honeytrap-case-channapattana-navyashri-and-tilak-raj/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 19 =
Remember me
